ಅಮರಕಾಂತ್ : ಪ್ರೇಮಚಂದ್ ಕತೆಗಳ ಆಚೆಗೊಂದು ಕನ್ನಡಿ


ಸಾಮಾಜಿಕ ವಾಸ್ತವವಾದಿ ನೆಲೆಯ ಕಥನದ ಧಾಟಿಗೇ ಒಲಿದಿದ್ದ ಕೆಲವೇ ಕಥೆಗಾರರಲ್ಲಿ ಹಿಂದಿ ಲೇಖಕ ಅಮರಕಾಂತ್ ಕೂಡ ಒಬ್ಬರು. ಒಂದು ಹಂತದ ನಂತರದ ಅವರ ಕತೆಗಳಲ್ಲಿ ನಗರದ ಕ್ರೌರ್ಯದ ಚಿತ್ರಣಗಳು ಸೆರೆಯಾಗಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಅವರ ಜನ್ಮದಿನ ಇಂದು (ಜುಲೈ 1).

“ನಿನ್ನನ್ನು ಹೊಗಳಿ ಬರೆದಿಲ್ಲ ನಾನೇನನ್ನೂ
ಖಾಲಿ ಹಾಳೆಯಷ್ಟೇ ಸುಂದರವಾಗಿರುವೆ ನೀನು”

“ಈ ಸೋಗಿನ ಲೋಕದಲ್ಲಿ ಕಣ್ಣು ನಂಬುವುದೆಲ್ಲ ಸುಳ್ಳು
ಹಾಗಾಗಿ, ಕುರುಡಾಗಿರುವುದೇ ಎಷ್ಟೋ ಮೇಲು”

“ಪ್ರೇಮದಲ್ಲಿ ಬೀಳಲಿಲ್ಲ ನಾನು
ಪ್ರೇಮದಲ್ಲಿ ಬೆಳೆದವನು ನಾನು”

ಹಿಂದಿ ಲೇಖಕ, ತಮ್ಮ ಕಥೆಗಳಿಗಾಗಿಯೇ ಖ್ಯಾತಿಪಡೆದಿರುವ ಅಮರಕಾಂತ್, ಕಾದಂಬರಿಗಳನ್ನು ಬರೆದಿರುವುದು ಮಾತ್ರವಲ್ಲ, ಕಾವ್ಯದ ಮಾಧುರ್ಯವನ್ನೂ ಹರಿಸಿದವರು. ಈ ಮೇಲಿನವು ಅಂಥ ಕೆಲವು ಸ್ಯಾಂಪಲ್‌ಗಳು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಅಮರಕಾಂತ್, ತಮ್ಮ ಕಾದಂಬರಿ”ಇನ್‌ಹಿನ್ ಹತ್ಯಾರೋಂ ಸೇ’ಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ವ್ಯಾಸ ಸಮ್ಮಾನಕ್ಕೆ ಪಾತ್ರರಾದವರು.

ಹಿಂದಿಯಲ್ಲಿ ಪ್ರೇಮಚಂದ್ ಅವರ ಕಥೆಗಳದ್ದೇ ವಿನ್ಯಾಸವೊಂದು ಎಲ್ಲರ ಮನಸ್ಸನ್ನೂ ಆವರಿಸಿದ್ದ ಹೊತ್ತಲ್ಲಿ ಅಮರಕಾಂತ್ ತಮ್ಮ ಕಥೆಗಳನ್ನು ಕಟ್ಟಿದವರು. ನಗರ, ವ್ಯಕ್ತಿ ಮತ್ತು ಗಂಡು-ಹೆಣ್ಣಿನ ಸಂಬಂಧವನ್ನು ಕೇಂದ್ರದಲ್ಲಿಟ್ಟುಕೊಂಡು ಹೊಸ ಕಥೆಗಳು ಬರತೊಡಗಿದ್ದ ಆ ಕಾಲಘಟ್ಟದಲ್ಲೂ ಪ್ರೇಮಚಂದ್ ಅವರ ಸಾಮಾಜಿಕ ವಾಸ್ತವವಾದಿ ನೆಲೆಯ ಕಥನದ ಧಾಟಿಗೇ ಒಲಿದಿದ್ದ ಕೆಲವೇ ಕಥೆಗಾರರಲ್ಲಿ ಅಮರಕಾಂತ್ ಕೂಡ ಒಬ್ಬರು. ಒಂದು ಹಂತದ ನಂತರದ ಅವರ ಕತೆಗಳಲ್ಲಿ ನಗರದ ಕ್ರೌರ್ಯದ ಚಿತ್ರಣಗಳು ಸೆರೆಯಾಗಿವೆ.

ಬದುಕಿನ ಬಹುಕಾಲ ಪತ್ರಕರ್ತರಾಗಿದ್ದ ಅಮರಕಾಂತ್, ಹಲವಾರು ವೃತ್ತಪತ್ರಿಕೆಗಳು ಮತ್ತು ಸಾಹಿತ್ಯಕ ನಿಯತಕಾಲಿಕೆಗಳಿಗಾಗಿ ಕೆಲಸ ಮಾಡಿದರು. 17ನೇ ವಯಸ್ಸಿನಲ್ಲಿದ್ದಾಗ ಅವರು ಕ್ವಿಟ್ ಇಂಡಿಯಾ ಚಳವಳಿಯತ್ತ ಆಕರ್ಷಿತರಾದರು ಅದು ಹೇಗೆ ನಾಯಕರನ್ನು ಮೀರಿಸಿ ಜನರ ಚಳವಳಿಯಾಯಿತು ಎಂಬುದು ಅವರ ಇನ್‌ಹಿನ್ ಹತ್ಯಾರೋಂ ಸೇ ಕಾದಂಬರಿಯಲ್ಲಿ ಚಿತ್ರಿತವಾಗಿದೆ.

ಕಥನಕ್ಕೆ ಒಂದು ವಿಸ್ತೃತ.ಆಯಾಮವನ್ನು ಸಾಮಾಜಿಕ ಮತ್ತು ಮನಃಶಾಸ್ತ್ರೀಯ ನೋಟದ ಸ್ಪರ್ಶದ ಮೂಲಕ ಕೊಟ್ಟವರು ಅಮರಕಾಂತ್. ಅಲ್ಲೊಂದು ಧ್ಯಾನಸ್ಥ ಗುಣ ಬದುಕಿನ ದಿವ್ಯತೆಯನ್ನು ಹುಡುಕುವಲ್ಲಿ ತನ್ಮಯವಾಗಿದ್ದುದು ನಿಜ. ಪ್ರೇಮಚಂದ್ ಅವರ ಸಾಂಪ್ರದಾಯಿಕ ಶೈಲಿಯ ಋಣವುಳಿಸಿಕೊಂಡೇ ತಮ್ಮದೇ ಛಾಪಿನಲ್ಲಿ ನೆಲೆಗೊಳ್ಳುವುದು ಅವರಿಗೆ ಸಾಧ್ಯವಾಯಿತಲ್ಲ, ಅದಕ್ಕೆ ಕಾರಣವಾದದ್ದು ಈ ತೀವ್ರತೆ.

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...