ಬೌದ್ಧ ತಾತ್ವಿಕತೆಯ ತಳಹದಿಯೇ ಶ್ರದ್ಧೆ: ನಟರಾಜ ಬೂದಾಳು

Date: 19-09-2021

Location: ತುಮಕೂರು


ಯಾವುದೇ ಕಸುಬಾದರೂ ಶ್ರದ್ಧೆಯಿಂದ ಮಾಡಬೇಕು. ಬೌದ್ಧ ತಾತ್ವಿಕತೆಯು ನಿಂತಿರುವುದೇ ಶ್ರದ್ಧೆ ಎಂಬ ತಳಹದಿಯ ಮೇಲೆ ಎಂದು ಸಂಸ್ಕೃತಿ ಚಿಂತಕ ಡಾ. ನಟರಾಜ ಬೂದಾಳು ಹೇಳಿದರು.

ತುಮಕೂರಿನ ಬೋಧಿ ಮಂಡಲ ಹಾಗೂ ಬೆಂಗಳೂರಿನ ಪ್ರೀತಿ ಪುಸ್ತಕ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಭಾನುವಾರ (2021ರ ಸೆ.19) ತುಮಕೂರಿನ ಕೋತಿತೋಪು ಬಳಿಯ ಕನ್ನಡ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಲೇಖಕ ಜಿ.ವಿ ಆನಂದಮೂರ್ತಿ ಅವರ ’ಬುದ್ಧನ ಕಥೆಗಳು’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತಾಡಿದರು.

ಕಥೆ, ದರ್ಶನ, ಕಲೆ ಹೀಗೆ ಯಾವುದೇ ಆಗಲಿ ಅಂತಿಮವಾಗಿ ತತ್ವವಾಗಿ ಪರಿಣಮಿಸದೇ ಹೋದರೆ ಅದರ ಉದ್ದೇಶವೇ ಅರ್ಥವಾಗುವುದಿಲ್ಲ. ನಿತ್ಯದ ಭಾಷೆಯನ್ನು ದಾಟದೆ ಹೋದರೆ ಬೌದ್ದ ತಾತ್ವಿಕತೆಯನ್ನು ಹೇಳಲು ಸಾಧ್ಯವಿಲ್ಲ. ಚಮ್ಮಾರನ ಅಡಿಗಲ್ಲಿನ ಮೇಲೆ, ಕಮ್ಮಾರನ ಕುಲುಮೆ ಕೆಲಸದಲ್ಲಿ, ಉಳುವ ಸಾಲಿನಲ್ಲಿ ಬೌದ್ಧ ತಾತ್ವಿಕತೆಯನ್ನು ಹುಡುಕಬಹುದು. ಪ್ರತಿ ಕೆಲಸದಲ್ಲೂ ಬುದ್ಧನ ತತ್ವವು ಶ್ರದ್ಧೆಯಾಗಿರುತ್ತದೆ. ಆದ್ದರಿಂದ, ಕೆಲಸದಲ್ಲಿ ಸಂತೃಪ್ತಿ ಕಾಣಬಹುದು ಎಂದರು.

ಬುದ್ಧ ವಿಜ್ಞಾನಿ: ಬುದ್ಧ ಕೇವಲ ಗುರು ಅಲ್ಲ. ಸಾವಿರಾರು ಬುದ್ಧನ ಕಲ್ಪನೆಗಳುನಮ್ಮಲ್ಲಿವೆ. ಬುದ್ಧ ಹೀಗೆ ಹೇಳಿದ ಎಂದು ಯಾರೂ ಹೇಳುವುದಿಲ್ಲ. ಆದರೆ ಬೌದ್ಧ ಬಿಕ್ಷುಗಳು ತಾವು ಏನು ಕೇಳಿಸಿಕೊಂಡೆವು ಎನ್ಅನುವುದಷ್ಟೇ ಹೇಳುತ್ತಾರೆ. ಬುದ್ದಮಾರ್ಗವು ಓದಿನಿಂದ, ಕೇಳಿಸಿಕೊಳ್ಳುವುದರಿಂದ ಅಥವಾ ಇತರೆ ಆವರಣಗಳಿಂದ ಪಡೆಯಲಾಗದು. ಅದು ಉತ್ತು ಬಿತ್ತಿ ಬೆಳೆದ ರೀತಿ-ಸಂಸ್ಕಾರವದು. ಬುದ್ಧನು ಒಬ್ಬ ವಿಜ್ಞಾನಿ. ಆತ ಲೋಕವನ್ನು ಸರಿಯಾಗಿ ವಿವರಿಸಿ ಕೊಟ್ಟ ಮಹಾವಿಜ್ಞಾನಿ ಎಂದು ಹೇಳಿದರು.

ಕೃತಿಯ ಲೇಖಕ ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿ, ಡಾ.ನಟರಾಜ್ ಬೂದಾಳು ಅವರ ಅನುವಾದಿತ ‘ಸರಹಪಾದ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಸಂತೋಷದ ವಿಷಯ. ‘ಬುದ್ದನ ಕಥೆಗಳು’ ಕೃತಿ ರೂಪುಗೊಳ್ಳಲು ದಿ.ಶಂಕರಪ್ಪ, ದಿ. ಕೆ.ಬಿ.ಸಿದ್ದಯ್ಯ ಕಾರಣರು. ಈ ಕೃತಿಯು ಬುದ್ದನ ಓದಿಗೆ ಪ್ರವೇಶ ಪಡೆಯಲು ಅರ್ಹ. ಮತ್ತಷ್ಟು ವಿಚಾರಗಳನ್ನು ತಿಳಿಯಲು ಬೂದಾಳ್ ನಟರಾಜ್ ಅವರ ಕೃತಿಗಳು ನೆರವಾಗುತ್ತವೆ ಎಂದರು.

‘ಸಹರಪಾದ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಪ್ರೊ. ನಟರಾಜ ಬೂದಾಳು ಅವರನ್ನು ಬೋಧಿಮಂಡಲ, ಪ್ರೀತಿಸಾಹಿತ್ಯ ಪ್ರಕಾಶನ ಹಾಗೂ ನೇಗಿಲಯೋಗಿ ಸಂಘಟನೆಯಿಂದ ಸನ್ಮಾನಿಸಲಾಯಿತು. ಚಲನಚಿತ್ರ ಇತಿಹಾಸಕಾರ ದೊಡ್ಡಹುಲ್ಲೂರು ರುಕ್ಕೋಜಿ, ಹಿರಿಯ ಚಿಂತಕ ಎಚ್.ಎಂ.ರುದ್ರಸ್ವಾಮಿ ಸೇರಿದಂತೆ ಇತರೆ ಗಣ್ಯರಿದ್ದರು. ಬೋಧಿಮಂಡಲ ಅಧ್ಯಕ್ಷ ಡಾ.ಬಸವರಾಜು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕವಿ ಕಂಟಲಗೆರೆ ಗುರುಪ್ರಸಾದ್ ನಿರೂಪಿಸಿದರು.

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...