ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 2019ನೇ ಸಾಲಿನ ಪುಸ್ತಕ ದತ್ತಿ ಬಹುಮಾನ ಪ್ರಕಟ

Date: 09-07-2020

Location: ಬಾಗಲಕೋಟೆ


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 2019ನೇ ಸಾಲಿನ ಪುಸ್ತಕ ದತ್ತಿ ಬಹುಮಾನಕ್ಕಾಗಿ ಜಿಲ್ಲೆಯ ಲೇಖಕರ ಕೃತಿಗಳ ಆಯ್ಕೆಯನ್ನು ಪ್ರಕಟಿಸಲಾಗಿದೆ. ಅಖಂಡ ವಿಜಯಪುರ ಜಿಲ್ಲೆಯ ಲೇಖಕರ ಪುಸ್ತಕಗಳಿಗೆ ಸಮೀರವಾಡಿ ಪ್ರಶಸ್ತಿಗೆ, ಬೀಳಗಿ ಸಾಹಿತ್ಯ ಸಮ್ಮೇಳನದ ಸವಿನೆನಪಿನ ಬಾಗಲಕೋಟ ಜಿಲ್ಲಾ ಪ್ರಶಸ್ತಿಗೂ, ಬೀಳಗಿ ತಾಲೂಕು ಸಮ್ಮೇಳನ ಸವಿನೆನಪಿನ ಬೀಳಗಿ ತಾಲೂಕಿನ ಲೇಖಕರಿಗೂ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಸಮೀರವಾಡಿ ಜಿಲ್ಲಾ ಸಾಹಿತ್ಯ ಸಮ್ಮೇಳನದ 2019 ನೇ ಸಾಲಿನ ಸವಿನೆನಪಿನ ದತ್ತಿ ಪ್ರಶಸ್ತಿಗಳು: ಹೆಚ್. ಎಮ್. ಜುಟ್ಟಲ ಅವರ ನಾಟಕ ಕೃತಿ 'ಒಕ್ಕಲಿಗ ಒಕ್ಕದಿರೆ ಬಿಕ್ಕುವದು ಜಗವೆಲ್ಲ'. ಸುಮಿತ್ ಮೇತ್ರಿ ಅವರ 'ಥಟ್ ಅಂತ ಬರೆದುಕೊಡುವ ರಶೀದಿಯಲ್ಲ' ಕಾವ್ಯ ಕೃತಿ, ಸೋಮಲಿಂಗ ಬೇಡರ ಅವರ `ಮಕ್ಕಳಿಗಾಗಿ ನೂರಾರು ಕವಿತೆಗಳು' ಮಕ್ಕಳ ಸಾಹಿತ್ಯ ಕೃತಿ, - ಚಂದ್ರಕಾಂತ ತಾಳಿಕೋಟೆ ಅವರ 'ಕಪ್ಪು ಡೈರಿ' ಕಾದಂಬರಿ, ಹ. ಸ. ಬ್ಯಾಕೋಡ ಅವರ ಕಥಾ ಸಂಕಲನ 'ಶಾಲೆಗೆ ಬಂದರು ಗಾಂಧಿ ತಾತ' ಎಂಬ ಕೃತಿಗಳು ಆಯ್ಕೆಯಾಗಿವೆ.

ಬೀಳಗಿ ಕ.ಸಾ.ಪ. ಸ್ಥಾಪಿಸಿದ 2019 ನೇ ಸಾಲಿನ - ದತ್ತಿ ಪ್ರಶಸ್ತಿಗಳು: ಮಲ್ಲಿಕಾರ್ಜುನ ಜವಳಗಿ ಅವರ 'ಬಯಲು ಸಾನಿಧ್ಯ’-ಕಾವ್ಯ ಕೃತಿ, ಬಸವರಾಜ ಮಠ ಅವರ 'ವೀರ ವಜೀರ ರಾಜಾ ಹಂಡೆ ಹನಮಪ್ಪ ನಾಯಕ' ನಾಟಕ ಕೃತಿ. ಮಹಾದೇವ ಬಸರಕೋಡ ಅವರ ‘ನಿಂದ ಹೆಜ್ಜೆಯ ಮೀರಿ’ - ಪತ್ರಿಕಾರಂಗದ ಕೃತಿ, ಸಿ.ಎಂ.ಜೋಷಿ ಅವರ `ಗೊಂದಲಿಗರು' - ಜನಪದ ಸಾಹಿತ್ಯ ಕೃತಿ, ಲಕ್ಷಣ ಬಾದಾಮಿ ಅವರ ಕಥಾಸಂಕಲನ - “ಒಂದು ಚಿಟಿಕೆ ಮಣ್ಣು' ಕೃತಿಗಳು ಆಯ್ಕೆಯಾಗಿವೆ.

ಬೀಳಗಿ ತಾಲೂಕಿನ ಲೇಖಕರಿಗೆ ಕೊಡಮಾಡುವ 2019 ನೇ ಸಾಲಿನ ದತ್ತಿ ಪ್ರಶಸ್ತಿ: ಡಿ. ಎಂ. ಸಾಹುಕಾರ ಅವರ ‘ಪ್ರತಿಬಿಂಬ' ಕೃತಿಗೆ ಲಭಿಸಿದೆ. ಪ್ರಶಸ್ತಿ ಸಮಾರಂಭವು ಜುಲೈ ತಿಂಗಳಲ್ಲಿ ಬೀಳಗಿ ಅಥವಾ ಜಿಲ್ಲಾ ಕಸಾ.ಪ ಭವನದಲ್ಲಿ ಏರ್ಪಡಿಸಲಾಗುವದು ಎಂದು ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ, ಗೌರವ ಕಾರ್ಯದರ್ಶಿಗಳಾದ ಪ್ರೊ. ಜಿ. ಕೆ. ತಳವಾರ,. ಜಿ. ಆರ್. ನಂದಿಕೋಲಮಠ, ಕೋಶಾಧ್ಯಕ್ಷ ಪ್ರೊ, ಅಶೋಕ ಕಂದಗಲ್ಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...