ಅನ್ನದ ಸಮಸ್ಯೆಗೆ ಕನ್ನಡ ಪರಿಹಾರವಾಗಬೇಕಿದೆ: ಬೇಲೂರು ರಘುನಂದನ್

Date: 12-01-2020

Location: ಬೇಲೂರು


ಅನ್ನದ ಸಮಸ್ಯೆಗೆ ಕನ್ನಡ ಪರಿಹಾರವಾಗಬೇಕಿದೆ ಎಂದು ಸಾಹಿತಿ ಬೇಲೂರು ರಘುನಂದನ್ ಅಭಿಪ್ರಾಯಪಟ್ಟರು.

ನಗರದ ಚೆನ್ನಕೇಶವ ಸ್ವಾಮಿ ದೇವಾಲಯದ ಬಳಿ ನಡೆದ ಬೇಲೂರು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನಗಳು ಅನೇಕ ಸಾಧ್ಯತೆಗಳ ಭಾಗವಾಗಬೇಕಿದೆ. ಆಗಲೇ ಕನ್ನಡ-ಕನ್ನಡಿಗರ ಅನ್ನದ ಸಮಸ್ಯೆ ಸೇರಿದಂತೆ ಬಹುತೇಕ ಸಮಸ್ಯೆಗಳಿಗೆ ಪರಿಹಾರವೂ ದೊರಕುತ್ತದೆ ಎಂದರು.

ಕನ್ನಡಿಗರು ಬಹುಸಂಖ್ಯಾತ ನೆಲೆಯಲ್ಲಿ ಜೀವಿಸುತ್ತಿದ್ದು, ಕನ್ನಡವು ಅವರಿಗೆ ಅನ್ನದ ಭಾಷೆಯಾಗದಿದ್ದರೆ, ಉತ್ತರ ನೀಡುವುದು ಪ್ರಜ್ಞಾವಂತರಾದ ನಮ್ಮ ಹೊಣೆಗಾರಿಕೆ. ವಿಜ್ಞಾನ-ತಂತ್ರಜ್ಞಾನ-ಅಂತರ್ಜಾಲ ಹೀಗೆ ವಿನೂತನ ಬದಲವಣೆಯೊಂದಿಗೆ ಬಹು ನೆಲೆಯ ಕನ್ನಡಿಗರು ಅನ್ನದ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕಾಗಿ ಸಾಮೂಹಿಕ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಜಾಗತೀಕರಣ ಫಲವಾಗಿ ಪಠ್ಯವೂ ಸಹ ಸೈದ್ಧಾಂತೀಕರಣವಾಗುತ್ತಿದೆ. ಅದರಲ್ಲಿ ಸೃಜನಶೀಲತೆ ಇಲ್ಲ. ಬಾವಿಯಲ್ಲಿ ನೀರು ಬತ್ತುತ್ತಿದ್ದರೂ ಸುಮ್ಮನೆ ನೋಡುವ ಮನಸ್ಥಿತಿ ಕಂಡು ಬರುತ್ತಿದೆ ಎಂದು ವಿಷಾದಿಸಿದರು.

ಕಾವ್ಯಶೋಧಕರಂತೆ ಗುಣದೋಷಗಳನ್ನು ಕಂಡುಕೊಳ್ಳುತ್ತಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕು. ತಪ್ಪಿದರೆ, ಸಾಹಿತ್ಯದ ಉದ್ದೇಶವನ್ನೇ ಪ್ರಶ್ನಿಸುವಂತಾಗುತ್ತದೆ. ಸಾಹಿತ್ಯ ವಲಯಕ್ಕೂ ಸಾಮಾಜಿಕ ಹೊಣೆಗಾರಿಕೆ ಇದೆ ಎಂಬುದನ್ನು ಮರೆಯುವಂತಿಲ್ಲ ಎಂದರು.

ಸಮ್ಮೇಳನದ ದ್ವೀಪ ಪ್ರಜ್ವಲನೆ ಸಂದರ್ಭದಲ್ಲಿ ನಟ ಮಂಡ್ಯ ರಮೇಶ ಸೇರಿದಂತೆ ಜಿಲ್ಲಾ ಕಸಾಪ ಪದಾಧಿಕಾರಿಗಳು, ಸದಸ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

 

MORE NEWS

ನಾರೇಯಣರ (ಕೈವಾರ ತಾತಯ್ಯ) ಕುರಿತಾದ...

06-07-2020 ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಯೋಗಿ ನಾರೇಯಣರ (ಕೈವಾರ ತಾತಯ್ಯ) ಕುರಿತಾದ ರಾಷ್ಟ ಮಟ್ಟದ...

2020ನೇ ಸಾಲಿನ ಪ್ರಹ್ಲಾದ ಅಗಸನಕಟ್ಟ...

05-07-2020 ಹುಬ್ಬಳ್ಳಿ

2020ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿಯು ಅಜಯ ವರ್ಮಾ ಅಲ್ಲೂರಿ ಅವರ 'ಅಲಮೇಲಮ್ಮ...

ಬಸವರಾಜು ಮೇಗಲಕೇರಿ ಅವರ 'ಅವರಿವರು'...

05-07-2020 ಬೆಂಗಳೂರು

ಲೇಖಕ ಬಸವರಾಜು ಮೇಗಲಕೇರಿ ಅವರ 'ಅವರಿವರು' ಕೃತಿ ಲೋಕಾರ್ಪಣೆ ಕಂಡಿತು. ಕಾಳೇಗೌಡ ನಾಗವಾರ ಅವರು ಕೃತಿ ಬಿಡುಗಡೆ ...

Comments

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events