ಬೆಂಗ್ಳೂರಾಗೂ ಬೇಂದ್ರೆ: ಕನ್ನಡ ನಾಡು ನುಡಿ ಕುರಿತ ಕವಿತೆಗಳ ವಾಚನ

Date: 18-11-2019

Location: ಬೆಂಗಳೂರು


“ ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯ ಕಣ್ಣ” ಎಂಬ ಬೇಂದ್ರೆ ರಚಿತ ಗೀತೆಯೊಂದಿಗೆ ಶುರುವಾದ, ಬೆಂಗ್ಳೂರಾಗೂ ಬೇಂದ್ರೆ ಈ ಸಂಚಿಕೆಯಲ್ಲಿ ಕನ್ನಡ ನಾಡು ನುಡಿಗಾಗಿ ಬರೆದ ಕವಿತೆಗಳನ್ನು ಹೆಕ್ಕಿ ತೆಗೆದು ಓದಲಾಯಿತು.

ಕಳೆದ ಒಂದೆರಡು ತಿಂಗಳಿನಿಂದ ಆರಂಭವಾಗಿರುವ ಬೆಂಗ್ಳೂರಾಗೂ ಬೇಂದ್ರೆ; ಬೇಂದ್ರೆ ಬದುಕು-ಬರಹ ಮೆಲುಕು ಹಾಕುವ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಬೇಂದ್ರೆ ಅಭಿಮಾನಿಗಳು, ಓದುಗರು ಒಂದೆಡೆ ಸೇರಿ ಚರ್ಚಿಸುವ ಸಂವಾದ ಮಂಟಪ ಇದಾಗಿದೆ. 

ತಾಯಿ...

ಭುವನೇಶ್ವರಿ ಕನ್ನಡ ದೇವಿ. ಅಂತಹ ತಾಯಿಯ ಹೆಸರಿನ ಶಿರ್ಷಿಕೆ ಇಟ್ಟು ಕನ್ನಡವನು ವಿಸ್ತರಿಸಿದ ಕವಿತೆ “ ಭುವನೇಶ್ವರಿ ” ಆ ಕವಿತೆಯನ್ನು ದಾಸ್ ಯಾದವ್ ಓದಿದರು. ಬಳಿಕ ಪುಷ್ಪಾ ಅವರು “ ತುತೂರಿ ಎಚ್ಚರ ” ಎನ್ನುವ ಒಂದು ಕವಿತೆಯನ್ನು ವಾಚಿಸಿ ಎಲ್ಲರನ್ನೂ ಎಚ್ಚರಿಸಿದರು. ಸಿಮೋಲಂಘನ ಎನ್ನುವ ಅದ್ಭುತ ಬೇಂದ್ರೆ ವಿರಚಿತ ಕವಿತೆಯನ್ನು ಓದಿದ್ದು ಪ್ರಮೀಳಾ ಶೆಟ್ಟಿ ಅವರು.

ನಾನು...

ಎನ್ನುವಂತ ಕವಿತೆಯನ್ನು ಸ್ವತಃ ಬೇಂದ್ರೆ ಅವರು ವಾಚಿಸಿದ್ದು ನಮಗೆ ವಿಡಿಯೋ ತುಣುಕು ಲಭ್ಯವಿದೆ. ಆ ಕವಿತೆ ಅವರು ಓದುವಾಗ ಮೈ ನವಿರೇಳುವುದು ಸಹಜ. ಅಂತಹ “ ನಾನು ” ಕವಿತೆಯನ್ನು ಓದಿದ್ದು ಅನುರಾಧ ತುಳುಸಿ. ಅತಿಥಿಗಳ ಪರಿಚಯಿಸುವ ಮೂಲಕ ಅನುವು ಮಾಡಿಕೊಟ್ಟಿದ್ದು ಪ್ರಮೀಳಾ ಮಂಜು ಉರಾಳ ನಂತರ ಅತಿಥಿಗಳಾದ ಯಲ್ಲಪ್ಪ. ಟಿ ಅವರು ಬೇಂದ್ರೆ ಅವರ ಬದುಕು ಬರಹದ ಜೊತೆಗೆ ನಾಡು ನುಡಿ ಭಾಷೆ ಧಾರವಾಡ ಸಂಸ್ಕೃತಿ ಹಾಗೂ ಬೇಂದ್ರೆ ಅವರ ಪ್ರೇಮ ಗೀತೆಗಳ ಒಳಹುರುಳನ್ನು ಮೆಲುಕು ಹಾಕುವ ಮೂಲಕ ನಮಗೊಂದಷ್ಟು ತಿಳಿಯಲನುವು ಮಾಡಿದರು.“ ಒಂದೇ ಒಂದೇ ಒಂದೇ ಕರ್ನಾಟಕ ಒಂದೇ ” ಎನ್ನುವ ಕವಿತೆ ಸೂಕ್ಷ್ಮವಾಗಿ ಕನ್ನಡಿಗರನ್ನು ಎಚ್ಚರಿಸುವಂತದ್ದು ಅಂತಹ ಕವಿತೆಯನ್ನು ಓದಿದ್ದು ಜೈಶಂಕರ್ ಅವರು.

ಒಂದು...

ಸಣ್ಣ ವಿರಾಮದ ನಂತರ ಆಶಾ ವಿಶ್ವನಾಥ ಅವರು ಬೇಂದ್ರೆ ವಿರಚಿತ ಕೆಲವು ಗೀತೆಗಳನ್ನು ಹಾಡಿ ನಮ್ಮನ್ನೆಲ್ಲಾ ಮತ್ತೆ ಸಾಹಿತ್ಯ ಲೋಕದೆಡೆಗೆ ತಿರುಗಿಸಿದರು‌‌. “ ಮೊದಲಗಿತ್ತಿ ” ಎನ್ನುವ ಪದ ಬಳಕೆಯೆ ಎಷ್ಟೊಂದು ನಾಜೂಕು ನಾಚಿಕೆಯಿಂದ ಕೂಡಿದೆ ಅಲ್ವಾ. ಅಂತಹದೊಂದು ಶಿರ್ಷಿಕೆ ಇಟ್ಟು ಕವಿತೆಯೊಳಗೆ ಕನ್ನಡವನ್ನು ಕನ್ನಡತಿಯನ್ನ ಮೊದಲಗಿತ್ತಿ ಮಾಡಿದ್ದು ಬೇಂದ್ರೆ ಅಂತಹ ಕವಿತೆಯನ್ನು ಓದಿದ್ದು ನಾಗರಾಜ್ ಕಿನ್ನಾಳ. ಬೇಂದ್ರೆ ಅವರು ಕನಸಿನೊಂದಿಗೆ ನಡೆಸಿದ ಸಂವಾದವನ್ನು ಕವಿತೆ ಮೂಲಕ “ ಕನಸಿನೊಳಗೊಂದು ಕಣಸ ” ಅಂತ ಬರೆದರು ನಮ್ಮ ಪ್ರಶಾಂತ್ ಅವರು ಆ ಕಣಸನ್ನು ಅದ್ಭುತವಾಗಿ ಓದಿದರು. “ ಕನ್ನಡ ನಾಡ ರಾಣಿ ” ಎನ್ನುವ ಬೇಂದ್ರೆ ಅವರ ಈ ಕವಿತೆಯನ್ನು ಸುರಭಿ ರೇಣುಕಾಂಬ ಅವರು ವಾಚಿಸಿದಾಗ ಎಲ್ಲರೂ ಏಕಚಿತ್ತ ಕೊಟ್ಟು ಕೇಳಿದರು.

ಸಖೀಗೀತ...

ಬೇಂದ್ರೆ ಅವರ ಬದುಕಿನ ಒಂದು ಆಯಾಮ ಅಂತಹ ತಿರುವಿನ ಉಲ್ಲೇಖಗಳನ್ನೆ ಹೊತ್ತಿರುವ ಅವರೆ ಬರೆದ ಸಖೀಗೀತ. ಸುಮಾರು ೪೦ ಪುಟಗಳ ಒಂದೆ ಕವಿತೆ ಇದೆ. ಅದರ ಒಂದು ಸಣ್ಣ ಪೀಠಿಕೆಯ ಜಲಕ್ ಅನ್ನು ಹಾಡಿನ ಮೂಲಕ ಸೆಳೆದದ್ದು ಮಾಧವ್ ಸರ್. ರಂಗದಿಂದ ಬೆಳ್ಳಿ ತೆರೆಗೆ ಹೋದರು ಅಲ್ಲಿ ಸಾಹಿತ್ಯದ ಗಂಧ ಗಾಳಿ ಯಾವಾಗಲೂ ಸೂಸುತ್ತದೆ. ನಾನೂ ಒಂದು ಕವಿತೆ ಓದುವೆ ಅಂತ ಓದಲಣಿಯಾಗಿದ್ದು ಜಯದೇವ್ ಸರ್ “ ತಾಯಿ ನುಡಿ ” ಎನ್ನುವಂತ ಕವಿತೆಯನ್ನು ವಾಚಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು. ಕನ್ನಡ ಭಾಷೆ ವಿಲಿನಗೊಂಡಿದ್ದು ಗಡಿನಾಡಗಳಲ್ಲಿ ಅಂತಹ ಗಡಿನಾಡು ಪ್ರದೇಶಗಳನ್ನು ಉಲ್ಲೇಖಿಸಿ - ಉದ್ದೇಶಿಸಿ ಮತ್ತು ಅಲ್ಲಿಯ ವೈಶಿಷ್ಟ್ಯ ವಿಶೇಷಗಳನ್ನು ಮತ್ತಷ್ಟು ಒತ್ತು ಕೊಟ್ಟು ರಚಿಸಿದ ಕವಿತೆ “ ಕನ್ನಡ ಪಾವನ ಪರಂಪರೆ ” ಆ ಕವಿತೆಯನ್ನು ಓದಿ ಕನ್ನಡದ ಬಗ್ಗೆ ಒಲವು ಮೂಡಿಸಿದ್ದು ಜ್ಯೋತಿ ಅವರು.

ಬೇಂದ್ರೆ...

ಅವರು ಒಂದಷ್ಟು ಹಾಡುಗಳನ್ನು ಕೊನೆಯಲ್ಲಿ ಎದೆಗಿಳಿಸಿ ಅದರಲ್ಲೂ “ ಜೋಗಿ ” ಕವಿತೆ ಮೂಲಕ ಮತ್ತಷ್ಟು ಎಲ್ಲರನ್ನೂ ಸೆಳೆದಿದ್ದು ಮಾಧವ್ ಸರ್. ಅದ್ಭುತವಾಗಿ ಹಾಡಿ ನಮ್ಮನ್ನೆಲ್ಲಾ ಮಂತ್ರಮುಗ್ಧರನ್ನಾಗಿಸಿದರು. ಕಾರಣಾಂತರಗಳಿಂದ ಕೆಲವರು ಈ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ‌. ಇದು ನಿರಂತರ ಉತ್ಸಾಹದ ಚಿಲುಮೆಯ ಸಂಚಿಕೆ. ಪ್ರತಿ ತಿಂಗಳಿಗೊಮ್ಮೆ ನಡೆಯುವ ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಭಾಗವಹಿಸಬಹುದು.

ತುಮಕೂರಾಗೂ - ಚಾಮರಾಜನಗರದಾಗೂ ಬೇಂದ್ರೆ ಕಾರ್ಯಕ್ರಮಗಳು ಏಕಕಾಲಕ್ಕೆ ಜರುಗಿದವು.

MORE NEWS

ಬಸವರಾಜು ಮೇಗಲಕೇರಿ ಅವರ 'ಅವರಿವರು'...

05-07-2020 ಬೆಂಗಳೂರು

ಲೇಖಕ ಬಸವರಾಜು ಮೇಗಲಕೇರಿ ಅವರ 'ಅವರಿವರು' ಕೃತಿ ಲೋಕಾರ್ಪಣೆ ಕಂಡಿತು. ಕಾಳೇಗೌಡ ನಾಗವಾರ ಅವರು ಕೃತಿ ಬಿಡುಗಡೆ ...

ಅಸಂಖ್ಯ ಸ್ತ್ರೀಯರ ನೈಜ ಚಿತ್ರಣ ‘ನೋ...

04-07-2020 ಬೆಂಗಳೂರು

‘ಲೇಖಿಕಾ ಸಾಹಿತ್ಯ ವೇದಿಕೆ’ ಆಯೋಜಿಸಿದ್ದ ಪುಸ್ತಕಾವಲೋಕನದಲ್ಲಿ ಈ ಬಾರಿ ಲೇಖಕಿ ಡಿ. ಯಶೋದಾ ಅವರು ಬೇ...

ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕೃ...

03-07-2020 ಬೆಂಗಳೂರು

ಕಥೆಗಾರ ಅಬ್ಬಾಸ್ ಮೇಲಿನಮನಿ ಹಾಗೂ ಸಾಹಿತಿ ಪ್ರಕಾಶ್ ಖಾಡೆ ಅವರು ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕ...

Comments

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events