ಬೇಂದ್ರೆ ಸಂಸ್ಮರಣೆಯಲ್ಲಿ ’ಔದುಂಬರಗಾಥೆ’ ಬಿಡುಗಡೆ

Date: 27-10-2019

Location: ಹುಬ್ಬಳ್ಳಿ


ದ. ರಾ. ಬೇಂದ್ರೆಯವರ 39ನೇ ವಾರ್ಷಿಕ ಸಂಸ್ಮರಣಾರ್ಥವಾಗಿ ಹುಬ್ಬಳ್ಳಿಯಲ್ಲಿ ’ಔದುಂಬರಗಾಥೆ’ ಕೃತಿ ಲೋಕಾರ್ಪಣೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಸಂಸ್ಮರಣೆಯಲ್ಲಿ ಸಾಹಿತಿ ಜಿ. ಎಂ. ಹೆಗಡೆ “ವರಕವಿ ಬೇಂದ್ರೆಯವರ ಸಮಗ್ರ ಕಾವ್ಯ ವಸ್ತುವನ್ನು ಆಧರಿಸಿ ವಿಭಜಿಸಿ ಮಹಾಕಾವ್ಯವಾಗಿ ಸಂಪಾದಿಸಿದ ಕೀರ್ತಿ ವಾಮನ ಬೇಂದ್ರೆಯವರಿಗೆ ಸಲ್ಲುತ್ತದೆ” ಎಂದು ಹೇಳಿದರು. ಹಿರಿಯ ಸಾಹಿತಿ ಕೆ. ಎಸ್‌. ಕೌಜಲಗಿ ಮಾತನಾಡಿ “ಮಹಾಕವಿ ಬೇಂದ್ರೆಯವರ ಸಾಹಿತ್ಯ ಉತ್ತರಮುಖಿ ಯಾಗಿದೆ ಬೇಂದ್ರೆ ಕಾವ್ಯಕ್ಕೆ ಮಂತ್ರಶಕ್ತಿ ಇದೆ ಅವರ ಕಾವ್ಯ ವಿನೂತನ, ಹೊಸ ಜನಾಂಗ ಮತ್ತು ಹೊಸ ಯುಗದ ನಿರ್ಮಾಣಕ್ಕೆ ಅವರು ರಚಿಸಿದ ಕಾವ್ಯ ವಿಭಿನ್ನ ದೃಷ್ಟಿಕೋನ ಉಳ್ಳದ್ದಾಗಿದೆ. ಬೇಂದ್ರೆ ಮಹಾಕಾವ್ಯದ ವಿಮರ್ಶೆಗೆ ಹೊಸ ಮಾನದಂಡ ರೂಪಿಸುವ ಅವಶ್ಯಕತೆಯಿದೆ ಎಂದರು. "ಬೇಂದ್ರೆಯವರ ’ಔದುಂಬರಗಾಥೆ’ ಜನಸಾಮಾನ್ಯರ ಮಹಾಕಾವ್ಯವಾಗಿದೆ” ಎಂದು ಮಾತನಾಡಿದರು ಸಿ. ಯು. ಬೆಳ್ಳಕ್ಕಿ. ರವೀಂದ್ರ ಶಿರೋಳ್ಕರ್, ಸುಲೋಚನ, ಪುನರ್ವಸು ಬೇಂದ್ರೆ, ಸುಮಿತ್ರ ಅವರು ಅತಿಥಿಗಳಿಗೆ ಗ್ರಂಥ ಸಮರ್ಪಣೆ ಮಾಡಿದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...