ಅರಿವಿನ ಕೃಷಿ ನಡೆಸುತ್ತಿರುವ ‘ಸಾಹಿತ್ಯ ವನ’

Date: 09-04-2020

Location: ಬೆಂಗಳೂರು


ಕಾಂಕ್ರೀಟ್‌ ಕಾಡಿನಲ್ಲೊಂದು ಗುಬ್ಬಿ ಗಾತ್ರದ ಕಾಡು ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ. ಹಲವಾರು ಖ್ಯಾತಿ, ಕುಖ್ಯಾತಿ ಹೊಂದಿರುವ ಅಲ್ಲಿನ ಪರಿಸರ ವಿದ್ಯಾರ್ಥಿಗಳ ಕ್ರಿಯಾಶೀಲ ಚಟುವಟಿಕೆಗಳಿಂದಲೂ ಹೆಸರು ಮಾಡಿದೆ. ಕಳೆದ ಆರೇಳು ವರ್ಷಗಳಿಂದ ಪ್ರತಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇರುವ ಹತ್ತಾರು ವಿದ್ಯಾರ್ಥಿಗಳು ಒಂದೆಡೆ ಸೇರಿ ಪ್ರಚಲಿತ ವಿದ್ಯಮಾನದ ಕುರಿತೋ, ಸಾಹಿತ್ಯಿಕ ಪುಸ್ತಕದ ಕುರಿತೋ ಸಂವಾದ ನಡೆಸುವುದು ಸಾಮಾನ್ಯವಾಗಿರುವ ವಿಶಿಷ್ಠ ಕಾರ್ಯಕ್ರಮ. 

ಕನ್ನಡ, ಇಂಗ್ಲಿಷ್‌, ಸಮಾಜಶಾಸ್ತ್ರ ಹೀಗೆ ವಿವಿಧ ವಿಭಾಗಗಳ ಮೂರ್ನಾಲ್ಕು ವಿದ್ಯಾರ್ಥಿಗಳು ಸೇರಿ ಆರಂಭಿಸಿದ ಈ ಪುಟ್ಟ ಕಾರ್ಯಕ್ರಮ ಇದು ಸುಮಾರು 25-30 ವಿದ್ಯಾರ್ಥಿಗಳು ಹಾಗೂ ಬರಹಗಾರರು ನಡೆಸುವ ವಿಚಾರಕೂಟವಾಗಿ ಬದಲಾಗಿದೆ. ಉಪ ಕುಲಪತಿಗಳ ಮನೆಯ ಹಿಂದಿನ ಕುರುಚಲು ಕಾಡಿನಲ್ಲಿ ಈ ಸಂವಾದ ನಡೆದುಕೊಂಡು ಬರುತ್ತಿದೆ. 

ಇಂತಹ ಹೊಸ ಪ್ರಯತ್ನ ರೂಪುಗೊಂಡಿದ್ದೇಗೆ ಎಂಬುದರ ಬಗ್ಗೆ ಮಾತನಾಡುವ ಎಂ.ಎಚ್‌. ಮಿಲನ್‌ ವಿಶ್ವವಿದ್ಯಾಲಯದಲ್ಲಿದ್ದ ಸಮಾನ ಮನಸ್ಕ ಯುವಕರು ಸೇರಿ ಇಂತಹ ಪ್ರಯತ್ನಕ್ಕೆ ಹೆಜ್ಜೆ ಇಟ್ಟೆವು. ಈವರೆಗೂ ಕವಿತೆ ವಾಚನ, ಪುಸ್ತಕದ ಕುರಿತು ಚರ್ಚೆ, ಅಂಬೇಡ್ಕರ್‌ ಬರಹಗಳ ಓದು, ಕುವೆಂಪು, ತೇಜಸ್ವಿ, ನಟರಾಜ್‌ ಹುಳಿಯಾರ್‌, ಲಂಕೇಶ್‌ ಹೀಗೆ ಹಲವು ಬಗೆಯ ಕಾರ್ಯಕ್ರಮಗಳನ್ನು ಸಾಹಿತ್ಯ ವನದಲ್ಲಿ ಜರುಗಿವೆ. ಎಂದು ಕಾರ್ಯಕ್ರಮದ ಕುರಿತು ವಿವರಿಸುತ್ತಾರೆ. 

ಬರಹಗಾರ ಬೇಲೂರು ರಘುನಂದನ, ಎಲ್.ಎನ್. ಮುಕುಂದರಾಜ್‌, ಪ್ರೊ. ಶಿವರಾಮಯ್ಯ, ಶ್ರೀಪಾದ್‌ ಭಟ್‌ ಸೇರಿದಂತೆ ಹಲವಾರು ಸಾಹಿತಿಗಳು ಸಾಹಿತ್ಯವನದಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಈ ಸಾಹಿತ್ಯ ವನದ ವಿಶೇಷತೆ ಏನೆಂದರೆ ಪ್ರತಿ ವಾರ ಸಂವಾದ ಯಾವ ವಿಷಯದ ಬಗ್ಗೆ ನಡೆಯಬೇಕು ಎಂಬುದನ್ನು ವಾಟ್ಸಾಪಿನಲ್ಲಿ ಚರ್ಚಿಸಲಾಗುತ್ತದೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಉಳಿದಂತೆ ಪ್ರತಿ ವಾರ ಸಾಹಿತ್ಯ ವನದ ಸದಸ್ಯರೇ ಅಂದಿನ ವಿಷಯಕ್ಕೆ ತಯಾರಿ ನಡೆಸಿ ಕೇಳುಗರ ಮುಂದೆ ಮಂಡನೆ ಮಾಡುತ್ತಾರೆ. ಅದರ ಕುರಿತು ಚರ್ಚಿಸುತ್ತಾರೆ. ಹೀಗೆ ಮಾಡುವುದರಿಂದ ನಮ್ಮೆಲ್ಲರಿಗೂ ಆತ್ಮವಿಶ್ವಾಸ ಬರುತ್ತದೆ. ‘ವೇದಿಕೆ ಎಂದರೆ ಭಯ’ ಇರುವುದಿಲ್ಲ ಎನ್ನುತ್ತಾರೆ ಸಂವಾದದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಯೊಬ್ಬರು. 

ಸಂವಾದದಲ್ಲಿ ಮಂಡನೆಯಾಗುತ್ತಿದ್ದ ವಿಷಯಗಳು: https://www.facebook.com/100027826210901/videos/t.100005977443306/209577843313088/?type=2&video_source=user_video_tab

 

https://www.facebook.com/100027826210901/videos/t.100005977443306/204559220481617/?type=2&video_source=user_video_tab

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...