ಭಾವನೆಗಳ ಬಲೆಯಲ್ಲಿ ಹುಟ್ಟು ಪಡೆದ ‘ನಾ ಕಂಡ ಕನಸು’


ಉತ್ತಮ ಶೀರ್ಷಿಕೆಯನ್ನು ಹೊಂದಿರುವ ಈ ಕವನ ಸಂಕಲನ ಸುಮಾರು ಐವತ್ತು ಕವನಗಳನ್ನು ಒಳಗೊಂಡಿದೆ. ಒಂದೊಂದು ಕವನ ಸವಿದವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೇ ಒಂದು ಕವನಕ್ಕೂ ಮತ್ತೊಂದು ಕವನಕ್ಕೂ ಎಷ್ಟೊಂದು ಸಾಮ್ಯತೆ ಕಾಪಾಡಿಕೊಂಡಿದ್ದಾರೆ ಎನ್ನುತ್ತಾರೆ ಕಾದಂಬರಿಕಾರ ಎಸ್. ರಾಜುಕವಿ ಸೂಲೇನಹಳ್ಳಿ. ಅವರು ಪ್ರತಿಭಾ ಆರ್ ಮರಗೋಳ್ ಅವರ ‘ನಾ ಕಂಡ ಕನಸು’ ಕೃತಿಯಲ್ಲಿ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಕೃತಿ: ನಾ ಕಂಡ ಕನಸು
ಲೇಖಕರು: ಪ್ರತಿಭಾ ಆರ್ ಮರಗೋಳ್
ಪುಟ ಸಂಖ್ಯೆ: 80
ಬೆಲೆ: 100
ಮುದರಣ: 2021
ಪ್ರಕಾಶಾಕರು: ತನುಶ್ರೀ ಪ್ರಕಾಶನ

ನಾ ಕಂಡ ಕನಸು ಮುನ್ನುಡಿ
ಕನ್ನಡ ಸಾಹಿತ್ಯ ಪ್ರಾಚೀನ ಕಾಲದಿಂದಲೂ ತನ್ನದೇ ಆದ ಇತಿಹಾಸವಿದೆ. ಪ್ರಸ್ತುತ ದಿನ ಮಾನಗಳಲ್ಲಿ ಎಷ್ಟೋ ಉದಯೋನ್ಮುಖ ಕವಿಗಳು ಅವರದ್ದೇ ಆದ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಕಥೆ, ಕವನ, ಕಾದಂಬರಿ, ಗಜಲ್ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸುವ ಮೂಲಕ ಪಾದಾರ್ಪಣೆ ಮಾಡಿ ಕನ್ನಡ ನಾಡಿನ ಕಲೆ, ಸಂಸ್ಕೃತಿ, ಭಾಷೆ, ಜೀವನ ಉಳಿಸುವ ಪ್ರಯತ್ನಕ್ಕೆ ಆಸಕ್ತ ತೋರುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ. ಅಂತಹವರ ಸಾಲಿಗೆ ಸೇರುವ ನಾ ಕಂಡ ಆಪರೂಪದ ಕವಯಿತ್ರಿ ಕು. ಪ್ರತಿಭಾ ಆರ್. ಮರಗೋಳ ಇವರು ಮೂಲತಃ ಕಲಬುರಗಿ ಜಿಲ್ಲೆಯ ಶಹಬಾದ ತಾಲ್ಲೂಕಿನ ಹೊನಗುಂಟ ಗ್ರಾಮದವರು. ಬಾಲ್ಯದಿಂದಲೇ ಉತ್ತಮ ಶಿಕ್ಷಣ ಪಡೆದು ಪ್ರಸ್ತುತ ಬಿ. ಎಸ್. ಸಿ. ಮುಗಿಸಿ ಶಿಕ್ಷಕರು ಆಗುವ ನಿಟ್ಟಿನಲ್ಲಿ ಬಿ.ಈಡಿ ಮಾಡುತ್ತಿದ್ದಾರೆ. ವ್ಯಕ್ತಿತ್ವದಲ್ಲಿ ಮುಗ್ಧತೆ ಅಂಟಿಕೊಂಡಿರುವ ಬಹು ದೊಡ್ಡ ಗುಣ. ಸರ್ವರನ್ನು ಪ್ರೀತಿಯಿಂದ ಹೃದಯ ವೈಶಾಲ್ಯತೆ ಹೇಳತೀರದು. ಮನದ ತುಂಬೆಲ್ಲ ಒಳ್ಳೆಯತನ ನೆಲೆಯೂರಿದೆ. ಹತ್ತನೆ ತರಗತಿ ಓದುತ್ತಿದ್ದಾಗಲೇ ಕವನ ರಚನೆ ಮಾಡುವ ಹವ್ಯಾಸ ರೂಢಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಅವುಗಳನ್ನು ಹಾಗೆಯೇ ಹಾಳೆಯಲ್ಲಿ ಬರೆದು ಸಂಗ್ರಹಿಸಿ ಇಟ್ಟಿದ್ದರು. ನನ್ನ ಸಂಪರ್ಕಕ್ಕೆ ಸಿಕ್ಕಾಗಿನಿಂದ ಬೆಳೆಸುವ ನಾಡಿಗೆ ಇಂತಹ ಆಪರೂಪದ ಪ್ರತಿಭೆ ಎಲ್ಲೋ ಕಾಣೆಯಾಗಬಾರದು ಎಂಬ ಸಮಾಜ ಮುಖಿ ದೃಷ್ಟಿಯಿಂದ ಬೆಂಬಲವಾಗಿ ನಿಂತು ಚೊಚ್ಚಲ ಕವನ ಸಂಕಲನ ಮಾಡಲು ಹೊರಟಿದ್ದಾರೆ. ಅದಕ್ಕೆ ತುಂಬು ಹೃದಯದ ಅಭಿನಂದನೆಗಳು ಕೋರುತ್ತೇನೆ.

ಚೊಚ್ಚಲ ಕವನ ಸಂಕಲನ ‘ನಾ ಕಂಡ ಕನಸು' ಉತ್ತಮ ಶೀರ್ಷಿಕೆಯನ್ನು ಹೊಂದಿರುವ ಈ ಕವನ ಸಂಕಲನ ಸುಮಾರು ಐವತ್ತು ಕವನಗಳನ್ನು ಒಳಗೊಂಡಿದೆ. ಒಂದೊಂದು ಕವನ ಸವಿದವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೇ ಒಂದು ಕವನಕ್ಕೂ ಮತ್ತೊಂದು ಕವನಕ್ಕೂ ಎಷ್ಟೊಂದು ಸಾಮ್ಯತೆ ಕಾಪಾಡಿಕೊಂಡಿದ್ದಾರೆ. ನಾ ಒಳ ಹೊಕ್ಕು ವಿಮರ್ಶಿಸಿದಾಗ ಆರಂಭದ ಕವನಗಳು ಮತ್ತು ಆವುಗಳ ಶೀರ್ಷಿಕೆಗಳು ಕನ್ನಡದ ಈಗಿನ ಸ್ಥಿತಿ ಗತಿ, ಕರೋನಾ, ಒಲ್ಲದ ಮದುವಿಗೆ, ಸಿರಿತನ ಬಂದರೂ ಬಡತನ ಇದ್ದರೂ, ನನ್ನೆಲ್ಲ ಪದಗಳು ನೀವು, ಯುಗದ ಕವಿ, ನಗಬೇಕು ನೀನು, ಕವನ ಎನ್ನೋ ಊರಿಗೆ, ತಾಯಿ ನೀನು, ನನ್ನ ಒಳಗೊಂದು ಪ್ರಪಂಚ, ಬಿಸಿ ಬಿಸಿ ಹುಗ್ಗಿ, ತೂಗುವೇ ತೊಟ್ಟಿಲ, ಹರಸಿದಳು ಹಡೆದವ್ವ, ನಾನೊಮ್ಮೆ ಮರವಾದೆ, ನಾ ಕಂಡ ಕನಸು, ಎ ಜೀವನವೇ, ಅವಳಿಗೆ ಗೌರವಿಲ್ಲವೇ, ಮಳೆಯ ಮುತ್ತಿನ ಮಣಿಗಳು, ಕಂಗೋಳಿಸುತ್ತಿದೆ ಕಲಬುರ್ಗಿ, ಅನ್ನದಾತ, ಕನ್ನಡ ನಾಡು, ಪ್ರಶ್ನಾರ್ಥಕವಾಗಿದೆ. ಸೊಳ್ಳೆಯ ಸಾಮ್ರಾಜ್ಯ ಈ ಎಲ್ಲಾ ಕವನಗಳನ್ನು ಪರಿ ಪರಿಯಾಗಿ ಅರ್ಥೈಸಿಕೊಂಡು ಓದಿದಾಗ ನಿಜಕ್ಕೂ ಇವರ ಆಗಾಧ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಕನ್ನಡ ಕುರಿತು ಅಪಾರ ಪ್ರೇಮದ ಕವಿತೆ ಎಷ್ಟು ಚೆಂದ ತೋರಿಸುತ್ತದೆ. ನಂತರ ಕರೋನಾ ಹಾವಳಿ ತತ್ತರಿಸಿದ ಬದುಕಿನ ಕವನ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಇನ್ನೂ ಮುಂತಾಗಿ ಒಂದೊಂದು ಕವನದಲ್ಲಿ ಪದಗಳ ಬಳಕೆ ಆದರ ಸಾರ ವಿವರಣೆ ಮನ ಸೆಳೆಯಿತು ಎಲ್ಲಾ ಕವಿತೆ ಪ್ರತಿಯೊಂದು ವಿಷಯದ ಬಗ್ಗೆ ಮಾತನಾಡುತ್ತೇವೆ ಯಾವುದೇ ಕವನದಲ್ಲಿ ಪುನರ್ಬಳಕೆ ಆಗಿಲ್ಲ. ಹೊರತಾಗಿ ಆ ವಿಷಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕವನ ಮೂಡಿ ಬಂದಿರುವುದು ಶ್ಲಾಘನೀಯ ಎನ್ನಬಹುದು. ಇಲ್ಲಿ ಕವಯಿತ್ರಿ ಕೇವಲ ತನ್ನನ್ನು ಕೇಂದ್ರಿಕರಿಸದೇ ಸಮಾಜದಲ್ಲಿ ಕಾಣುವ ದೃಶ್ಯಗಳನ್ನು ಎಳೆ ಎಳೆಯಾಗಿ ಅವುಗಳಿಗೆ ಪರಿಹಾರ ಕೊಡುವ ಮಾರ್ಗದಲ್ಲಿ ಕವನ ರಚನೆ ಮಾಡಿದ್ದಾರೆ ಅವುಗಳ ಮೌಲ್ಯ ಎತ್ತಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಇಲ್ಲಿ ರೈತ, ಹೆಣ್ಣು, ಕನ್ನಡ, ಪ್ರಕೃತಿ, ಎಲ್ಲವನ್ನು ಸೂಕ್ಷ್ಮತೀತವಾಗಿ ಗಮನಿಸಿ ಕವನ ರಚಿಸಿರುವುದು ಸೋಜಿಗ ಆಗಿದೆ. ನಾ ಕಂಡ ಉತ್ತಮ ಕವನ ಗಳಲ್ಲಿ ಇದು ಒಂದು ಈ ಕೆಳಗಿನಂತಿದೆ-

ತೂಗುವೇ ತೊಟ್ಟಿಲ
ಬೇವಿನ ಅಂಚಿನ
ಅಂದದ ನಯನ
ಹಚ್ಚಿದೆ ಕಾಡಿಗೆ
ತೂಗುವೇ ತೊಟ್ಟಿಲ

ಜೋ ಜೋ ಲಾಲಿ ಜೋ ಲಾಲಿ

ಈ ಕವನದಲ್ಲಿ ತಾಯಿಯ ಅಂತರಾಳದ ಒಲವಿನ ಕುರಿತು ತಾನೇ ಎನ್ನುವ ಹಾಗೇ ಬಿಂಬಿಸಿಕೊಂಡು ಕವನದ ಪ್ರತಿ ಸಾಲಿನಲ್ಲಿ ಪದಗಳನ್ನು ಬಳಸಿದ ರೀತಿ ಚೆಂದವಿದೆ. ಇನ್ನೂ ಮುಂದುವರೆದು ಕವನಗಳಾದ ಪದಗಳೆಲ್ಲಾ ಹೂವಾಗುತ್ತಿದ್ದವು, ಸೂರಿನಡಿ ಕುಳಿತ ಬದುಕಾಯಿತು, ದುಂಡು ಮಲ್ಲಿಗೆಯಾಗಲೇ, ಸರ್ಕಾರಕ್ಕೆ ಅಭಿನಂದನೆಗಳು, ಬುತ್ತಿಯಾ ಕಟ್ಟಿದ ತಲಿಮ್ಯಾಲ ಹತ್ತಿದೆ, ಸಂರಕ್ಷಣೆ ನಮ್ಮ ಹೊಣೆ, ಮುಗಿಲಿಂದ ಜಾರಿದ ಹನಿ, ಈ ಪ್ರಪಂಚ ಗೆಲ್ಲುವೇ, ಕಾಯುತ್ತಿರುವನು ರೈತ, ಪ್ರೀತಿ ಮಾನವೀಯತೆ, ಜೀವನವೆಂದರೆ, ಕವಿತೆ ಬರೆಯುವೇ, ನೀನು ಇಟ್ಟ ಹೆಜ್ಜೆಗಳು, ಬಂತು ಬಂತು ಯುಗಾದಿ, ಯಾರ ಸೃಷ್ಟಿಯ ಈ ಜಗದಲ್ಲಿ, ನನ್ನ ಜನರು, ಚಂದದ ಪತ್ರ, ಸರ್ಕಾರ ಕೈಯಲ್ಲಿದ್ದರೆ, ಬಾಡದಿರು ನೀನು, ಅನುಮಾನದ ಅಲ್ಪವಿರಾಮ, ಈ ಕವನ ಗಳಲ್ಲಿ ದೇಶದ ವ್ಯವಸ್ಥೆ ಹೇಗಿದೆ ಎಂಬ ವಿವರಣೆ ನೀಡಿ ಕವನ ರಚಿಸಿ ಹೊರ ಹಾಕಿದ್ದಾರೆ.

ಪದಗಳೆಲ್ಲಾ ಹೂವಾಗುತ್ತಿದ್ದವು ಶೀರ್ಷಿಕೆ ತಕ್ಕಂತೆ ಕವನ ಅಷ್ಟೇ ಮಹತ್ವದ ಅಂಶಗಳನ್ನು ಒಳಗೊಂಡ ಕವನದ ಸಾಲುಗಳು ಓದಿಸುತ್ತವೆ. ಯಾವ ಕವನ ನೋಡಿದರೂ ಮತ್ತೇ ಮತ್ತೇ ಓದಬೇಕೆಂಬ ಬಯಕೆ ಹುಟ್ಟುವುದು ಸತ್ಯ. ಮುಗಿಲ ಮೇಲಿನ ಕವನ ಮನ ಮೋಹಕವಾಗಿದೆ. ದೇವರ ಕುರಿತಾದ ಕವನ ಅರ್ಥಗರ್ಭಿತ ಎನ್ನಲಾಗಿದೆ. ಆನಂತರ ಜಿಲೇಬಿ ವಸ್ತು ಆದರೂ ಆದರ ಗುಣ ಪ್ರಾಮುಖ್ಯತೆ ಹೇಗಿದೆ ಎಂಬುದನ್ನು ವರ್ಣನೆಯಿಂದ ಹೇಳಿದ್ದಾರೆ. ಹಬ್ಬದ ಸಂಭ್ರಮ ಹೇಗಿರುತ್ತದೆ ಎನ್ನುವುದನ್ನು ‘ಬಂತು ಬಂತು ಯುಗಾದಿ’ ಕವನದಲ್ಲಿ ಬಿಂಬಿಸಿದ್ದಾರೆ. ‘ನನ್ನ ಜನರು’ ಕವನ ದೊಳಗೆ ಪ್ರಸ್ತುತ ಸಾಮಾನ್ಯ ಜನರ ಬದುಕು ಎತ್ತ ಸಾಗುತ್ತಿದೆ ಅವರ ಕಷ್ಟ ನೋವುಗಳು ಏನಿವೆ ಎಂಬ ಭಾವನೆ ಕುರಿತು ಬರೆದ ಕವನ ಆಗಿರುತ್ತದೆ. ಹೀಗೆ ಒಟ್ಟಾರೆ ಎಲ್ಲಾ ಕವನಗಳು ತುಂಬಾ ಆಧ್ಭುತವಾಗಿ ರಚಿತವಾಗಿರುವುದು ಹೆಮ್ಮೆಯ ಸಂಗತಿ ಮತ್ತು ಈ ಯುವ ಕವಯಿತ್ರಿ ಅಪಾರ ಸಾಮರ್ಥ್ಯಕ್ಕೆ ಅಭಿನಂದನೆಗಳು ಸೂಚಿಸಲೇಬೇಕು. ಇವರ ಯೋಚನಾ ಲಹರಿ ನಿಜಕ್ಕೂ ವಿಸ್ಮಯ ಈ ವಯಸ್ಸಿನಲ್ಲಿ ಇಷ್ಟೊಂದು ಗಾಢವಾಗಿ ಬರೆಯುವ ಕಲೆ ಚೆಂದವಿದೆ. ನಾ ಕಂಡ ಇಷ್ಟದ ಕವಿತೆ ಇದಾಗಿದೆ ಈ ಕೆಳಗಿನಂತಿದೆ.

ನನ್ನ ಜನರು
ಜಗದ ಜ್ವಾಲೆಯಲ್ಲಿ
ಜೀವನ ನಡೆಸಿಹರು
ಶ್ರಮವೇ ಜೀವನ
ದುಡಿಯುವವರು ದಿನವಿಡೀ
ಅರಿಯದು ಅವರಿಗೆ ಏನು

ಈ ಕವನದಲ್ಲಿ ಸಾಮಾಜಿಕವಾಗಿ ಜನರ ಪರಿಸ್ಥಿತಿ ಹೇಗೆ ಬಡತನಕ್ಕೆ ಸಿಲುಕಿದೆ ಎಂಬ ಸ್ಥಿತಿ ಬಗ್ಗೆ ಕವಯಿತ್ರಿ ಕೆಲವೇ ಪದಗಳಲ್ಲಿ ಹೇಳಿರುವುದು ಮೆಚ್ಚುಗೆ ಹೇಳಬೇಕು. ಒಟ್ಟಿನಲ್ಲಿ ನಮ್ಮ ಕನ್ನಡ ನಾಡಿಗೆ ಒಬ್ಬ ಅಪ್ರತಿಮ ಕವಯಿತ್ರಿ ಸಿಕ್ಕ ಸಂಭ್ರಮ ಹೆಚ್ಚು ಎನ್ನಬಹುದು. ಆದರೆ ಕವನ ಶೈಲಿಯಲ್ಲಿ ಬದಲಾವಣೆ ಸ್ವಲ್ಪ ಮಟ್ಟಿಗೆ ಬದಲಾವಣೆ ಬೇಕಿದೆ. ಇನ್ನೂ ಹೆಚ್ಚಿನ ಪದಪುಂಜ ಬಳಸಬೇಕು ಉದ್ದನೆಯ ಸಾಲಿನಲ್ಲಿ ಬರೆಯಲು ಯತ್ನ ಮಾಡಬೇಕು ಸಾಧ್ಯ ಆದರೆ ಒಂದು ಸಾಲಿನಲ್ಲಿ ನಾಲ್ಕು ಆದಕ್ಕಿಂತ ಅಧಿಕ ಪದ ಹಾಕಿದರೆ ತಪ್ಪಿಲ್ಲ ತೀರಾ ಕಡಿಮೆ ಆಗಬಾರದು. ಆದು ಹನಿಗವನ ಎಂಬ ಗೊಂದಲ ಸಹೃದಯಿಗರಿಗೆ ಗೊಂದಲ ಆಗಬಾರದು ಎನ್ನುವ ನಿಟ್ಟಿನಲ್ಲಿ. ಈ ಸಲಹೆ ಸ್ವೀಕರಿಸಿ ಸಾಹಿತ್ಯ ರಚಿಸಿದರೆ ಒಳ್ಳೆಯ ಕವಯಿತ್ರಿ ಆಗುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಕು. ಪ್ರತಿಭಾ ಮರಗೋಳ್ ಅವರು ಕನ್ನಡ ನಾಡಿನ್ಯಾಧ್ಯಾಂತ ಹೆಸರು ಬೆಳಗಲಿ ತಮ್ಮ ಅಮೃತ ಹಸ್ತದಿಂದ ಹಲವು ಕೃತಿಗಳು ಹೊರ ಹೊಮ್ಮಲಿ ಹಾಗೂ ಕನ್ನಡ ಸಾಹಿತ್ಯಕ್ಕೆ ನಿಮ್ಮ ಕೊಡುಗೆ ಅಪಾರ ಬರಲಿ ಎಂದು ಹಾರೈಸುತ್ತೇನೆ ಶುಭವಾಗಲಿ ಪ್ರತಿಭಾ.

ಎಸ್. ರಾಜುಕವಿ ಸೂಲೇನಹಳ್ಳಿ
ಕಾದಂಬರಿಕಾರ, ಪ್ರಕಾಶಕರು
ತನುಶ್ರೀ ಪ್ರಕಾಶನ ಸೂಲೇನಹಳ್ಳಿ

****

ಬೆನ್ನುಡಿ
ಕವಯಿತ್ರಿ ಕು.ಪ್ರತಿಭಾ ಆರ್ ಮರಗೋಳ್ ಅವರ 1ನೆಯ ಕವನ ಸಂಕಲನ "ನಾ ಕಂಡ ಕನಸು" ಈ ಕವನ ಸಂಕಲನದಲ್ಲಿ ಒಟ್ಟು 50 ಕವನಗಳಿವೆ.ಎಲ್ಲಾ ಕವನಗಳನ್ನು ನೋಡಿದಾಗ ಕನ್ನಡದ ಸ್ಥಿತಿ,ಕನ್ನಡ ನಾಡು ಈ ಕವನಗಳು ಉತ್ತಮವಾಗಿ ರಚನೆ ಮಾಡಿದ್ದಾರೆ. ಕವಯಿತ್ರಿ ಕಾಣುವ ಕನಸು ಒಂದು ಸುಂದರವಾದ ಸಮಾಜ ನಿರ್ಮಾಣ ಮಾಡುವ ಗುರಿ ಉದ್ದೇಶ ಅವರ ಕವನಗಳ ಶೀರ್ಷಿಕೆಗಳನ್ನು ನೋಡಿದಾಗ ತಿಳಿದುಬರುತ್ತದೆ.

ಸರಳವಾದ ಭಾಷೆಯಲ್ಲಿ ಸುಂದರವಾಗಿ ಪದಗಳಿಂದ ಕವನಗಳನ್ನು ಕಟ್ಟಿ,ಸಾಹಿತ್ಯ ಕ್ಷೇತ್ರಕ್ಕೆ ಮೊದಲು ಹೆಜ್ಜೆಯನ್ನು ಇಡುತ್ತಿದ್ದಾರೆ. ಕವಯಿತ್ರಿ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಹೇಳುತ್ತಾ,ಆದಷ್ಟು ಬೇಗ ಅವರ ಅನೇಕ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆ ಆಗಲೇಂದು ಮನದುಂಬಿ ಹಾರೈಸುತ್ತೇನೆ.

ಡಾ.ಮಹೇಶ ಎಸ್.ರುದ್ರಕರ್
ಸಾಹಿತಿಗಳು ಮತ್ತು ಚಿಂತಕರು


ಪ್ರತಿಭಾ ಆರ್ ಮರಗೋಳ್ ಲೇಖಕ ಪರಿಚಯ ನಿಮ್ಮ ಓದಿಗಾಗಿ..
ನಾ ಕಂಡ ಕನಸು ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

ಎಸ್. ರಾಜು ಸೂಲೇನಹಳ್ಳಿ ಅವರ ಲೇಖನ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...


MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...