ಬದುಕಿಗೆ ಸಾಹಿತ್ಯವು ಕನಸುಗಳನ್ನು ತುಂಬುತ್ತದೆ- ಭುವನೇಶ್ವರಿ ಹೆಗಡೆ


ಕನಸುಗಳಿಲ್ಲದ ಜೀವನ ವ್ಯರ್ಥ. ಸಾಹಿತ್ಯವು ನಮ್ಮ ಬದುಕಿಗೆ ಕನಸುಗಳನ್ನು ತುಂಬುತ್ತದೆ ಎಂದು ಸಾಹಿತಿ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು.

ಮೈತ್ರಿ ಪ್ರಕಾಶನ ಸಂಸ್ಥೆಯ 2021ರ ಮೈತ್ರಿ ಸಂಭ್ರಮದ ಭಾಗವಾಗಿ ನಗರದ ಬಸವನಗುಡಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ವಾಡಿಯಾ ಸಭಾಂಗಣದಲ್ಲಿ ಬಹುಮಾನ ವಿತರಣೆ ಹಾಗೂ 5 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜೀವನದಲ್ಲಿ ನಿನ್ನೆಯ ನೆನಪು ಇರಬೇಕು ನಾಳೆಯ ಕನಸಿರಬೇಕು ವರ್ತಮಾನದ ಸಹ್ಯ ಇರಬೇಕು. ಆ ಕೆಲಸವನ್ನ ನಮ್ಮ ಬದುಕಲ್ಲಿ ಸಾಹಿತ್ಯ ಮಾಡುತ್ತದೆ. ಈ ಸಾಹಿತ್ಯ ಕ್ಷೇತ್ರ ಒಂದು ಆರೋಗ್ಯಕರವಾದ ಹುಚ್ಚು, ಎಲ್ಲರಲ್ಲೂ ಈ ಸಾಹಿತ್ಯದ ಹುಚ್ಚು ಹೆಚ್ಚಾಗಬೇಕು ಎಂದು ಹೇಳಿದರು.

ಬಿಡುಗಡೆಗೊಂಡ ಪುಸ್ತಕಗಳು: ಮೇಜರ್‌ ಡಾ. ಕುಶ್ವಂತ್‌ ಕೋಳಿಬೈಲು ಅವರ ʻಕೂರ್ಗ್‌ ರೆಜಿಮೆಂಟ್‌ʼ. ಗುರುಪ್ರಸಾದ ಕುರ್ತಕೋಟಿ ಅವರ ʻಕೇಶ ಕ್ಷಾಮʼ, ಸುಧಾ ಆಡುಕಳ ಅವರ ʻಒಂದು ಇಡಿಯ ಬಳಪʼ, ಅಂಜನಾ ಹೆಗಡೆ ಅವರ ʻಹೂ ನಗೆʼ, ಟಿ. ಎಸ್.‌ ಶ್ರವಣಕುಮಾರಿಯವರ ʻಸಂಜೆಯ ಮಳೆʼ ಹೀಗೆ ಐದು ಪುಸ್ತಕಗಳು ಬಿಡುಗಡೆಗೊಂಡವು.

ಬಹುರೂಪಿ ಪ್ರಕಾಶನದ ಮುಖ್ಯಸ್ಥ ಜಿ. ಎನ್‌. ಮೋಹನ್‌,ಮೇಘನಾ ಸುಧಿಂದ್ರ ಮುಖ್ಯ ಅತಿಥಿಗಳಾಗಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಈ ಎಲ್ಲ ಪುಸ್ತಕಗಳ ಲೇಖಕರನ್ನು ಸನ್ಮಾನಿಸಿ ಬಹುಮಾನ ಸಮರ್ಪಿಸಲಾಯಿತು.

ಓದುಗರ ಮೆಚ್ಚುಗೆಯೇ ಬಹುಮಾನ : ಬಹುಮಾನ ಪುರಸ್ಕೃತರ ಪೈಕಿ ಸುಧಾ ಆಡುಕಳ ಮಾತನಾಡಿ ಪ್ರಕಟಿತ ಪುಸ್ತಕಗಳು ಮಾರಾಟವಾಗಿ, ಎಲ್ಲರು ಓದಿ ಮೆಚ್ಚಿಕೊಂಡರೆ ಸಾಹಿತಿಗೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ- ಲೇಖಕ ಜೋಗಿ, ಮೈತ್ರಿ ಪ್ರಕಶಾನ ಮುಖ್ಯಸ್ಥರು, ಸಿಬ್ಬಂದಿ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

MORE FEATURES

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...