ಬೌದ್ಧರ ಮಹತ್ವದ ಕೃತಿಗಳು ನಾಶ : ಸಾಹಿತಿ ಸಿದ್ಧಲಿಂಗಯ್ಯ ವಿಷಾದ

Date: 18-01-2021

Location: ಮೈಸೂರು


‘ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಬೌದ್ಧ ಸಾಹಿತ್ಯವು ಅನೇಕ ಮುನ್ನುಡಿಗಳನ್ನು ಬರೆದಿದೆ. ಬಳಿಕ ಇದರ ಕೊಂಡಿಯನ್ನು ಜೈನ ಸಾಹಿತಿಗಳು ಮುಂದುವರಿಸಿದರೂ ಕ್ರಮೇಣ ತುಳಿತಕ್ಕೆ ಒಳಗಾಗಿ ವಿನಾಶವಾಯಿತು. ಅನೇಕ ಮಹತ್ವದ ಕೃತಿಗಳು ಕೂಡ ನಾಶವಾದವು’ ಎಂದು ಕವಿ ಸಿದ್ಧಲಿಂಗಯ್ಯ ವಿಷಾದಿಸಿದರು.

ಮೈಸೂರಿನ ಬೌದ್ಧ ಮಹಾಸಭಾ ಹಾಗೂ ಇನ್‌ಸ್ಪೈಯರ್‌ ಫೆನ್‌ಸ್ಟರ್‌ ಸಹಯೋಗದಲ್ಲಿ ಎಸ್‌.ಚಿಕ್ಕಸಾವಕ ಅವರ ‘ತಥಾಗತ ಪಥ’ ಕೃತಿಯ ಬಿಡುಗಡೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಅತ್ಯಂತ ಪ್ರಾಚೀನ ಮಾತ್ರವಲ್ಲ; ಇಂದಿಗೂ ಜಗತ್ತಿಗೆ ಬೆಳಕು ನೀಡುವ ಬೌದ್ಧ ಸಾಹಿತ್ಯವು ಉನ್ನತ ಮಾನವೀಯ ಸಂಸ್ಕೃತಿಯ ಪ್ರತೀಕವಾಗಿದೆ. ಇಡೀ ವಿಶ್ವವೇ ಅನುಸರಿಸಬೇಕಾದ ಮಾರ್ಗದರ್ಶಿ ಸ್ಥಾನದಲ್ಲಿರುವ ಬೌದ್ಧ ಸಾಹಿತ್ಯವನ್ನು ಜೈನ ಸಾಹಿತಿಗಳು ಸಂರಕ್ಷಿಸಲು ಹೆಣಗಿದರು. ಆದರೆ, ಕಾಲಕ್ರಮೇಣ ತುಳಿತಕ್ಕೆ ಒಳಗಾಗಿ ಮಹತ್ವದ ಕೃತಿಗಳು ಸಹಿತ ನಾಶವಾದವು ಎಂದರು.

ಸ್ವಸ್ಥ ಸಮಾಜಕ್ಕೆ ಬೌದ್ಧ ಸಾಹಿತ್ಯ ಪೂರಕ: ಸಂಸದ ವಿ.ಶ್ರೀನಿವಾಸಪ್ರಸಾದ್‌ ಕೃತಿ ಬಿಡುಗಡೆ ಮಾಡಿ, ‘‘ಬೌದ್ಧ ಧರ್ಮದ ತತ್ವವನ್ನು ನಾವು ಮತ್ತೆ ಪ್ರಚುರ ಪಡಿಸಬೇಕಿದ್ದು ಸಮಾಜದ ಸ್ವಾಸ್ಥ್ಯಕ್ಕೆ ಇದು ಅನುಕೂಲವಾಗಲಿದೆ. ಬೌದ್ಧ ಧರ್ಮದ ಸಿದ್ದಾಂತಗಳು ಇಡೀ ಮಾನವ ಜನಾಂಗದ ಕಲ್ಯಾಣಕ್ಕೆ ಸಹಕಾರಿ. ಸಮಾಜದಲ್ಲಿನ ಮೂಢನಂಬಿಕೆ, ಮೌಢ್ಯಗಳಿಂದ ಜನರನ್ನು ಪಾರು ಮಾಡಿ ವಿಚಾರವಂತರನ್ನಾಗಿಸಲು ಬುದ್ಧ ಮಾರ್ಗ ಸೂಕ್ತವಾಗಿದೆ’ ಎಂದರು.

ಸಮಾನತೆಯ ಹಕ್ಕಿಗಾಗಿ ಹೋರಾಡಿದ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಹಿಂದೂ ಧರ್ಮ ಒಪ್ಪಿಕೊಂಡರೆ ಅಸಮಾನತೆ, ಅಸ್ಪೃಶ್ಯತೆಯನ್ನು ಒಪ್ಪಿಕೊಂಡಂತೆ ಎಂಬ ಅರಿವು ಅವರಿಗಿತ್ತು’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ ‘ಹಿಂದೂ ಧರ್ಮದ ಚೌಕಟ್ಟಿನಿಂದ ನಾವು ಹೊರ ಬರಬೇಕಿದೆ, ಇಲ್ಲವಾದರೆ ಜಾತಿಯ ಕೊಚ್ಚೆಯಿಂದ ಮುಕ್ತರಾಗಲು ಸಾಧ್ಯವಿಲ್ಲ’ ಎಂದರು.

ನಳಂದ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿ, ಲೇಖಕ , ಬೌದ್ಧ ವಿದ್ವಾಂಸ ಡಿ.ಎ.ಶಂಕರ್‌, ರಂಗಕರ್ಮಿ ಜನಾರ್ದನ್‌ (ಜನ್ನಿ), ಮಾದಯ್ಯ ಸೇರಿದಂತೆ ಕೃತಿಕಾರ ಎಸ್‌.ಚಿಕ್ಕಸಾವಕ ಮತ್ತಿತರ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...