ಬುಕ್ ಬ್ರಹ್ಮ ಸ್ವಾತಂತ್ರೋತ್ಸವ ಕಥಾ ಸ್ಪರ್ಧೆ : ನುಗಡೋಣಿ, ಅನುಪಮಾ, ರಘುನಾಥ ಸೇರಿ 20 ಕಥೆಗಾರರು ಅಂತಿಮ ಸುತ್ತಿಗೆ

Date: 05-08-2022

Location: ಬೆಂಗಳೂರು


ಬೆಂಗಳೂರು, ಆ.05: ಹಿರಿಯ ಕಥೆಗಾರರಾದ ಅಮರೇಶ ನುಗಡೋಣಿ, ಅನುಪಮಾ ಪ್ರಸಾದ್, ರಘುನಾಥ ಚ.ಹ., ಸ್ವಾಮಿ ಪೊನ್ನಾಚಿ, ಅರ್ಪಣಾ ಎಚ್.ಎಸ್, ಮೌನೇಶ ಬಡಿಗೇರ ಸೇರಿದಂತೆ 20 ಮಂದಿ ಬುಕ್ ಬ್ರಹ್ಮ ಸಂಸ್ಥೆಯು ಏರ್ಪಡಿಸಿದ್ದ ಸ್ವಾತಂತ್ರೋತ್ಸವ ಕಥಾ ಸ್ಪರ್ಧೆ- 2022 ರ ಅಂತಿಮ ಸುತ್ತನ್ನು ಪ್ರವೇಶಿಸಿದ್ದಾರೆ.

ಈ ಕಥಾ ಸ್ಪರ್ಧೆಗೆ ಒಟ್ಟು 518 ಕಥೆಗಳು ಬಂದಿದ್ದು, ಆ ಪೈಕಿ 20 ಕಥೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ.

ಅಂತಿಮ ಸುತ್ತು ಪ್ರವೇಶಿಸಿದ ಕಥೆಗಳು - ಕಥೆಗಾರರ ಪಟ್ಟಿ ಈ ಕೆಳಗಿನಂತಿದೆ.

01) ಬಿಡುಗಡೆ - ರಘುನಾಥ ಚ.ಹ.

02) ನೇಮ - ಸ್ಮಿತಾ ಅಮೃತರಾಜ್

03) ಬಯಲು ಬಂದೀಖಾನೆ - ಎನ್. ಸಂಧ್ಯಾ ರಾಣಿ.

04) ಕ್ಯಾಲಿಫೋರ್ನಿಯಾ ಸನ್ ಶೈನ್ - ಜಯರಾಮಾಚಾರಿ

05) ಚಂದ್ರಶಾಲೆಯಲ್ಲಿ ನಿಂತ ತೇರು - ಸಂದೀಪ ನಾಯಕ

06) ಮೌನ ಮುರಿವ ಸದ್ದು... - ಸಂತೋಷ ಕುಮಾರ ಮೆಹಂದಳೆ

07) ನೆಲದಲ್ಲೆ ನೀರ ಸೆಲೆ - ಜಿ.ಪಿ.ಬಸವರಾಜು

08) ನೆರಳ ನರ್ತನ - ಬಸವಣ್ಣೆಪ್ಪ ಕಂಬಾರ್

09) ಚಾಪುಡಿ - ರಾಜಲಕ್ಷ್ಮಿ ಕೋಡಿಬೆಟ್ಟು

10) ಸಂಸಾರವೆಂಬ ಹೆಣ ಬಿದ್ದಿದೊಡೆ... - ಸ್ವಾಮಿ ಪೊನ್ನಾಚಿ

11) ಹಿಪ್ಸ್ ಡೋಂಟ್ ಲೈ - ಅರ್ಪಣಾ ಎಚ್.ಎಸ್.

12) ಕುಂತ್ಯಮ್ಮಳ ಮಾರಾಪು - ಅನುಪಮಾ ಪ್ರಸಾದ್

13) ಪಾತ್ರ - ಲಿಂಗರಾಜ ಸೊಟ್ಟಪ್ಪನವರ್

14) ತಾಪತ್ರಯ - ಸಂಜೋತಾ ಪುರೋಹಿತ್

15) ವಿನ್ನರ್ ವಿನ್ನರ್ ಚಿಕನ್ ಡಿನ್ನರ್ - ಪೂರ್ಣಿಮಾ ಮಾಳಗಿಮನಿ

16) ಇವ ನಮ್ಮವ - ಅಮರೇಶ್ ನುಗಡೋಣಿ

17) ಬಾಗಿದ ರೆಪ್ಪೆಯ ಅಡಗು ತಾಣದಲ್ಲಿ- ನಂದಿನಿ ಹೆದ್ದುರ್ಗ

18) ಸರ್ವೆ ನಂಬರ್ 97 - ಅನಿಲ್ ಗುನ್ನಾಪುರ

19) ಒಂಟಿ ಓಲೆಯ ಮುತ್ತು! - ಮೌನೇಶ ಬಡಿಗೇರ

20) ಕರಿಕೋಟಿನ ಪುಸ್ತಕಗಳ ಎದುರು...- ಎನ್.ಸಿ. ಮಹೇಶ್

ಆಗಸ್ಟ್ 15, 2022ರಂದು ನಗರದ ಸುಚಿತ್ರ ಫಿಲಂ ಸೊಸೈಟಿಯ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಸ್ಪರ್ಧೆಯ ಅಂತಿಮ ಫಲಿತಾಂಶವನ್ನು ಪ್ರಕಟ ಮಾಡಲಾಗುವುದು. ಜೊತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವ ಕಥೆಗಾರರಿಗೆ ರೂ.50,000 ನಗದು, ಪ್ರಶಸ್ತಿ ಫಲಕ ನೀಡಲಾಗುವುದು. ಎರಡನೇ ಬಹುಮಾನಕ್ಕೆ ರೂ. 25,000 ನಗದು, ಪ್ರಶಸ್ತಿ ಫಲಕ; ಮೂರನೇ ಬಹುಮಾನಕ್ಕೆ ರೂ. 15,000 ನಗದು, ಪ್ರಶಸ್ತಿ ಫಲಕ ಪ್ರಾಪ್ತವಾಗಲಿದೆ. ಮೂರು ಸಮಾಧಾನಕರ ಬಹುಮಾನ ಪಡೆಯುವ ಕಥೆಗಾರರಿಗೆ ತಲಾ ರೂ. 5000 ನಗದು, ಪ್ರಶಸ್ತಿ ಫಲಕ ದೊರಕಲಿದೆ. ಅಂತಿಮ ಸುತ್ತನ್ನು ಪ್ರವೇಶಿಸಿಯೂ ಬಹುಮಾನ ಪಡೆಯದೇ ಉಳಿದ 14 ಕಥೆಗಾರರಿಗೆ ತಲಾ ರೂ.1000 ನಗದು, ಪ್ರಶಸ್ತಿ ಫಲಕ ನೀಡಲಾಗುವುದು.

MORE NEWS

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...