ಬಸವಣ್ಣೆಪ್ಪ ಕಂಬಾರ, ಸಂಗಮೇಶ ಬಾದವಾಡಿಗಿ ಸೇರಿ ಐವರು ಲೇಖಕರಿಗೆ ʻಹೊನ್ಕಲ್ ಸಾಹಿತ್ಯ ಪ್ರಶಸ್ತಿʼ

Date: 24-11-2022

Location: ಶಹಾಪುರ


ರಾಜ್ಯಮಟ್ಟದ ʻಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನʼ ಕೊಡಮಾಡುವ ರಾಷ್ಟ್ರಮಟ್ಟದ ‘ಹೊನ್ಕಲ್ ಸಾಹಿತ್ಯ ಪ್ರಶಸ್ತಿ’ಗೆ ಐದು ಕೃತಿಗಳು ಆಯ್ಕೆಯಾಗಿವೆ. ಜೊತೆಗೆ, ವಿಶೇಷ ಗೌರವ ಪುರಸ್ಕಾರಗಳಿಗೆ ವಿವಿಧ ಕ್ಷೇತ್ರಗಳ ಐವರು ಸಾಧಕರ ಹೆಸರನ್ನು ಗುರುತಿಸಲಾಗಿದೆ.

ಸಾಹಿತ್ಯ ಪ್ರಶಸ್ತಿಗಾಗಿ ಕಥೆಗಾರ ಬೆಳಗಾಂ ಜಿಲ್ಲೆಯ ಬಸವಣ್ಣೆಪ್ಪ ಕಂಬಾರ ಅವರ ʻಆರನೇ ಬೆರಳು (ಕಥಾಸಂಕಲನ), ಹಾಸನದ ಲೇಖಕಿ ಮಮತಾ ಅರಸಿಕೆರೆ ಅವರ ʻಒಳಗೂ ಹೊರಗೂʼ (ಮಹಿಳಾ ಸಂವೇದನೆ ಬರಹಗಳ ಸಂಕಲನ), ಧಾರವಾಡದ ಶಿವರಾಮ ಅಸುಂಡಿ ಅವರ ʻಚಿತ್ರಂ ಭಳಾರೆ ವಿಚಿತ್ರಂʼ (ಲಲಿತ ಪ್ರಬಂಧ ಸಂಕಲನ), ಬಳ್ಳಾರಿಯ ಅಬ್ದುಲ್ ಹೈ ತೋರಣಗಲ್ಲು ಅವರ ʻಆತ್ಮ ಧ್ಯಾನದ ನಾದʼ (ಗಜಲ್ ಸಂಕಲನ) ಹಾಗೂ ಬೆಂಗಳೂರಿನ ಸಂಗಮೇಶ ಬಾದವಾಡಿಗಿ ಅವರ ʻರೊಟ್ಟಿ ಪಂಚಮಿʼ (ಕಾವ್ಯ ಸಂಕಲನ) ಕೃತಿಗಳು ಆಯ್ಕೆಯಾಗಿವೆ. ಈ ಐದೂ ಕೃತಿಗಳು ಹಾಗೂ ಕೃತಿಗಳ ಲೇಖಕರಿಗೆ ಪ್ರಶಸ್ತಿಯ ಜೊತೆಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಹಾಗೂ ವಿಶೇಷ ಸನ್ಮಾನ ಮಾಡಿ ಗೌರವಿಸಲಾಗುವುದು.

ಇನ್ನು, ಈ ವರ್ಷ ಅಗಲಿದ ತಾಯಿಯ ಸ್ಮರಣಾರ್ಥ ಆರಂಭಿಸಲಾದ ವಿಶೇಷ ಗೌರವ ಪುರಸ್ಕಾರಕ್ಕೆ ಉತ್ತರ ಕರ್ನಾಟಕದ ರಕ್ಷಣಾ ವೇದಿಕೆಯ ಅಧ್ಯಕ್ಷ ಹಾಗೂ ಕಾಯಕ ದಾಸೋಹಿ ಶಹಾಪುರದ ಮಹಾತ್ಮ ಚರಬಸವ ಸಂಸ್ಥಾನದ ಕುಡಿ ಶರಣು ಬಿ. ಗದ್ದುಗೆ ಅವರ ನಾಡು ನುಡಿ, ಒಟ್ಟಾರೆ ಕನ್ನಡ ಸೇವೆಗಾಗಿ ಪ್ರಶಸ್ತಿ ನೀಡಲಾಗುತ್ತಿದೆ.

ಕೇಂದ್ರ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ ಹೊಸಮನಿ ಅವರ ಜಾಗತಿಕ ಮಟ್ಟದ ಅಪೂರ್ವ ಡಿಜಿಟಲ್ ಸೇವೆ ಹಾಗೂ ಸಾಧನೆಗಾಗಿ, ಕಲಬುರಗಿಯ ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚೆನ್ನಾರೆಡ್ಡಿ ಪಾಟೀಲ ಕುರುಕುಂದಾ ಅವರ ಶಿಕ್ಷಣ ಕ್ಷೇತ್ರದ ಕೊಡುಗೆ ಹಾಗೂ ಸಾಮಾಜಿಕ- ಸಾಂಸ್ಕೃತಿಕ ಕ್ಷೇತ್ರದ ಉನ್ನತ ಸೇವೆ ಮತ್ತು ಸಾಧನೆಗಾಗಿ, ಬಾಲವಿಕಾಸ ಅಕಾಡೆಮಿಯ ಚಂದಿರ ಪ್ರಶಸ್ತಿ ಪುರಸ್ಕೃತ ಬಹುಮುಖಿ ಪ್ರಕಾರದ ಲೇಖಕ ಪ್ರಭುಲಿಂಗ ನೀಲೂರೆ ಆಳಂದ ಅವರ ಸಾಂಸ್ಕೃತಿಕ- ಸಾಹಿತ್ಯಿಕ ಹಾಗೂ ಪತ್ರಿಕಾ ಸೇವೆಯ ಸಾಧನೆಗಾಗಿ, ಹಾಗೂ ಸತ್ಯಂ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ, ಕಲಬುರ್ಗಿ ಸಾಹಿತ್ಯ ಸಾರಥಿ ಪತ್ರಿಕೆ ಸಂಪಾದಕ ಬಿ.ಎಚ್. ನಿರಗುಡಿ ಅವರ ಸಾಹಿತ್ಯಿಕ- ಸಾಂಸ್ಕೃತಿಕ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹೀಗೆ ಐದು ಜನಮುಖಿ ಸಾಧಕರನ್ನೂ ವಿಶೇಷ ಗೌರವ‌ ಪುರಸ್ಕಾರಗಳನ್ನು ನೀಡಿ ಗೌರವಿಸುವುದಾಗಿ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...