ಭಾರಗಳ ತೊಡರ ಬಿಡಿಸುವ ಬೆಡಗು 


ಪೇನ್ಮುಲ್ ನಲ್ಲಿ ಪರಿಚಯವಾದ ಸಂತೋಷ್ ಬರೆಯುತ್ತಿದ್ದ ಮೂರು ನಾಲ್ಕು ಸಾಲುಗಳು ಕಟ್ಟಿಕೊಡುತ್ತಿದ್ದ ಚಿತ್ರಗಳಿಗೆ ಬೆರಗಾದವಳು ನಾನು. ಅವನ ಸಾಲುಗಳಲ್ಲಿ ಮೆರೆಯುತ್ತಿದ್ದ ಪಾಂಡಿತ್ಯ ಕಾವ್ಯದ ಬಗೆಗಿನ ಅವನ ಗಂಭೀರ ಪ್ರೀತಿ ಇತರರನ್ನು ಓದಿಕೊಳ್ಳುವ, ತನ್ನನ್ನು ತೀಡಿಕೊಳ್ಳುವ ಅವನ ವಿನಯದಿಂದಲೇ ಸಂತೋಷ್ ಅಪ್ತನಾಗಿದ್ದ. ಈಗ ಆನವ ಒಡಲ ಕಾವು ಕವನ ಸಂಗ್ರಲನಕ್ಕೆ ನನ್ನಿಂದ ನಾಲ್ಕು ಸಾಲುಗಳ ಹಠಕ್ಕೆ ಬಿದ್ದಿರುವ ಅವನ ಪ್ರೀತಿಗೆ ನನ್ನವೆರಡು ಮಾತುಗಳು! ಕವಿ ಸಂತೋಷ್ ಕುಮಾರ್ ಎನ್ ಅವರ ‘ಒಡಲ ಕಾವು’ ಕವನಸಂಕಲನದಲ್ಲಿ ಲೇಖಕಿ ರಂಗಮ್ಮ ಹೊದೆಕಲ್ ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

ಸೀದ ಬದುಕನ್ನು ಬಗೆದು
ಎದುರಿಗಿಡುತ್ತದಲ್ಲ ಪದ್ಯ
ಆದ ಓದೋಣವೇ... (ವಾಚನ ಕವಿತೆಯಿಂದ)

ಎನ್ನುತ ಕನ್ನಡ ಕಾವ್ಯ ಕ್ಷೇತ್ರಕ್ಕೆ ತಮ್ಮ ಒಡಲ ಕಾವು ಕವನ ಸಂಕಲನದ ಮೂಲಕ ಮುಖ ಮುಖಿಯಾಗಿರುವ ಸಂತೋಷನ ಕವಿತೆಗಳಲ್ಲಿ ಬದುಕನ್ನು ಬಗೆದ ಕವಿತೆಗಳಿವೆ ಏಕಾಂತದ ಸಂಕಟ, ಸಂತನಗಳಿವೆ' ಕನಸುಗಳ ಚಿತ್ತಾರವಿದೆ ! ವಿಷಾದವೂ ಇದೆ ! ವಿಶ್ವಾಸವೂ ಇದೆ !

ಪೇನ್ಮುಲ್ ನಲ್ಲಿ ಪರಿಚಯವಾದ ಸಂತೋಷ್ ಬರೆಯುತ್ತಿದ್ದ ಮೂರು ನಾಲ್ಕು ಸಾಲುಗಳು ಕಟ್ಟಿಕೊಡುತ್ತಿದ್ದ ಚಿತ್ರಗಳಿಗೆ ಬೆರಗಾದವಳು ನಾನು. ಅವನ ಸಾಲುಗಳಲ್ಲಿ ಮೆರೆಯುತ್ತಿದ್ದ ಪಾಂಡಿತ್ಯ ಕಾವ್ಯದ ಬಗೆಗಿನ ಅವನ ಗಂಭೀರ ಪ್ರೀತಿ ಇತರರನ್ನು ಓದಿಕೊಳ್ಳುವ, ತನ್ನನ್ನು ತೀಡಿಕೊಳ್ಳುವ ಅವನ ವಿನಯದಿಂದಲೇ ಸಂತೋಷ್ ಅಪ್ತನಾಗಿದ್ದ. ಈಗ ಆನವ ಒಡಲ ಕಾವು ಕವನ ಸಂಗ್ರಲನಕ್ಕೆ ನನ್ನಿಂದ ನಾಲ್ಕು ಸಾಲುಗಳ ಹಠಕ್ಕೆ ಬಿದ್ದಿರುವ ಅವನ ಪ್ರೀತಿಗೆ ನನ್ನವೆರಡು ಮಾತುಗಳು!

ಕಾವ್ಯ, ಬೆಳಕು, ಧ್ಯಾನ, ಆತ್ಮ ಸಂಗಾತ... ಮತ್ತು ಕವಿತೆ ಎಲ್ಲವೂ ಎನ್ನುವ ಮಾತಿದೆ.

ನಮ್ಮ ಭಾವಗಳು ಕಂಡ ಚಿತ್ರಗಳು ಅನುಭವಗಳು ಸನ್ನಿವೇಶಗಳು ಬದುಕಿನ ಪ್ರೀತಿಯ ಪಾತ್ರಗಳು ಅವುಡುಗಚ್ಚಿದ ಬಿರುಗಳು ಕಣ್ಣಲ್ಲಿ ನೀರು ತರಿಸಿದ ಸುಜಗಳು ಇವೆಲ್ಲವೂ ಹದವಾಗಿ ಪದಗಳಲ್ಲಿ ಸೇರಿ ವ್ಯಕ್ತವಾಗುವ ರವಿಕೆ ನಮ್ಮನ್ನು ನಮಗೆ ಕಾಣಿಸುವ ಜೊತೆಗೆ ಲೋಕವನ್ನು ನೋಡಲು ಜತೆಯಾಗುತ್ತದೆ.

ಸಂತೋಷನ ಕವಿತೆಗಳಲ್ಲಿ ಅವನು ತನ್ನನ್ನು ತಾನು ನೋಡಿಕೊಂಡಿದ್ದಾನೆ, ಸುತ್ತಲಿನ ಕಂಡಿದ್ದಾನೆ. 'ಉಸಿರಿಗೂ ಉಸಿರಾದವಳ ಚೆಲುವ' ಬಣ್ಣಿಸುವ ಹಾಗೆ ಕ್ರೌರ್ಯಕ್ಕೆ ಬಲಿಯಾಗುವ ಹೆಣ್ಣುಗಳ ಆರ್ತತೆಯೂ ಇವನನ್ನು ತಟ್ಟುತ್ತದೆ.

ಹೆಸರು ಎನ್ನುವುದು ಈ ಹೊತ್ತಿನ ಪ್ರತಿಷ್ಠೆಯಾಗಿರುವಾಗ
ಹಕ್ಕಿ ಹಾಡಿಗ, ಚುಕ್ಕಿ ಮಿನುಗಿಗೆ
ಇಕ್ಕೆಲಗಳಲ್ಲಿ ಹೊಕ್ಕಿರುವ ಬೆಳಕಿಗೆ
ಯಾವ ಹೆಸರು! (ನನಗೊಂದು ಹೆಸರೇ ಬೇಡ ಕವಿತೆಯಿಂದ)

ಎನ್ನುವ ಸಂತೋಷನ ಉಲಿಯುತ್ತೇನೆ. ಉಸಿರಿರುವವರೆಗೂ ಹೊಸ ಬೆಳಕೊಂದು ತಾಕಿ ಸುಶೀಲನಾಗಲು ಎನ್ನುವ ಆಶಯ ಪ್ರೀತಿ ಉಳಿಸುತ್ತದೆ. ಗೆಲುವಿನ ಕಾಲಿಗೆ ಗಿಲಕಿ ಕಟ್ಟಿ ಬೀಗುವವರ ನಡುವೆ ಸೋಲಿನ ನಿಯತ್ತು ಬಲ್ಲ ಕವಿ 'ಖಾಲಿ ಇರದು ನನ್ನ ಹೃದಯದ ಕಡಲು' ಎಂದು ವಿಶ್ವಾಸ ಮೆರೆಯುತ್ತಾನೆ.

ನನ್ನ ಪರಿಚಯಕ್ಕೊಂದು ಕವಿತೆ ಬೇಕೆನ್ನುವ ಸಂತೋಷನಿಗೆ 'ನನ್ನನ್ನು ನಾನು ಹುಡುಕಿ ಕೊಳ್ಳಲು' ಕವಿತೆಯನ್ನು ದಕ್ಕಿಸಿಕೊಳ್ಳುವ ಹರವಿದೆ.

ವಿಷಾದವೇ ಹೆಚ್ಚಿರುವ ಕವಿತೆಗಳಿದ್ದರೂ 'ವಿಷಾದಗಳನ್ನು ಮೀರುವುದು ವಿಷಾದಗಳನ್ನು ಕಂಡಾಗಲೇ' ಎನ್ನುವ ಅರಿವು ಸಂತೋಷನಿಗಿದೆ. 'ನತ್ತಿ ಸವರಲು ಬಂದೇ ಬರುತ್ತದೆ ನಾಳೆಯೊಂದು' ಎನ್ನುವ ಅವನ ವಿಷಾದಗಳನ್ನು ಮೀರಿ ಬೆಳೆಯುವುದು, ಬರೆಯುವುದು ಅವನಿಗೆ ಸಾಧ್ಯ ಎನ್ನುವುದನ್ನು ಸೂಚಿಸುತ್ತದೆ.

ಮಡಿಲ ಕಾವನ್ನೇ ತನ್ನ ಶಕ್ತಿಯಾಗಿಸಿಕೊಂಡಿರುವ ಸಂತೋಷ್ ತಾನೇ ಬರೆದುಕೊಳ್ಳುವಂತೆ 'ಕವಿತ ಥೇಟ್ ಮಗುವಿನ ಹಾಗೆ! ಸಂತೋಷನ ಇಷ್ಟು ಕವಿತೆಗಳಲ್ಲಿ ಕೆಲವು ಕವಿತೆಗಳು ಹುಟ್ಟಿವೆ ಕೆಲವು ಕವಿತೆಗಳು ಹಠಕ್ಕೆ ಬಿದ್ದು ಕಟ್ಟಿಸಿಕೊಂಡಿವೆ; ಕೆಲವು ಹಗುರಾಗಿವ ಕಲವು ತೂಕ ಉಳಿಸಿಕೊಂಡವ! ಕೆಲವು ನೇರಾ ಎದಗ ಇಳಿಯುತ್ತವೆ!

ಕಣ್ಣು, ಎದೆಗಳ ಆದ್ರ್ರತೆಯನ್ನು ಕಾಪಿಟ್ಟುಕೊಳ್ಳಬಲ್ಲ ಸಂತೋಷ್ ಬರೆಯುತ್ತ, ಓದುತ್ತ ಇನ್ನಷ್ಟು ಮಾಗುವ ಎಲ್ಲ ಲಕ್ಷಣಗಳಲ್ಲಿ ಕಾಣಿಸಿದ್ದಾನೆ. ಕಾವ್ಯದ ಬಗೆಗಿನ ಪ್ರೀತಿ ಮತ್ತು ಇದು ಕವಿತೆಯಾಗಲಿಲ್ಲವೇನೋ ಎನ್ನುವ ಅವನ ಅತಂಕ ಅವನನ್ನು ಮತ್ತೂ ಬೆಳೆಸುತ್ತದೆ.

ಸಂಕಲನವೊಂದನ್ನು ಓದುವಾಗ ಒಂದೊಂದೇ ಕವಿತೆಯನ್ನು ಹಿಡಿದು ಎಳಡಾಡುವುದು' ಸರಿಯಲ್ಲ ಎನ್ನುವ ನಮ್ಮ ಸ.ರಘುನಾಥ ಮೇಷ್ಟ್ರು ಮಾತನ್ನು ನಾನೂ ನಂಬುತ್ತೇನೆ. ಈ ಕವಿತೆಯ ಈ ಸಾಲು ಹೊಳದಿದ, ತೇವ ಇಲ್ಲ, ಈ ಶಬ್ದ ಇಲ್ಲಿರಬಾರದಿತ್ತು ಹೀಗೆ ತುಂಡು ತುಂಡು ಮಾಡಿ ಹೇಳುವುದು ಬೇಡವೆನಿಸಿದ ಕಾರಣ ನಾನು ಸಂತೋಷನ ಎಲ್ಲಾ ಕವಿತೆಗಳ ಸಾಲನ್ನು ಇಲ್ಲಿ ದಾಖಲಿಸುತ್ತಿಲ್ಲ.ಕವಿತೆ, ಕವಿಯ ಆಟದಲ್ಲಿ ಭಾಗವಹಿಸುವ ಓದುಗನೂ ಕವಿತೆಯ ದಿಕ್ಕಿಗೆಯೇ ಹೊರಳಿ ಅದರ ಸೆಳೆತವನ್ನು ಅನುಭವಿಸುತ್ತಾನೆ.

ಸಂತೋಷನ ಆರ್ದ್ರತೆ, ಸಮಾಜಮುಖಿ ಮನೋಭಾವಗಳ ಛಲವಾಗಿರುವ ಇಲ್ಲಿನ ಬಹಳಷ್ಟು ಕವಿತೆಗಳು ಅವನು ಮತ್ತೂ ಬರೆಯಬಹುದಾದ ಭರವಸೆ ಹುಟ್ಟಿಸುತ್ತದೆ. 'ಕವಿತ ಕವಿಯನ್ನಂತೂ ಪರಿಚಯಿಸುತ್ತದೆ' ಎನ್ನುವ ಮಾತಿನಂತೆ ಸಂತೋಷನು ತನ್ನ ಈವರಗಿನ ಕಾವ್ಯದಲ್ಲಿ ಇಲ್ಲದ್ದನ್ನು, ಇರಬೇಕಾದ್ದನ್ನು ಗುರುತಿಸುವಲ್ಲಿ ಶಕ್ತನಾಗುತ್ತಾನೆ.

ಅಕಾಂಕ್ಷೆ ಬೇರನ್ನು ಒಣಗಿಸಿಕೊಳ್ಳದ ತೆರೆದ ಬಯಲಿಗೆ, ಗಾಳಿಗೆ, ಬೆಳಕಿಗೆ ತನ್ನನ್ನು ಇನ್ನಷ್ಟು ಒಗ್ಗಿಸಿಕೊಳ್ಳುವ ಮೂಲಕ ಸಂತೋಷ್ ಬೆಳೆಯುತ್ತಿರಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.


MORE FEATURES

ಕೋಮುವಾದಿ ಚಕ್ರವ್ಯೂಹ ಭೇದಿಸುವವರ ಕೈಪಿಡಿ ‘ನಡು ಬಗ್ಗಿಸದ ಎದೆಯ ದನಿ’

29-03-2024 ಬೆಂಗಳೂರು

'ಕರೋನಾ ಸಂದರ್ಭದಲ್ಲಿ ಅಕಾಲಿಕ ಮರಣವನ್ನಪ್ಪಿದ ಮಹೇಂದ್ರ ಕುಮಾರ್ ರವರ ಜೀವನದ ಅನುಭವಗಳ ಬರವಣಿಗೆ ಪ್ರಾರಂಭವಾಗಿ ಅರ್ಧ...

ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ

29-03-2024 ಬೆಂಗಳೂರು

"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕ...

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...