ಅನುಷ್ ಎ. ಶೆಟ್ಟಿಗೆ 2020ರ ಸೃಜನಶೀಲ ಸಾಹಿತಿ ಪ್ರಶಸ್ತಿ

Date: 12-01-2021

Location: ಬೆಂಗಳೂರು


ಅವ್ವ ಪುಸ್ತಕಾಲಯದಿಂದ ಆಯೋಜಿಸಿದ್ದ '2020ರ ಸೃಜನಶೀಲ ಸಾಹಿತಿ ಪ್ರಶಸ್ತಿ'ಗೆ ಅನುಷ್ ಎ. ಶೆಟ್ಟಿ ‘ನೀನು ನಿನ್ನೊಳಗೆ ಖೈದಿ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 2500 ರೂಗಳ ಪುಸ್ತಕ ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ ಹಾಗೂ ವಿ. ಗೋಪಕುಮಾರ್ ಅವರ ‘ವಿಜಯೀಭವ’ ಅವರ ಕೃತಿಗಳು ಕ್ರಮವಾಗಿ ದ್ವಿತೀಯ & ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದು ಬಹುಮಾನವು 500 ರೂಗಳ ಪುಸ್ತಕವನ್ನು ಒಳಗೊಂಡಿದೆ.

ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಕಾರರ ಹೆಸರು ಹಾಗೂ ಪುಸ್ತಕಗಳು ಈ ಕೆಳಗಿನಂತಿವೆ.

ಬೆಳಕ ಹನಿ - ಜ್ಯೋತಿ ನಾಯ್ಕ
ನಂದಾದೀಪ - ಅನಘಾ ಶಿವರಾಮ್
ದಿಕ್ಸೂಚಿ - ಸಂತೋಷ್ ರಾವ್ ಪೆರ್ಮುಡ ಎಂ.
ಒಂದು ಖಾಲಿ ಕುರ್ಚಿ - ವಿಜಯ್ ಕುಮಾರ್ ಹೂಗಾರ
ನಲಿವಿನ ನಾಲಗೆ - ಸುಮಾ ಹೆಚ್. ಪಿ.

ಸಮಾಧಾನಕರ ಬಹುಮಾನ ಪಡೆದವರು

ಬೆಂಕಿ ಸಮುದ್ರದ ತಂಪು ಮೀನು - ಭರಮಣ್ಣ ಗುರಿಕಾರ್
ಶರಣೆಯರ ಚರಿತೆ - ಶ್ರೀಧರ ಗಂಗನ ಗೌಡರ
ಒಡಲಾಳದ ಧ್ವನಿ - ಉತ್ತಮ
ಪ್ರೇಮವಿರಾಗಿಯ ನಡುಗತ್ತಲ ಕವಿತೆ - ಕೃಷ್ಣಮೂರ್ತಿ ಜಿ. ಇಂಡ್ಲವಾಡಿ
ಹಾಣಾದಿ - ಕಪಿಲ ಪಿ. ಹುಮನಾಬಾದೆ
ಕನಸುಗಳ ಹೊತ್ತವರು - ಹುಲಿಯೂರುದುರ್ಗ ಲಕ್ಷ್ಮೀನಾರಾಯಣ
ಮಾವಿನಕೆರೆ - ಎಂ. ನರಸಿಂಹಲು ವಡವಾಟಿ

ಮೆಚ್ಚುಗೆಯ ಹಾಗೂ ಸಮಾಧಾನಕರ ಪಡೆದವರಿಗೆ ಪುಸ್ತಕ ಬಹುಮಾನ ಹಾಗೂ ಇ-ಪ್ರಮಾಣ ಪತ್ರ ನೀಡಲಾಗುವುದು ಎಂದು ಅವ್ವ ಪುಸ್ತಕಾಲಯದ ಅಧ್ಯಕ್ಷರಾದ ನಾರಾಯಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೇಲೆ ತಿಳಿಸಿರುವ ಪಟ್ಟಿಯಲ್ಲಿನ ಸದಸ್ಯರು ಈ ಕೂಡಲೆ ನಿಮ್ಮ ಇತ್ತೀಚಿನ ಭಾವಚಿತ್ರ, ಪೂರ್ಣ ಹೆಸರು ಹಾಗೂ ಮಿಂಚಂಚೆಯನ್ನು ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಲು ತಿಳಿಸಿದೆ.
avvapustakaalaya@gmail.com

MORE NEWS

ಜಲಾಲ್ ಅಲ್ -ಏ-ಅಹಮ್ಮದ್ ಸಾಹಿತ್ಯ ಪ...

22-01-2021 ಬೆಂಗಳೂರು

ಇರಾನ್ ನ ಪ್ರತಿಷ್ಠಿತ 13ನೇ ಜಲಾಲ್ ಅಲ್ -ಎ-ಅಹಮ್ಮದ್ ಸಾಹಿತ್ಯ ಪ್ರಶಸ್ತಿ ನೀಡಲು ಈ ಬಾರಿ ಅರ್ಹ ಕಥೆಗಳು ಹಾಗೂ ಕಾದಂಬರಿಗ...

ಉರ್ದು ಸಾಹಿತ್ಯ : ಭಾರತದ ಹನ್ಫಿ, ಪ...

22-01-2021 ಬೆಂಗಳೂರು

ತಮ್ಮ ಸಾಹಿತ್ಯದ ಮೂಲಕ ಉರ್ದು ಭಾಷೆಯ ಪ್ರಸಾರ ಸಿರಿವಂತಿಕೆ ಹೆಚ್ಚಿಸಿದ ಖ್ಯಾತಿಯ ಭಾರತದ ಪ್ರಸಿದ್ಧ ಕವಿ, ವಿದ್ವಾಂಸ ಶಮೀಮ...

ಫೆ.19 ರಿಂದ ಜೈಪುರ ಸಾಹಿತ್ಯ ಸಮ್ಮೇ...

20-01-2021 ಬೆಂಗಳೂರು

ಬಹು ನಿರೀಕ್ಷಿತ ಹಾಗೂ ವಿಶ್ವ ಖ್ಯಾತಿಯ ಜೈಪುರ ಸಾಹಿತ್ಯ ಸಮ್ಮೇಳನವು 2021 ರ ಫೆಬ್ರವರಿಯಲ್ಲಿ ಜರುಗಲಿದೆ. ಆದರೆ, ವಿಶೇಷವ...

Comments