"ಸಾಮಾನ್ಯವಾಗಿ ಜೀವನ ವೃತ್ತಾಂತವನ್ನು ಸ್ವಯಂ ಲೇಖಕರೇ ಬರೆದುಕೊಳ್ಳುತ್ತಾರೆ ಇಲ್ಲವೇ ಹೇಳಿ ಬರೆಯಿಸುತ್ತಾರೆ. ಆದರೆ ಕೇಶವಮೂರ್ತಿಗಳ ಜೀವನ ವೃತ್ತಾಂತವನ್ನು ಸಂಬಂಧಿಕರು, ಸ್ನೇಹಿತರನ್ನು ಸಂಪರ್ಕಿಸಿ ಅವರು ಕಂಡಂತೆ ಇಲ್ಲಿ ಕಟ್ಟಿ ಕೊಡಲಾಗಿದೆ. ಹಾಗೆಯೇ ಕ್ರಿಕೆಟ್ ದಿಗ್ಗಜರು ಆಯಾ ಕಾಲಕ್ಕೆ ತಕ್ಕಂತೆ ಬರೆದ ಲೇಖನಗಳನ್ನು ಇಲ್ಲಿ ದಾಖಲಿಸಿದ್ದೇನೆ," ಎನ್ನುತ್ತಾರೆ ಕಗ್ಗೆರೆ ಪ್ರಕಾಶ್. ಅವರು ತಮ್ಮ ‘ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು’ ಕೃತಿಗೆ ಬರೆದ ಸಂಪಾದಕನ ಮಾತು.
ಚಕೇಮೂ, ಸಿಕೆಎಂ, ಮೂರ್ತಿ-ಇದೆಲ್ಲ ಸೇರಿ ಹೇಳುವುದಾದರೆ ಅವರೇ ಚನ್ನಗಿರಿ ಕೇಶವಮೂರ್ತಿ. ಇವರು ಕನ್ನಡದ ಪತ್ತೇದಾರಿ, ಸಾಮಾಜಿಕ ಕಾದಂಬರಿ ಬರೆಯುವ ಮೂಲಕ 1963ರಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಪದಾರ್ಪಣೆ ಮಾಡುತ್ತಾರೆ. ಇದುವರೆಗೂ 25ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಹಿರಿಯ ಸಾಹಿತಿಯಾಗಿ ನಮ್ಮೊಂದಿಗಿದ್ದಾರೆ. ಇವರು ತಮ್ಮ ಪುಸ್ತಕಗಳಲ್ಲಿ ‘ನಾನೊಬ್ಬ ಕನ್ನಡ ಮಾತೆಯ ಸೇವಕ’ ಎಂದು ಹೇಳಿಕೊಂಡಿದ್ದಾರೆ. ಈ ಮಾತು ಅಕ್ಷರಶಃ ನಿಜ. ಏಕೆಂದರೆ 85ರ ಈ ವಯಸ್ಸಿನಲ್ಲೂ ಕನ್ನಡದ ಮನಸ್ಸುಗಳಿಗೆ ತುಡಿಯುತ್ತಾರೆ, ಮಿಡಿಯುತ್ತಾರೆ.
ತಮ್ಮ 24ನೇ ವರ್ಷಕ್ಕೆ ‘ವಿಲ್ಲಿನ ರಹಸ್ಯ’ ಎಂಬ ಮೊದಲ ಪತ್ತೇದಾರಿ ನಾಟಕ, ನಂತರ ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಾರೆ. ಆಮೇಲೆ ಸಾಮಾಜಿಕ ಕಾದಂಬರಿಗಳನ್ನೂ ರಚಿಸುತ್ತಾರೆ. ಆರು ದಶಕಗಳಿಗೂ ಮೀರಿ ಚಕೇಮೂ ಅವರ ಸಾಹಿತ್ಯ ಸೇವೆ ಮುಂದುವರಿದಿದೆ. ಇವರು ಬರೆದ ಎಲ್ಲ ಪುಸ್ತಕಗಳಲ್ಲಿ ಸಂಖ್ಯೆಗಿಂತ ಕೃತಿ ಮೌಲ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇವರ ಭಾಷೆ, ಶೈಲಿ, ನಿರೂಪಣಾ ವಿಧಾನ ಪುಸ್ತಕಗಳನ್ನು ಲವಲವಿಕೆಯಿಂದ ಓದಿಸಿಕೊಳ್ಳುತ್ತವೆ.
ಕ್ರಿಕೆಟ್ ಪುಸ್ತಕಗಳ ರಚನೆಯಲ್ಲೂ ಇವರದು ಅಪಾರ ಆಸಕ್ತಿ. ಭಾರತೀಯ ಕ್ರಿಕೆಟ್ ಇತಿಹಾಸ ಪುಸ್ತಕವು ಕನ್ನಡದಲ್ಲಿ ಕ್ರಿಕೆಟ್ ಬಗ್ಗೆ ಬಂದ ಪ್ರಥಮ ಕೃತಿ. ಭಾರತದ ಕ್ರಿಕೆಟ್ ನಾಯಕರು, ವಿಶ್ವ ಕ್ರಿಕೆಟ್‌ನಲ್ಲಿ ಕರ್ನಾಟಕದ ಆಟಗಾರರು, ಭಾರತ ರತ್ನ ಸಚಿನ್ ತೆಂಡೂಲ್ಕರ್, ಇರಾನಿ ಕಪ್ ಪುಸ್ತಕಗಳು ಕ್ರಿಕೆಟ್ ಸಾಹಿತ್ಯದಲ್ಲಿ ದಾಖಲಾರ್ಹವಾಗಿವೆ. ಇವರೊಬ್ಬ ಕೃತಿ ರಚನಾಕಾರರಷ್ಟೇ ಅಲ್ಲದೇ ಇಡೀ ವಿಶ್ವದ ಕ್ರಿಕೆಟ್ ಆಟಗಾರರ, ಪತ್ರಿಕೆಗಳ ಗಮನ ಸೆಳೆದಿರುವ ಕನ್ನಡದ ಶ್ರೇಷ್ಠ ಅಂಕಿ ಸಂಖ್ಯಾ ಶಾಸ್ತçಜ್ಞರೂ ಆಗಿದ್ದಾರೆ. ಹಾಗಾಗಿ ಕ್ರಿಕೆಟ್ ಕ್ಷೇತ್ರದಲ್ಲೂ ೫೦ಕ್ಕೂ ಹೆಚ್ಚು ವರ್ಷಗಳ ಕಾಲ ಅಂಕಿ ಅಂಶ ತಜ್ಞರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೇಂದ್ರ ಸರ್ಕಾರದ ಬೆಂಗಳೂರಿನ ಕಾಫಿ ಬೋರ್ಡ್ನಲ್ಲಿ ಉಪ ಕಾರ್ಯದರ್ಶಿಯಾಗಿ ನಿವೃತ್ತರಾದರೂ ಪ್ರವೃತ್ತಿಯಲ್ಲಿ ಇಂದಿಗೂ ಇವರು ಸಕ್ರಿಯರು.
ಕಳೆದ ಹತ್ತು ವರ್ಷಕ್ಕೂ ಹೆಚ್ಚು ಕಾಲ ನಾನು ಅವರ ಒಡನಾಡಿಯಾಗಿರುವೆ. ಒಟ್ಟಾರೆ ಹೇಳಬೇಕೆಂದರೆ ಒಂದು ರೀತಿಯಲ್ಲಿ ನಾನೂ ಅವರ ಕುಟುಂಬದ ಸದಸ್ಯ ಕೂಡ. ಅಷ್ಟೊಂದು ಪ್ರೀತಿ ವಿಶ್ವಾಸ ನಂಬಿಕೆ ನನ್ನ ಮೇಲೆ ಚನ್ನಗಿರಿ ಕೇಶವಮೂರ್ತಿ ಹಾಗೂ ಅವರ ಕುಟುಂಬಸ್ಥರಿಗಿದೆ. ಇದೆಲ್ಲದರ ಪ್ರತಿಫಲವಾಗಿ ‘ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು’ ಪುಸ್ತಕ ಸಿದ್ಧ ಮಾಡಿರುವೆ. ಇದು ಅಪ್ಪಟ ಸ್ನೇಹಭಾವ, ಸರಳ, ಸಜ್ಜನಿಕೆಯ ಚನ್ನಗಿರಿ ಕೇಶವಮೂರ್ತಿ ಅವರ ಬದುಕು- ಬರಹ, ಸಾಧನೆಯ ಮೇರು ಪ್ರತಿಭೆಯ ಯಶೋಗಾಥೆ ಪುಸ್ತಕ.
ಸಾಮಾನ್ಯವಾಗಿ ಜೀವನ ವೃತ್ತಾಂತವನ್ನು ಸ್ವಯಂ ಲೇಖಕರೇ ಬರೆದುಕೊಳ್ಳುತ್ತಾರೆ ಇಲ್ಲವೇ ಹೇಳಿ ಬರೆಯಿಸುತ್ತಾರೆ. ಆದರೆ ಕೇಶವಮೂರ್ತಿಗಳ ಜೀವನ ವೃತ್ತಾಂತವನ್ನು ಸಂಬAಧಿಕರು, ಸ್ನೇಹಿತರನ್ನು ಸಂಪರ್ಕಿಸಿ ಅವರು ಕಂಡಂತೆ ಇಲ್ಲಿ ಕಟ್ಟಿ ಕೊಡಲಾಗಿದೆ. ಹಾಗೆಯೇ ಕ್ರಿಕೆಟ್ ದಿಗ್ಗಜರು ಆಯಾ ಕಾಲಕ್ಕೆ ತಕ್ಕಂತೆ ಬರೆದ ಲೇಖನಗಳನ್ನು ಇಲ್ಲಿ ದಾಖಲಿಸಿದ್ದೇನೆ. ಇದೊಂದು ಕೇಶವಮೂರ್ತಿಗಳ ಜೀವನದ ಯಶೋಗಾಥೆಯನ್ನು ಕಟ್ಟಿಕೊಡುವ ಹೊಸ ಬಗೆಯ ಪ್ರಯತ್ನವಾಗಿದೆ.
ತಂದೆಯ ಬಗ್ಗೆ ಹೀಗೊಂದು ಪುಸ್ತಕ ಸಿದ್ಧ ಮಾಡಿ ಎಂದು ಅವರ ಮಗ ಸಂಜಯ್ ಹೇಳಿದರು. ಈ ಪ್ರಸ್ತಾಪವನ್ನು ನಾನು ಚಕೇಮೂ ಅವರ ಮುಂದಿಟ್ಟಾಗ ಸಾರಾ ಸಗಟಾಗಿ ತಿರಸ್ಕರಿಸಿಬಿಟ್ಟರು. ‘ನನ್ನದು ಅಂಥದ್ದೇನೂ ಸಾಧನೆಯೇ ಅಲ್ಲ, ನಾನೊಬ್ಬ ಸಾಮಾನ್ಯ ಮನುಷ್ಯ. ನನ್ನ ಬಗ್ಗೆ ಪುಸ್ತಕ ಬೇಡ’ ಎಂದುಬಿಟ್ಟರು. ಆಮೇಲೆ ನಾನು, ಅವರ ಮಗ ಸಂಜಯ್, ಸಿಕೆಎಂ ಒಪ್ಪಿಸಲು ಹರಸಾಹಸವನ್ನೇ ಮಾಡಿದೆವು. ತದನಂತರದಲ್ಲಿ ನಮ್ಮ ಬಲವಂತಕ್ಕೆ ಒಪ್ಪಿಕೊಂಡರು.
ಈ ಪುಸ್ತಕದಲ್ಲಿ ಸಾಧ್ಯವಿರುವ ಎಲ್ಲ ವಿಷಯಗಳನ್ನು ನಾನೊಬ್ಬ ಸಂಪಾದಕನಾಗಿ ದಾಖಲು ಮಾಡಿರುವೆ. ನಾನು ಈ ಕೃತಿಯ ಬಗ್ಗೆ ಹೆಚ್ಚು ಹೇಳುವ ಬದಲು ನೀವೇ ಓದಿ ಪ್ರತಿಕ್ರಿಯೆ ನೀಡಿದರೆ ಉತ್ತಮ ಎಂಬುದು ನನ್ನ ಭಾವನೆ. ಈ ಕೃತಿ ನನ್ನ ಪ್ರೀತಿಯ ಪುಸ್ತಕಗಳಲ್ಲಿ ಪ್ರಮುಖವಾದದ್ದು. ಇಂಥ ಒಂದು ಕಾರ್ಯ ಮಾಡಿದ ಹೆಮ್ಮೆ ನನಗಿದೆ.
“ಕವಿಯು ಈ ಕವನವು ಹೊಸ ವರ್ಷದ ಆರಂಭವನ್ನು ಸನಾತನ ಸಾಂಸ್ಕೃತಿಕ ಹಬ್ಬಗಳ ಹಿನ್ನೆಲೆಯಲ್ಲಿ ಕವಿಯು ವೈಭೋಗದಿಂದ ವಿವರಿ...
“ಸಾಹಿತ್ಯಿಕವಾಗಿ ಶ್ಯಾಮಲಾ ಇಷ್ಟರ ಮಟ್ಟಿನ ಸಫಲತೆ ಪಡೆದಿದ್ದರೆ ಅದರಲ್ಲಿ ಅವರ ಹೋರಾಟದ ಕತೆಯೂ ಇದೆ,” ಎನ್ನ...
“ಇದರಲ್ಲಿ ವಿವಿಧ ಕಾಲಘಟ್ಟದಲ್ಲಿ ಬರೆದ ಅವರ ಬಹುಪಾಲು ಅತ್ಯುತ್ತಮ ಕತೆಗಳು ಇರುವುದರಿಂದ ಪರೋಕ್ಷವಾಗಿ ಇವು ಅವರ ಪ್...
©2025 Book Brahma Private Limited.