2019ನೇ ಸಾಲಿನ ‘ಅಮ್ಮ ಪ್ರಶಸ್ತಿ’ ಪ್ರಕಟ

Date: 10-11-2019

Location: ಕಲಬುರಗಿ


ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ 'ಅಮ್ಮ ಪ್ರಶಸ್ತಿ' ಗೆ ಕಾದಂಬರಿಕಾರ, ಪತ್ರಕರ್ತ ಜೋಗಿ (ಗೀರಿಶರಾವ), ಲೇಖಕಿ ಸುಧಾ ಆಡುಕಳ, ವೈಚಾರಿಕ ಲೇಖಕ ಜಿ.ಎನ್.ನಾಗರಾಜ, ಅನುವಾದಕ ಪ್ರಭಾಕರ ಸಾತಖೇಡ, ಕಥೆಗಾರ ಚನ್ನಪ್ಪ ಕಟ್ಟಿ, ಕವಯತ್ರಿ ಭುವನಾ ಹಿರೇಮಠ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಜೋಗಿ ಅವರ 'ಎಲ್' (ಕಾದಂಬರಿ), ಉಡುಪಿಯ ಸುಧಾ ಆಡುಕಳ ಅವರ 'ಬಕುಲದ ಬಾಗಿಲಿನಿಂದ' ( ಲಲಿತ ಪ್ರಬಂಧ), ತುಮಕೂರಿನ ಜಿ.ಎನ್.ನಾಗರಾಜ್ ಅವರ ನಿಜ ರಾಮಾಯಣ ಅನ್ವೇಷಣೆ (ವೈಚಾರಿಕ ಬರಹ), ಕಲಬುರಗಿಯ ಪ್ರಭಾಕರ ಸಾತಖೇಡ ಅವರ 'ಮಾಸ್ತರರ ನೆರಳಾಗಿ' (ಅನುವಾದ) ವಿಜಯಪುರದ ಚನ್ನಪ್ಪ ಕಟ್ಟಿ ಅವರ 'ಏಕತಾರಿ' (ಕಥಾ ಸಂಕಲನ) ಮತ್ತು ಬೆಳಗಾವಿಯ ಭುವನಾ ಹಿರೇಮಠ ಅವರ 'ಟ್ರಯಲ್ ರೂಮಿನ ಅಪ್ಸರೆಯರು' ( ಕವನ ಸಂಕಲನ) ಕೃತಿಗಳನ್ನು 19ನೇ ವರ್ಷದ 'ಅಮ್ಮ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ಇದೇ ನವೆಂಬರ್ 26ರಂದು ಸಂಜೆ 5.30ಕ್ಕೆ ಕಲಬುರಗಿ ಜಿಲ್ಲೆಯ ಸೇಡಮ್ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಲಾಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ 'ಅಮ್ಮ ಪ್ರಶಸ್ತಿ' ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...