"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ," ಎನ್ನುತ್ತಾರೆ ಡಾ. ದಯಾನಂದ ಮಾನೆ. ಅವರ ʻಡಾ.ಬಿ.ಆರ್. ಅಂಬೇಡ್ಕರರ ಹೋರಾಟದ ಪರಿಕಲ್ಪನೆʼ ಕೃತಿಯಿಂದ ಆಯ್ದ ಲೇಖನ.
"ಅಂಬೇಡ್ಕರ ಅವರ ಸಿದ್ಧಾಂತ ಕೇವಲ ದಲಿತರ ವಿಮೋಚನಾ ಸಿದ್ದಾಂತವಾಗಿರದೆ ಅದು ವಿಶ್ವದ ಶೋಷಿತ ಜನಾಂಗದ ವಿಮೋಚನಾ ಸಿದ್ದಾಂತವಾಗಿದೆ. ಇಂದು ಅಂಬೇಡ್ಕರ ಕೇವಲ ದಲಿತ ಜನಾಂಗದ ನಾಯಕರಾಗಿರದೆ ಇಡೀ ವಿಶ್ವದ ನಾಯಕರಾಗಿದ್ದಾರೆ. ದುರಂತವೆಂದರೆ ಅಂಬೇಡ್ಕರರ ಸಿದ್ದಾಂತಗಳನ್ನು ದಲಿತ ಮತ್ತು ದಲಿತೇತರರು ರಾಜಕಾರಣಿಗಳು ಹಾಗೂ ಆಡಳಿತಗಾರರು ತಮ್ಮ ಅನುಕೂಲಕ್ಕೋಸ್ಕರ ಉಪಯೋಗಿಸಿ ಅವರ ಸಿದ್ಧಾಂತವನ್ನು ತಪ್ಪಾಗಿ ಅರ್ಥೈಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬೆಳೆಯುವ ಪ್ರಯತ್ನ ನಡೆಸಿದ್ದಾರೆ. ಶೋಷಣೆಯ ವಿರುದ್ಧ ಗುಡಿಗಿದ ಅಂಬೇಡ್ಕರ ತಾವೇ ಶೋಷಣೆಗೆ ಒಳಗಾದದ್ದು ಐತಿಹಾಸಿಕ ವಿಪರ್ಯಾಸವಾಗಿದೆ.
ಭಾರತದ ಸಮಸ್ಯೆಗಳ ನಿವಾರಣೆಗೆ ಅಂಬೇಡ್ಕರರ ಸಿದ್ದಾಂತದಲ್ಲಿ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ ಅಂಬೇಡ್ಕರರನ್ನು ಆಳವಾಗಿ ಅಭ್ಯಸಿಸದೆ ಕೇವಲ ಅವರನ್ನು ಉತ್ಸವ ಮೂರ್ತಿಯನ್ನಾಗಿ ಮಾಡಿ ಹಿಂದೂ ಧರ್ಮದ ದೈವಿಕ ಗುಣಗಳನ್ನು ಅವರಲ್ಲಿ ಕಾಣಲು ಜನ ಪ್ರಯತ್ನಿಸುತ್ತಿದ್ದಾರೆ. ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಮಾಜದಲ್ಲಿರುವ ಕಟ್ಟ ಕಡೆಯ ಮನುಷ್ಯನಿಗೆ ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾವಲಂಬನೆ ಹಾಗೂ ರಾಜಕೀಯ ಹಕ್ಕುಗಳನ್ನು ಕಲ್ಪಿಸಿ ಕೊಡುವುದೇ ಅಂಬೇಡ್ಕರರ ಕೊನೆಯ ಆಶಯವಾಗಿತ್ತು. ಅಂಬೇಡ್ಕರ್ ಅವರನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಚದುರಂಗದ ಆಟದಲ್ಲಿ ಉಪಯೋಗಿಸಿಕೊಳ್ಳುತ್ತಿವೆ. ಇದು ಸೋಚನೀಯ ಹಾಗೂ ಖಂಡನೀಯ. ದಲಿತರ ನೋವುಗಳು ಜಾಸ್ತಿಯಾದಂತೆ ಅಂಬೇಡ್ಕರರ ವಿಚಾರಧಾರೆ ಬಹಳಷ್ಟು ಪ್ರಸ್ತುತವಾಗುತ್ತಿದೆ. ಏಕೆಂದರೆ ಅಂಬೇಡ್ಕರ್ ಶೋಷಣೆ, ಅಸ್ಪೃಶ್ಯತೆ ಮತ್ತು ಜಾತಿಗಳಿಲ್ಲದ ಸಮಾಜವನ್ನು ನಿರ್ಮಿಸಲು ಅವಿರತವಾಗಿ ಪ್ರಯತ್ನಿಸಿದ್ದಾರೆ. ಇಂತಹ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಭಾರತೀಯ ನಾಗರಿಕನ್ನು ತನ್ನನ್ನು ತಾನೇ ತೊಡಗಿಸಿಕೊಳ್ಳುವುದರಿಂದ ಅಂಬೇಡ್ಕರರ ಕನಸನ್ನು ನನಸು ಮಾಡಿ ಬಲಾಢ್ಯ ರಾಷ್ಟ್ರವನ್ನು ಕಟ್ಟಲು ಸಹಕಾರಿಯಾಗುತ್ತಾನೆ ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ. "
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
ಅಂಧತ್ವವನ್ನು ಬದುಕಿನ ಹೋರಾಟದ ಮೆಟ್ಟಿಲಾಗಿ ಪರಿವರ್ತಿಸಿಕೊಂಡು ಯಶ ಕಂಡಿರುವ ಸಿದ್ದೇಶ್ ಕೆ ಅವರಿಗೆ ಗೌರವಪೂರ್ವಕ ನಮನಗಳು...
©2025 Book Brahma Private Limited.