ಬುಕ್‌ ಬ್ರಹ್ಮ ಕಾದಂಬರಿ ಪುರಸ್ಕಾರ; 1 ಲಕ್ಷ ರೂ ನಗದು ಬಹುಮಾನ!

Date: 01-11-2025

Location: Bengaluru


ಬೆಂಗಳೂರು: 2026ನೇ ‘ಬುಕ್ ಬ್ರಹ್ಮ ಕಾದಂಬರಿ ಪುರಸ್ಕಾರ’ಕ್ಕೆ ಲೇಖಕ/ಕಿಯರಿಂದ ಅಪ್ರಕಟಿತ ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. 
ಈ ಪುರಸ್ಕಾರವು ರೂ. 1.0 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಆಸಕ್ತ ಲೇಖಕ/ಕಿಯರು ನಿಯಮಗಳಿಗನುಗುಣವಾಗಿ ಹಸ್ತಪ್ರತಿಗಳನ್ನು ಕಳುಹಿಸಲು ಸೂಚಿಸಲಾಗಿದೆ.

ಬುಕ್ ಬ್ರಹ್ಮ ಕಾದಂಬರಿ ಪುರಸ್ಕಾರ 2026ರ ನಿಯಮಗಳು:
1. ಕಾದಂಬರಿಯು ಸ್ವತಂತ್ರವಾಗಿರಬೇಕು. 
2. ಈ ಮೊದಲು ಪುಸ್ತಕ ರೂಪದಲ್ಲಿ ಪ್ರಕಟವಾಗಿರಬಾರದು. ಪತ್ರಿಕೆ ಮತ್ತು ವಿಶೇಷಾಂಕಗಳಲ್ಲಿ ಪ್ರಕಟವಾದ ಕಾದಂಬರಿಯನ್ನು ಕಳುಹಿಸಬಾರದು.
3. ಅನುವಾದ ಹಾಗೂ ಭಾಷಾಂತರಗೊಂಡ ಕಾದಂಬರಿಗಳನ್ನು ಪರಿಗಣಿಸುವುದಿಲ್ಲ.
4. ಕಾದಂಬರಿಯನ್ನು ಎ-4 ಅಳತೆಯ ಕಾಗದದಲ್ಲಿ 12 ಫಾಂಟ್ ಅಳತೆಯಲ್ಲಿ ತಪ್ಪಿಲ್ಲದಂತೆ ಬೆರಳಚ್ಚು ಮಾಡಿ ಕಳುಹಿಸಬೇಕು.
5. ಹಸ್ತಪ್ರತಿಗಳ ಮುದ್ರಿತ ಪ್ರತಿಗಳನ್ನು ತೆಗೆದು, ಬೈಂಡ್ ಮಾಡಿಸಿದ ಮೂರು ಪ್ರತಿಗಳನ್ನು ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.
6. ಹಸ್ತಪ್ರತಿಗಳ ಹಾರ್ಡ್ ಕಾಪಿ ಮಾತ್ರ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಸಾಫ್ಟ್ ಕಾಪಿ ಸ್ವೀಕರಿಸಲಾಗುವುದಿಲ್ಲ.
7. ಲೇಖಕ/ಕಿಯರ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಫೋಟೋವನ್ನು ಹಸ್ತಪ್ರತಿಯೊಂದಿಗೆ ಪ್ರತ್ಯೇಕವಾಗಿ ಲಗತ್ತಿಸಬೇಕು.
8. ನಿಯಮಗಳನ್ನು ಪಾಲಿಸದ ಮತ್ತು ನಿಗದಿತ ದಿನಾಂಕದ ನಂತರ ಬಂದ ಹಸ್ತಪ್ರತಿಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುವುದಿಲ್ಲ.
9. ಹಸ್ತಪ್ರತಿಗಳನ್ನು ಕಳುಹಿಸಲು 30-04-2026 ಕೊನೆಯ ದಿನ.
10. ತೀರ್ಪುಗಾರರ ನಿರ್ಣಯವೇ ಅಂತಿಮ.
11. ಕನ್ನಡದ ಪ್ರಮುಖ ಕಾದಂಬರಿಕಾರರು ಹಾಗೂ ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.
12. ಆಯ್ಕೆಗೆ ಸಂಬಂಧಿಸಿದಂತೆ 'ಬುಕ್ ಬ್ರಹ್ಮ' ಆಡಳಿತ ಮಂಡಳಿಯ ನಿರ್ಣಯವೇ ಅಂತಿಮ.
13. ಜುಲೈ 15, 2026 ರಂದು ಅಂತಿಮ ಸುತ್ತನ್ನು ಪ್ರವೇಶಿಸುವ 5 ಕಾದಂಬರಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.
14. ಪ್ರಥಮ ಬಹುಮಾನ ಪಡೆಯುವ ಹಸ್ತಪ್ರತಿಗೆ ರೂ. 1.0 ಲಕ್ಷ ಮತ್ತು ಮೆಚ್ಚುಗೆ ಪಡೆಯುವ ಮೂರು ಹಸ್ತಪ್ರತಿಗಳಿಗೆ ತಲಾ 5 ಸಾವಿರ ರೂಪಾಯಿ ಪುರಸ್ಕಾರ ನೀಡಲಾಗುವುದು. 
15. ಆಗಸ್ಟ್ 07, 08, 09, 2026ರಂದು ನಡೆಯಲಿರುವ ಬುಕ್ ಬ್ರಹ್ಮ ಸಾಹಿತ್ಯ ಉತ್ಸವದಲ್ಲಿ ಪುರಸ್ಕೃತರ ಘೋಷಣೆ ಮತ್ತು ಪ್ರಶಸ್ತಿ ವಿತರಣೆ ಮಾಡಲಾಗುವುದು.
16. ಅಂತಿಮ ಸುತ್ತಿಗೆ ಆಯ್ಕೆಯಾದ ಹಸ್ತಪ್ರತಿಗಳ ಲೇಖಕರು ಬಹುಮಾನ ವಿತರಣಾ ಸಮಾರಂಭದಲ್ಲಿ ತಪ್ಪದೇ ಭಾಗವಹಿಸಬೇಕು.
17. ಕಾದಂಬರಿ ಪುರಸ್ಕಾರಕ್ಕೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
18. ಆಯ್ಕೆಯಾದ ಹಸ್ತಪ್ರತಿಯನ್ನು ರಾಜ್ಯದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ, ಧಾರವಾಡದ 'ಮನೋಹರ ಗ್ರಂಥಮಾಲೆ'  ಪುಸ್ತಕ ರೂಪದಲ್ಲಿ ಪ್ರಕಟಿಸುತ್ತದೆ. 
19. ಹಸ್ತಪ್ರತಿಗಳ ಹಾರ್ಡ್ ಕಾಪಿಯ   3 ಪ್ರತಿಗಳನ್ನು,
ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ, ಮೂರನೇ ಮಹಡಿ, ಆರ್.ಕೆ ಕಾಂಪ್ಲೆಕ್ಸ್, ಕೆಎಎಸ್‌ಐಡಿಸಿ ಆವರಣ ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ, ಬೆಂಗಳೂರು-560 100 ಕ್ಕೆ ಕಳುಹಿಸಿಕೊಡಬಹುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 78926 08118 / 8495024253

MORE NEWS

ಬೆಂಗಳೂರು ಸಾಹಿತ್ಯ ಉತ್ಸವ 2025: ಜ್ಞಾನದ ನಾಲ್ಕು ವೇದಿಕೆಗಳಲ್ಲಿ ಸಾಹಿತ್ಯದ ಹೊನಲು.

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BLR LitFest) 2025ರ 14ನೇ ಆವೃತ್ತಿಯ ಮೊದಲ ದಿನದ ಕಾರ್ಯಕ್ರಮಗಳು ಸಾಹಿತ್ಯಾಸ...

ಸಾಹಿತ್ಯ ಎಂದರೆ ಭವಿಷ್ಯಕ್ಕೆ ದಿಕ್ಕು ಕಲ್ಪಿಸುವ ಭಾವನಾತ್ಮಕ ಸೇತುವೆ : ಬಾನು ಮುಷ್ತಾಕ್

06-12-2025 ಬೆಂಗಳೂರು

ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ (Freedom Park) ನಡೆಯುತ್ತಿರುವ ಬೆಂಗಳೂರು ಸಾಹಿತ್ಯ ಉತ್ಸವದ (Bengalur...

'ವೃಕ್ಷಥಾನ್ 2025': 4 ವಿವಿಧ ವಿಷಯಗಳ ಕುರಿತು ವಿಚಾರ ಮಂಥನ

06-12-2025 ವಿಜಯಪುರ

ವಿಜಯಪುರ: ಪರಿಸರ ಸಂರಕ್ಷಣೆ ಮತ್ತು ಪಾರಂಪರಿಕ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಜಯಪುರದಲ್ಲಿ ಆಯೋಜಿಸಲಾಗಿ...