Date: 06-12-2025
Location: ಬೆಂಗಳೂರು
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BLR LitFest) 2025ರ 14ನೇ ಆವೃತ್ತಿಯ ಮೊದಲ ದಿನದ ಕಾರ್ಯಕ್ರಮಗಳು ಸಾಹಿತ್ಯಾಸಕ್ತರಿಗೆ ಮತ್ತು ಬುದ್ಧಿಜೀವಿಗಳಿಗೆ ಒಂದು ದೊಡ್ಡ ಹಬ್ಬದಂತಿತ್ತು. ದಿನವಿಡೀ ನಡೆದ ಸಾಹಿತ್ಯಕ, ಕಲಾತ್ಮಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮಹಾಪೂರವು ಉತ್ಸವದ ಮೆರುಗನ್ನು ಹೆಚ್ಚಿಸಿತು.
ಸಾಹಿತ್ಯ ಉತ್ಸವದಲ್ಲಿ ವಾಚ್‌ಟವರ್ (Watchtower), ಓಪನ್ ಸೆಲ್ (Open Cell), ಲೆಫ್ಟ್ ಬ್ಯಾರಕ್ (Left Barrack) ಮತ್ತು ರೈಟ್ ಬ್ಯಾರಕ್ (Right Barrack) ಎಂಬ ನಾಲ್ಕು ಪ್ರತ್ಯೇಕ ವೇದಿಕೆಗಳಲ್ಲಿ, ವಿವಿಧ ಭಾಷಾ ವಿಚಾರಗೋಷ್ಠಿಗಳ ನಡೆಯಿತು.
ಬೆಳಗ್ಗಿನ ಸಂಗೀತ: ದಿನದ ಆರಂಭವು ಸ್ಮಿತಾ ಬೆಳ್ಳೂರ್ ಅವರ "ಏರಿ ಸಖಿ" ಎಂಬ ಸುಂದರ ಸೂಫಿ ಸಂಗೀತ ಕಾರ್ಯಕ್ರಮದೊಂದಿಗೆ ಆಯಿತು. ಈ ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳು ಮತ್ತು ಇಷ್ಕ್-ಎ-ಹಕೀಕಿಯನ್ನು ಆಚರಿಸುವ ಹಾಡುಗಳು ಪ್ರಸ್ತುತಗೊಂಡವು.
ಪ್ರಮುಖ ಗೋಷ್ಠಿಗಳು :
* ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರು "ಬೀಯಿಂಗ್ ಬಾನು, ಬೀಯಿಂಗ್ ಬಂಡಾಯ" ಕುರಿತ ವಿಚಾರವನ್ನು ಹಂಚಿಕೊಂಡರು .
* ಕನ್ನಡದ ಪ್ರದರ್ಶನಗಳಲ್ಲಿ ಜನಮನದ ಆಟ ತಂಡದಿಂದ "ಎದೆಯ ಹಣತೆ: ಹಾರ್ಟ್ ಲ್ಯಾಂಪ್" ನಾಟಕೀಯ ವಾಚನಗಳು ಗಮನ ಸೆಳೆದವು. ಇದಲ್ಲದೆ, "ಹುಟ್ಟುಮಚ್ಚೆ: ವಾಟರ್‌ಮಾಲ್" ಕುರಿತು ಹರ್ಷ ರಘುರಾಮ್ ಅವರೊಂದಿಗೆ ಚರ್ಚೆ ನಡೆಯಿತು.
* ಪದ್ಮಭೂಷಣ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಸಾಹಿತ್ಯ ಸಾಧನೆಯನ್ನು ಸ್ಮರಿಸುವ ಸಲುವಾಗಿ 'ಎಸ್. ಎಲ್. ಭೈರಪ್ಪ, ಸ್ಮರಣೆ'(Remembering SL Bhyrappa) ಎಂಬ ಗೋಷ್ಠಿಯನ್ನು ಕೃಷ್ಣಮೂರ್ತಿ ಹನೂರು ಅವರು ನಡೆಸಿಕೊಟ್ಟರು.
* ಕಲೆ ಮತ್ತು ಜಾನಪದ: "ಚಿತ್ತಾರ ಕಲೆ" ಕುರಿತು ಗೀತಾ ಭಟ್ ಮತ್ತು ಇತರರೊಂದಿಗೆ ಸಂವಾದ ನಡೆಯಿತು.
ಮಕ್ಕಳ ಸಾಹಿತ್ಯ (C|L|F): ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳಿದ್ದವು. ನಕುಲ್ ಶೆಣೈ ಅವರ ಮಾಂತ್ರಿಕ ಪ್ರದರ್ಶನ ಮತ್ತು ಸುಧಾ ಮೂರ್ತಿ ಅವರ ಕೃತಿಗಳ ಬಗ್ಗೆ ರೂಪಾ ಪೈ ಅವರೊಂದಿಗಿನ ಚರ್ಚೆ ವಿಶೇಷ ಆಕರ್ಷಣೆಯಾಗಿತ್ತು. ಬೆಂಗಳೂರು ಲಿಟಲ್ ಥಿಯೇಟರ್‌ನಿಂದ 'ದಿ ಕೋರ್ಟ್ ಜೆಸ್ಟರ್: ಟೇಲ್ಸ್ ಆಫ್ ತೇನಾಲಿ ರಾಮ' ಪ್ರದರ್ಶನವು ಮಕ್ಕಳನ್ನು ರಂಜಿಸಿತು.
ಬ್ರಿಟಿಷ್ ಅಪರಾಧ ಬರಹಗಾರ್ತಿ ಕ್ಲೇರ್ ಮ್ಯಾಕಿಂತೋಷ್, ತಂತ್ರಜ್ಞಾನ ಪತ್ರಕರ್ತೆ ಮತ್ತು AI ಚರಿತ್ರಕಾರ ಕರೆನ್ ಹಾವೊ, ಅಮೇರಿಕನ್ ಕವಿ ಮತ್ತು ಕಾದಂಬರಿಕಾರ ಕಾಜಿಮ್ ಅಲಿ, ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾದ ನಾಟಕಕಾರ ಜೂಲಿ ಜಾನ್ಸನ್, ಲೇಖಕ ಮತ್ತು ಸಂಸದ ಶಶಿ ತರೂರ್ ವೇದಿಕೆಯಲ್ಲಿ ತಮ್ಮ ವಿಭಿನ್ನ ವಿಚಾರಧಾರೆಗಳ ಮೂಲಕ ಮಿಂಚಿದರು.
ಆಂಗ್ಲ ಭಾಷೆಯ ಗೋಷ್ಠಿಗಳು ಹೆಚ್ಚಾಗಿ ನಡೆದರೂ, ಪ್ರಾದೇಶಿಕ ಭಾಷೆಗಳಿಗೂ ಆದ್ಯತೆ ನೀಡಿರುವುದು ನೆರೆದಿದ್ದ ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.