ಸಾಹಿತ್ಯದ ಅರಿವಿನ ಪಯಣ ’ಬೆಂಗ್ಳೂರಲ್ಲಿ ಬೇಂದ್ರೆ’

Date: 14-10-2019

Location: ಬೆಂಗಳೂರು


ದ.ರಾ. ಬೇಂದ್ರೆ ಅವರ ಹುಟ್ಟಿದ ಹಬ್ಬದ ದಿನ ಬೆಂಗಳೂರಿನಲ್ಲಿ ಬೇಂದ್ರೆ ಓದುಗ ಸಹೃದಯರೆಲ್ಲಾ ಒಂದೆಡೆ ಸೇರಿ ಬೇಂದ್ರೆ ಬದುಕು, ಬರಹದ ಕುರಿತು ಬೆಂಗ್ಳೂರಾಗೂ ಬೇಂದ್ರೆ ಸಂಚಿಕೆ ಆರಂಭಿಸಿದರು. ಬೇಂದ್ರೆ ಅವರ ಒಡನಾಟದ ದಿನಗಳಿಂದ ಶುರುವಾದ ಮಾತುಕಥೆಯಲ್ಲಿ ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯೆ ಕಣ್ಣ ಎನ್ನುತ್ತಾ ಆರಂಭವಾದ ಸಂಚಿಕೆಗಳ ಸಂಖ್ಯೆ ಹಾಗೂ ಈ ಚರ್ಚಾ ಕೂಟಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಎಚ್.ಎಸ್. ಸತ್ಯನಾರಾಯಣ ಅವರ ಬೇಂದ್ರೆ ಬದುಕು ಬರಹದ ಬಗ್ಗೆ ಮಾತನಾಡುತ್ತಾ ಬೇಂದ್ರೆ - ಚಂಪಾ - ಶಂಬಾ ಜೋಶಿ - ಕಣವಿ - ಕಾರಂತ - ಕುವೆಂಪು - ಪೂರ್ಣ ಚಂದ್ರ ತೇಜಸ್ವಿ - ವಾಮನ ಬೇಂದ್ರೆ - ಎನ್ಕೆ - ಗಿರಡ್ಡಿ ಗೋವಿಂದರಾಜ - ಮಾಸ್ತಿ - ಅನಂತ ಮೂರ್ತಿ - ಬೆಳೆಗೆರೆ - ಕುರ್ತಕೋಟಿ ಹೀಗೆ ಬೇಂದ್ರೆ ಅವರ ಒಡನಾಡಿಗಳನ್ನೆಲ್ಲಾ ಒಂದೊಂದಾಗಿ ಪರಿಚಯಿಸುವ ಮೂಲಕ ನಮಗೆ ಬೇಂದ್ರೆ ಅವರನ್ನು ಮತ್ತಷ್ಟು ಎದೆಗಿಳಿಸಿದರು. ಬೇಂದ್ರೆ ಅವರ ಕಟುಮಧುರು ಮಾತು - ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುವ ರೀತಿ - ಬೇಂದ್ರೆ ಅವರ ಕೋಪ - ತಾಪ - ಬದುಕು - ಬಹುಮಾನ ಎಲ್ಲವನ್ನು ತಿಳಿಸಿದರು.

ಶಾರದ ಹಂಸಾ ಅವರು ಮಾತನಾಡಿ ಬೇಂದ್ರೆ ಅವರ ಶಿಶುಗೀತೆಯಾದ “ಯಾರಿಗೂ ಹೇಳೋಣು ಬ್ಯಾಡ ” ಅಂತ ಎಲ್ಲರಿಗೂ ಹೇಳಿ ಹಾಡಿ ಒಂದು ಕ್ಷಣ ಮತ್ತೆ ಬೇಂದ್ರೆ ಅವರತ್ತ ಸೆಳೆಯಿತು. ಮತ್ತೆ ಮುಂದಿನ ಸಂಚಿಕೆಯಲ್ಲಿ ಬೇಂದ್ರೆಯವರ ಹೊಸ ಹೊಸ ಮಾಹಿತಿಗಳೊಂದಿಗೆ ನಿಮ್ಮನ್ನು ಬರಸೆಳೆಯಲಿದೆ ಬೆಂಗ್ಳೂರಲ್ಲಿ ಬೇಂದ್ರೆ.

MORE NEWS

ಕವಿಗಳು, ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ; ಎಂ. ಬಸವಣ್ಣ

25-04-2024 ಬೆಂಗಳೂರು

ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...