ಅಂಬೇಡ್ಕರರಿಗೆ ಸಂವಿಧಾನ ರಚನೆಯ ಗುಮಾಸ್ತ ಗೌರವ: ವಿಷಾದ

Date: 11-12-2019

Location: ಬೆಂಗಳೂರು


’ಡಾ.ಬಿ.ಆರ್‌. ಅಂಬೇಡ್ಕರ್ ಅವರನ್ನು ಸಂವಿಧಾನ ರಚನೆಯ ಗುಮಾಸ್ತರಂತೆ ನೋಡಲಾಗುತ್ತಿದೆ’ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಡಾ. ಬಿ.ಆರ್‌. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್‍ಸ್ ಸಂಸ್ಥೆ ಸಭಾಂಗಣದಲ್ಲಿ, ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ವಿಕಾಸವಾಹಿನಿ ಮತ್ತು ವಿಶ್ವಪಥ ಮಾಸಿಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 'ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಭಾರತ' ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ದೇಶದ ಸಂವಿಧಾನ ರಚಿಸಿದರು. ಆದರೆ, ಅವರನ್ನು ಗೌರವಯುತವಾಗಿ ಪರಿಗಣಿಸುವ ಮನೋಭಾವ ಕಾಣುತ್ತಿಲ್ಲ.ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ ಹಾಗೂ ಅನಿವಾರ್ಯ ಎಂದರು.

ಎಂ.ಕುಮಾರ್ ಅವರ ಪ್ರೇಮಖಡ್ಗ ಮತ್ತು ಸಾಹಿತಿ ಪೂರೀಗಾಲಿ ಮರಡೇಶ ಮೂರ್ತಿ ಅವರ 'ಅನ್ನದ ಕಥೆಗಳು' ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಆದಿವಾಸಿ ಹೋರಾಟಗಾರ್ತಿ ಪಾರ್ವತಿ ಮಚ್ಚೂರು ಹಾಡಿ ಅವರಿಗೆ 'ಕಾಯಕ ಗೌರವ ' ನೀಡಿ ಸನ್ಮಾನಿಸಲಾಯಿತು.

ವಿಶ್ವಮೈತ್ರಿ ಬುದ್ಧ ವಿಹಾರದ ಭಂತೆ ಕಲ್ಯಾಣಸಿರಿ, ಮಸ್ಜಿದ್ ಆಲ್ ಫಿರ್ದೋಸ್ ಧರ್ಮಗುರು ಹಜರತ್ ಮೌಲಾನ ಮೊಹಮ್ಮದ್ ಜಕಾವುಲ್ಲಾ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಭಗವಾನ್ ಬುದ್ಧ ಸಮೂಹ ಶಿಕ್ಷಣ ಸಂಸ್ಥೆಗಳು ಅಧ್ಯಕ್ಷ ಡಾ. ಯಮದೂರು ಸಿದ್ಧರಾಜು, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಜೆ. ಸೋಮಶೇಖರ್, ಡೀಡ್ ಸಂಸ್ಥೆಯ ನಿರ್ದೇಶಕ ಡಾ. ಎಸ್. ಶ್ರೀಕಾಂತ್ ಉಪಸ್ಥಿತರಿದ್ದರು.

 

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...