ಆರ್ಯ ಪ್ರಕಾಶನದಿಂದ ರಾಜ್ಯಮಟ್ಟದ ಮಕ್ಕಳ ಕಥಾಸ್ಪರ್ಧೆಗೆ ಆಹ್ವಾನ 

Date: 16-10-2021

Location: ಬೆಂಗಳೂರು


ಆರ್ಯ ಪ್ರಕಾಶನವು 2021ನೇ ಸಾಲಿನ ರಾಜ್ಯಮಟ್ಟದ ಮಕ್ಕಳ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು, 14 ವರ್ಷದೊಳಿನ ಮಕ್ಕಳ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಮೊದಲ ಬಹುಮಾನ 1000 ರೂಪಾಯಿ, ಎರಡನೇ ಬಹುಮಾನ 500 ರೂಪಾಯಿ, ಮೂರನೇ ಬಹುಮಾನ 300 ರೂಪಾಯಿ ಹಾಗೂ ಅರ್ಹ 5 ಬರಹಗಳಿಗೆ ತಲಾ 100 ರೂಪಾಯಿ ಬಹುಮಾನ ನೀಡಲಾಗುವುದು.

ನಿಯಮಗಳು: ಸ್ವ ರಚಿತ ಕಥೆಗಳಿಗೆ ಮಾತ್ರವೇ ಅವಕಾಶವಿದ್ದು, ಕನ್ನಡದ ಕಥೆಗಳನ್ನು ಮಾತ್ರವೇ ಕಳುಹಿಬಹುದಾಗಿದೆ. ಒಬ್ಬರಿಗೆ ಒಂದು ಕಥೆ ಮಾತ್ರವೇ ಕಳುಹಿಸಲು ಅನುಮತಿಯಿದ್ದು, ಕಥೆಯ ವಿಷಯದ ಆಯ್ಕೆ ಮಕ್ಕಳ ಇಚ್ಛೆಗೆ ಬಿಡಲಾಗಿದೆ. ಆದರೆ ಕಥೆ 300 ಪದಗಳ ಮಿತಿಯಲ್ಲಿರಬೇಕು. ಕಥೆಯ ಜೊತೆಗೆ ಮಗುವಿನ ಹೆಸರು, ಫೋಟೋ, ವಯಸ್ಸು, ಶಾಲೆಯ ಹೆಸರು ಹಾಗೂ ಊರಿನ ಹೆಸರನ್ನು ಕಡ್ಡಾಯವಾಗಿ ಬರೆದಿರಬೇಕು ಎಂಬುದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ. ಅಲ್ಲದೆ ಮಕ್ಕಳ ಹೆಸರಿನಲ್ಲಿ ದೊಡ್ಡವರು ಬರೆದ ಕತೆಗಳಿಗೂ ಅವಕಾಶವಿರುವುದಿಲ್ಲ.

ಮಕ್ಕಳ ದಿನಾಚರಣೇಯ ದಿನದಂದು ಅಂದರೆ 14-11-2021ರಂದು ಫಲಿತಾಂಶವನ್ನು ಆರ್ಯ ಪ್ರಕಾಶನದ ಫೇಸ್ ಬುಕ್ ಗುಂಪಿನಲ್ಲಿ ಪ್ರಕಟಿಸಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದು ಆರ್ಯ ಪ್ರಕಾಶನವು ಮಾಹಿತಿ ನೀಡಿದೆ.

ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ 31ನೇ ಅಕ್ಟೋಬರ್ 2021ರಂದು.

ಕಥೆಗಳನ್ನು ಕಳುಹಿಸಬೇಕಾಗಿರುವ ವಾಟ್ಸಾಪ್ ಸಂಖ್ಯೆ: 9590252456



MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...