ಅಮೃತ ಸೋಮೇಶ್ವರ, ಅಕ್ಕೂರಮಠ ಸೇರಿ ಐವರಿಗೆ ಕ.ಸಾ. ಅಕಾಡೆಮಿ ಗೌರವ ಪ್ರಶಸ್ತಿ

Date: 26-02-2021

Location: ಬೆಂಗಳೂರು


ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ನೀಡುತ್ತಿರುವ 2020 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ ದತ್ತಿ ಬಹುಮಾನಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಪ್ರೊ. ಅಮೃತ ಸೋಮೇಶ್ವರ,‌ ಷಣ್ಮುಖಯ್ಯ ಅಕ್ಕೂರಮಠ, ಡಾ.ಕೆ.ಕೆಂಪೇಗೌಡ, ಡಾ.ಕೆ.ಆರ್‌.ಸಂಧ್ಯಾರೆಡ್ಡಿ, ಅಶೋಕಪುರಂ ಕೆ.ಗೋವಿಂದರಾಜು ಅವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು 50 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ.

10 ಜನ ಸಾಹಿತಿಗಳಿಗೆ 'ಸಾಹಿತ್ಯಶ್ರೀ' ಪ್ರಶಸ್ತಿ: 2020ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಸಾಹಿತಿಗಳಾದ ಪ್ರೇಮಶೇಖರ್‌, ಡಾ.ರಾಜಪ್ಪ ದಳವಾಯಿ, ಬಿ.ಟಿ.ಜಾಹ್ನವಿ, ಪ್ರೊ.ಕಲ್ಯಾಣರಾವ್‌ ಜಿ.ಪಾಟೀಲ್‌, ಡಾ.ಜೆ.ಪಿ.ದೊಡ್ಡಮನಿ, ಡಾ.ಮೃತ್ಯುಂಜಯ ರುಮಾಲೆ, ಡಿ.ವಿ.ಪ್ರಹ್ಲಾದ್‌, ಡಾ.ಎಂ.ಎಸ್‌.ಆಶಾದೇವಿ, ಶಿವಾನಂದ ಕಳವೆ, ವೀಣಾ ಬನ್ನಂಜೆ ಅವರಿಗೆ ಸಂದಿದೆ. ಪ್ರಶಸ್ತಿಯು 25ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ.

2019ನೇ ಸಾಲಿನ ಅತ್ಯುತ್ತಮ ಕೃತಿಗಳಿಗೆ ಬಹುಮಾನ: 2019ರಲ್ಲಿ ಪ್ರಕಟವಾದ ಸಾಹಿತ್ಯ 18 ಪ್ರಕಾರದ ಕೃತಿಗಳಿಗೆ ವರ್ಷದ ಅತ್ಯುತ್ತಮ ಕೃತಿ ಬಹುಮಾನ ನೀಡಲಾಗುತ್ತಿದೆ. ವಸುಧೇಂದ್ರ ಅವರ ಕಾದಂಬರಿ 'ತೇಜೋ ತುಂಗಭದ್ರಾ', ಸತ್ಯಮಂಗಲ ಮಹಾದೇವ ಅವರ ಕವನ ಸಂಕಲನ 'ಪಂಚವರ್ಣದ ಹಂಸ', ಲಕ್ಷ್ಮಣ ಬಾದಾಮಿ ಅವರ 'ಒಂದು ಚಿಟಿಕೆ ಮಣ್ಣು' ಸಣ್ಣಕತೆ, ಉಷಾ ನರಸಿಂಹನ್‌ ಅವರ ನಾಟಕ 'ಕಂಚುಗನ್ನಡಿ', ರಘುನಾಥ ಚ.ಹ. ಅವರ 'ಬೆಳ್ಳಿತೊರೆ' ಲಲಿತ ಪ್ರಬಂಧ ಹಾಗೂ ನವಕವಿಗಳ ಪ್ರಥಮ ಸಂಕಲನ ಪ್ರಕಾರದಲ್ಲಿ ಸುಮಿತ್ ಮೇತ್ರಿ ಅವರ 'ಥಟ್‌ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ' , ಡಿ.ಜಿ. ಮಲ್ಲಿಕಾರ್ಜುನ ಪ್ರವಾಸ ಕಥನ ಯೋರ್ದಾನ್ ಪಿರೆಮಸ್, ಬಿ.ಎಂ. ರೋಹಿಣಿ ಅವರ ಜೀವನ ಚರಿತ್ರೆ- ನಾಗದಂದಿಗೆಯೊಳಗಿಂದ, ಡಾ. ಗುರುಪಾದ ಮರಿಗುದ್ದಿ ಅವರ ಪೊದೆಯಿಂದಿಳಿದ ಎದೆಯ ಹಕ್ಕಿ (ಸಾಹಿತ್ಯ ವಿಮರ್ಶೆ), ವಸುಮತಿ ಉಡುಪ ಅವರ ಅಭಿಜಿತನ ಕತೆಗಳು (ಮಕ್ಕಳ ಸಾಹಿತ್ಯ), ಡಾ. ಕೆ.ಎಸ್. ಪವಿತ್ರ ಅವರ ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು (ವಿಜ್ಞಾನ ಸಾಹಿತ್ಯ), ಡಾ. ಮಹಾಬಲೇಶ್ವರ ರಾವ್ ಅವರ ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು (ಮಾನವಿಕ), ಡಾ. ಚನ್ನಬಸವಯ್ಯ ಹಿರೇಮಠ ಅವರ ಅನಾವರಣ (ಸಂಶೋಧನೆ), ಗೀತಾ ಶೆಣೈ ಅವರ ಕಾಳಿಗಂಗಾ (ಅನುವಾದ-ಭಾರತೀಯ ಭಾಷೆಯಿಂದ ಕನ್ನಡಕ್ಕೆ), ಧರಣೇಂದ್ರ ಕುರಕುರಿ ಅವರ ಜ್ವಾಲಾಮುಖಿ ಪರ್ವ (ಕನ್ನಡದಿಂದ ಭಾರತೀಯ ಭಾಷೆಗೆ), ಸುಧಾ ಆಡುಕಳ ಅವರ ಬಕುಲದ ಬಾಗಿಲಿನಿಂದ (ಅಂಕಣ ಬರಹ), ಪ್ರೊ. ಡಿ.ವಿ. ಪರಶಿವಮೂರ್ತಿ, ಡಿ. ಸಿದ್ಧಗಂಗಯ್ಯ ಅವರ ನೊಳಂಬರ ಶಾಸನಗಳು (ಸಂಕೀರ್ಣ) ಹಾಗೂ ಕಪಿಲ ಪಿ. ಹುಮನಾಬಾದೆ ಅವರ ಹಾಣಾದಿ (ಲೇಖಕ ಮೊದಲ ಸ್ವತಂತ್ರ ಕೃತಿ) ಸೇರಿವೆ. ಪುಸ್ತಕ ಬಹುಮಾನವು 25 ಸಾವಿರ ರೂ. ನಗದು ಒಳಗೊಂಡಿದೆ.

2019ನೇ ಸಾಲಿನ ದತ್ತಿ ಬಹುಮಾನ: 2019ನೇ ವರ್ಷದ ಅಕಾಡೆಮಿಯ 9 ದತ್ತಿ ಬಹುಮಾನಗಳನ್ನೂ ಪ್ರಕಟಿಸಿದ್ದು, ಲೇಖಕರಾದ ಅನುಪಮಾ ಪ್ರಸಾದ್ -ಪಕ್ಕಿ ಹಳ್ಳದ ಹಾದಿಗುಂಟ (ಚದುರಂಗ ದತ್ತಿ ನಿಧಿ) ನೀತಾ ರಾವ್ ‌-ಹತ್ತನೇ ಕ್ಲಾಸಿನ ಹುಡುಗಿಯರು (ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ನಿಧಿ), ಬಿ. ಪ್ರಭಾಕರ ಶಿಶಿಲ-ಬಿಗಸೆ ತುಂಬಾ ಕನಸು (ಸಿಂಪಿ ಲಿಂಗಣ್ಣ ದತ್ತಿ ನಿಧಿ), ಎಂ. ಉಷಾ,-ಕನ್ನಡ ಮ್ಯಾಕ್ ಬೆತ್ ಗಳು (ಪಿ. ಶ್ರೀನಿವಾಸ ದತ್ತಿ ನಿಧಿ), ಜಿ. ಎನ್. ರಂಗನಾಥ ರಾವ್ (ಮಹಾಭಾರತ ಸಂಪುಟ-1,2,3 ಮತ್ತು 4 (ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿ ನಿಧಿ), ಭಾಗ್ಯಜ್ಯೋತಿ ಹಿರೇಮಠ-ಪಾದಗಂಧ (ಮಧುರಚೆನ್ನ ದತ್ತಿ ನಿಧಿ), ಪ್ರಮೋದ್‌ ಮುತಾಲಿಕ್-ಬಿಯಾಂಡ್ ಲೈಫ್ (ಅಮೆರಿಕ ಕನ್ನಡ ದತ್ತಿ ನಿಧಿ), ಮಲ್ಲಿಕಾರ್ಜುನ ಕಡಗೋಳ-ಯಡ್ರಾಮಿ ಸೀಮೆ ಕತೆಗಳು (ಬಿ.ವಿ. ವೀರಭದ್ರಪ್ಪ ದತ್ತಿ ನಿಧಿ) ಲಕ್ಷ್ಮೀಕಾಂತ್ ಪಾಟೀಲ್-ಶ್ರೀ ಪ್ರಸನ್ನ ವೆಂಕಟಾಚಾರ್ಯ ಕೃತ ಶ್ರೀ ಲಕ್ಷ್ಮಿದೇವಿ ಅಪ್ರಕಟಿತ ಸ್ತುತಿ ರತ್ನಗಳು (ಜಲಜಾ ಆಚಾರ್ಯ ಗಂಗೂರ್‍ ದತ್ತಿ ನಿಧಿ) ಅವರ ಕೃತಿಗಳಿಗೆ ದತ್ತಿ ಬಹುಮಾನ ಸಂದಿದೆ.

MORE NEWS

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...