ಬಹಳ ವಿಶಿಷ್ಟವಾದ ಸ್ತ್ರೀ ಸಂವೇದನೆಯ ದನಿಯಿದು


"ಭಾವ ಸಮುದ್ರದಲ್ಲಿ ಮಿಂದೆದ್ದರೂ, ಎಲ್ಲಿಯೂ ಗೋಳು ಅನಿಸುವುದಿಲ್ಲ. ಒಬ್ಬ ಕಲಾವಿದೆಯ ಬದುಕನ್ನು ಇಷ್ಟು ತೀವ್ರವಾಗಿ ಕಟ್ಟಿಕೊಡಲು, ಲೇಖಕಿ ತಾವೂ ಜೀವನದ ಪ್ರತಿಯೊಂದು ಕ್ಷಣವನ್ನೂ ಎಷ್ಟು ತೀವ್ರವಾಗಿ ಅನುಭವಿಸಿರಬಹುದು ಎನ್ನುವ ಪ್ರಶ್ನೆ ಕಾಡದಿರುವುದಿಲ್ಲ. ಇಬ್ಬರು ಹೆಂಗಸರ ನಡುವೆ ಒಂದು ದೀರ್ಘ ಸಂಭಾಷಣೆಯಂತೆ ಅನಿಸುವ ಈ ಕಾದಂಬರಿಯ ಆಳ ವಿಸ್ಮಯಕಾರಿ," ಎನ್ನುತ್ತಾರೆ ಪೂರ್ಣಿಮಾ ಮಾಳಗಿಮನಿ. ಅವರು ಪಿ. ಚಂದ್ರಿಕಾ ಅವರ ‘ಪ್ಯಾಲೆಟ್’ ಕೃತಿ ಕುರಿತು ಬರೆದ ವಿಮರ್ಶೆ.

ಈ ಮೊದಲು ಚಂದ್ರಿಕಾ ಮೇಡಂ ಅವರ ಕವಿತೆಗಳನ್ನು ಓದಿದ್ದೆ. ಆದರೆ ಗದ್ಯ ಓದಿದ್ದು ಇದೇ ಮೊದಲು ಎನ್ನಬಹುದು. ಬಹಳ ವಿಶಿಷ್ಟವಾದ ಸ್ತ್ರೀ ಸಂವೇದನೆಯ ದನಿ ಅನಿಸಿತು.

ಎಲ್ಲದರಲ್ಲೂ ಬಣ್ಣಗಳನ್ನು ಕಾಣುವ, ತನ್ನದೇ ಬಣ್ಣದ ಲೋಕದಲ್ಲಿ ಬೇಕೆಂದಾಗ ಕಳೆದುಹೋಗಿಬಿಡುವ ನಾಯಕಿ ಶ್ಯಾಮಲಾಳ ಕತೆಯಿದು. ಕತೆ ಸಾಗುವುದು ಅವಳ ಆಪ್ತ ಸ್ನೇಹಿತೆ ತೇಜುಳ ನಿರೂಪಣೆಯಲ್ಲಿ. ಕಲಾವಿದೆ ಫ್ರೀಡಾಳ ಬದುಕನ್ನು ಆಧರಿಸಿದ ಅದೇ ಹೆಸರಿನ ಸಿನಿಮಾದಲ್ಲಿ ತನ್ನ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಹಿಸಿಕೊಂಡು, ತನ್ನ ದುಃಖವನ್ನೆಲ್ಲಾ ಕ್ಯಾನ್ವಾಸ್ ಮೇಲೆ ಬಣ್ಣಗಳಲ್ಲಿ ವ್ಯಕ್ತಪಡಿಸುವ strong character ನಂತೆ ಶ್ಯಾಮು ಕಾಣುತ್ತಾಳೆ. ಅಮ್ಮನ ಪ್ರೀತಿಯಿಲ್ಲದೆ ಮಗುವಾಗಿದ್ದಾಗಿಂದಲೂ ವಿಚಿತ್ರ ಅನಿಸುವಂತೆಯೇ ರೂಪುಗೊಳ್ಳುವ ಶ್ಯಾಮು ಎಲ್ಲರಿಗೂ ಒಂದು ಬಿಡಿಸಲಾಗದ ಒಗಟು. ಕಡೆಗೆ ಇಷ್ಟಪಟ್ಟ ಪತಿಗೂ!

ಅಸಲಿಗೆ ಇಂಥ ಒಂದು ಸಶಕ್ತ ಪಾತ್ರದೊಂದಿಗೆ ಬದುಕು ನಡೆಸುವುದು ಎಲ್ಲರಿಗೂ ಯಾಕೆ ಸಾಧ್ಯವಿಲ್ಲ ಎಂದು ಓದಿದಾಗ ಅರಿವಾಗುತ್ತದೆ.

ಭಾವ ಸಮುದ್ರದಲ್ಲಿ ಮಿಂದೆದ್ದರೂ, ಎಲ್ಲಿಯೂ ಗೋಳು ಅನಿಸುವುದಿಲ್ಲ. ಒಬ್ಬ ಕಲಾವಿದೆಯ ಬದುಕನ್ನು ಇಷ್ಟು ತೀವ್ರವಾಗಿ ಕಟ್ಟಿಕೊಡಲು, ಲೇಖಕಿ ತಾವೂ ಜೀವನದ ಪ್ರತಿಯೊಂದು ಕ್ಷಣವನ್ನೂ ಎಷ್ಟು ತೀವ್ರವಾಗಿ ಅನುಭವಿಸಿರಬಹುದು ಎನ್ನುವ ಪ್ರಶ್ನೆ ಕಾಡದಿರುವುದಿಲ್ಲ. ಇಬ್ಬರು ಹೆಂಗಸರ ನಡುವೆ ಒಂದು ದೀರ್ಘ ಸಂಭಾಷಣೆಯಂತೆ ಅನಿಸುವ ಈ ಕಾದಂಬರಿಯ ಆಳ ವಿಸ್ಮಯಕಾರಿ.

ಇನ್ನು ಅವರು ತೋರಿಸುವ ರೂಪಕಗಳು ಬಹಳ ಅನನ್ಯ ಮತ್ತು ಹೊಸದು. ಅಲ್ಲಿ ಲೇಖಕಿಯ ಸೃಜನಶೀಲತೆ ಬೆರಗುಗೊಳಿಸುತ್ತದೆ.

ಈ ಕಾದಂಬರಿ ನಿಧಾನವಾಗಿ ಸಾಗುತ್ತದೆ ಅನಿಸಿದರೂ, ಅಲ್ಲಲ್ಲಿ ನಿಂತು ಸುಧಾರಿಸಿಕೊಂಡು ಮುಂದೆ ಹೋಗಲು ಈ ಗತಿಯೇ ಸೂಕ್ತ ಅನಿಸುತ್ತದೆ. ಸಿನಿಮಾಗಳಂತೆ ಇಲ್ಲಿ ಹೆಚ್ಚೇನೂ ಘಟಿಸುವುದಿಲ್ಲ. ಒಂದು melancholy ಅನ್ನು ಬಣ್ಣಗಳಲ್ಲಿ ಹಿಡಿದಿಡುವ, ಓದುಗರಿಗೆ ತೋರಿಸುವ, ಮುಗಿದ ನಂತರವೂ ಮಾಸದ ಬಣ್ಣಗಳ ಪ್ರಪಂಚವನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಲೇಖಕಿ ಗೆದ್ದಿದ್ದಾರೆ.

ಈ ಸಾಲುಗಳು ಬಹಳ ಇಷ್ಟವಾದವು.

“ಸ್ನೇಹವಾದರೂ, ದಾಂಪತ್ಯವಾದರೂ ಅಷ್ಟೇ, ಸೇರಿದರೆ ಪುಣ್ಯ. ಇಲ್ಲದಿದ್ದರೆ ಎರಡು ದಂಡೆಯ ನಡುವೆ ಆವೇಶಕ್ಕೆ ಸಿಕ್ಕ ನದಿಯ ಓಟ” ಇನ್ನೊಂದು ಕಡೆ ಹೇಳುವ ಈ ಸನ್ನಿವೇಶ ಎಷ್ಟು ತಾತ್ವಿಕವಾಗಿದೆ.

“ಕಪ್ಪರಶುಂಟಿಗೆ ಮೆಯೆಲ್ಲಾ ಕಾಲು. ಅದನ್ನೊಮ್ಮೆ ಕಪ್ಪೆ, ಇಷ್ಟೊಂದು ಕಾಲುಗಳನ್ನು ಇಟ್ಟುಕೊಂಡು ಅದು ಹೇಗೆ ನಿಭಾಯಿಸುತ್ತಿಯ ಅಂತ ಕೇಳಿ, ಕುಪ್ಪಳಿಸುತ್ತಾ ಹೋಗಿಬಿಟ್ಟಿತಂತೆ. ಅದುವರೆಗೂ ಅದರ ಕುರಿತು ಯೋಚಿಸಿಯೇ ಇರದ ಕಪ್ಪರಶುಂಟಿ, ಚಿಂತೆಗೆ ಬಿದ್ದು, ಎಡವಟ್ಟು ಮಾಡಿಕೊಂಡಿತಂತೆ” (ಇದು ಎಷ್ಟೋ ಸಲ ನನ್ನ ಅನುಭವಕ್ಕೂ ಬಂದಿದೆ. ಯಾರಾದರೂ ಇಷ್ಟೆಲ್ಲಾ ಹೇಗೆ ಮ್ಯಾನೇಜ್ ಮಾಡ್ತೀರಾ ಅಂತ ಕೇಳುವ ತನಕ ಅದು ‘ಇಷ್ಟೆಲ್ಲಾ’ ಅಂತ ಅನ್ನಿಸಿರಲ್ಲ. ಒಮ್ಮೆ ಹಾಗೆ ಕೇಳಿಬಿಟ್ಟರೆ ಆಮೇಲೆ selfpity ನೇ!)

ಮತ್ತೆ ನಾವು ಚಿಕ್ಕವರಿದ್ದಾಗ ನಮ್ಮೂರ ಕಡೆ, ಕಪ್ಪರಶುಂಟಿ ಅಂತ ಬಯ್ಯೂರು. ಯಾಕೆ ಅಂತ ಈಗ ಅರ್ಥವಾಯ್ತು.

- ಪೂರ್ಣಿಮಾ ಮಾಳಗಿಮನಿ

MORE FEATURES

ಹದ್ದಿನ ಸಂಕೇತ ಕಾದಂಬರಿಗೊಂದು ಕಾವ್ಯದ ಶಕ್ತಿಯನ್ನು ದಕ್ಕಿಸಿಕೊಟ್ಟಿದೆ

05-12-2024 ಬೆಂಗಳೂರು

"ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು ಮನಸಿನೊಳಗೆ ಅಚ್ಚೊತ್ತಿ ಬಿಡುತ್ತದೆ. ಅತ್ತ ಮಲೆನಾಡು ಇತ್ತ ಕರಾವಳಿಯ ನಡುವ...

ಸಾಹಿತ್ಯಾಸಕ್ತರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧವಾಗಿದೆ ‘ಬೆಂಗಳೂರು ಲಿಟ್ ಫೆಸ್ಟ್’

04-12-2024 ಬೆಂಗಳೂರು

ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...

ಕೆಂಡದಗಿರಿಯ ಮೇಲೆ ಅರಗಿನ ಕಂಬ..

04-12-2024 ಬೆಂಗಳೂರು

"ಮಾತು, ಮೌನಗಳ ಅನುಭವದಲ್ಲಿನ ಈ ಹುಡುಕಾಟವು ಪ್ರಪಂಚದ ಚರಾಚರಗಳೊಂದಿಗೆ ಒಂದು ಆತ್ಮೀಯತೆಯನ್ನು ಏರ್ಪಡಿಸುತ್ತಲೇ ಇದೆ...