ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹಿರಿಯ ಕವಿ ಕೆ.ವಿ.ತಿರುಮಲೇಶ್‌...


'ಅಕ್ಷಯ ಕಾವ್ಯ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕೆ.ವಿ.ತಿರುಮಲೇಶ್‌ ಅವರು ಬಹುಮುಖ ಕವಿ ಎಂದೇ ಪ್ರಸಿದ್ಧರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ. ಬಳಿಕ ಯೆಮನ್ ದೇಶದಲ್ಲಿ ಇಂಗ್ಲೀಷ್ ಅಧ್ಯಾಪಕರೂ ಆಗಿದ್ದರು. ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆದ ಕವಿ ಕೆ.ವಿ.ತಿರುಮಲೇಶ್‌. ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬವು ತಿರುಮಲೇಶರ ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕಾದಂಬರಿಗಳು. ನಾಯಕ ಮತ್ತು ಇತರರು, ಕೆಲವು ಕಥಾನಕಗಳು, ಕಳ್ಳಿ ಗಿಡದ ಹೂ ಕಥಾಸಂಕಲನಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಮತ್ತು ಪೂರ್ವ ಯಾನ ಇವರ ಅನುವಾದಿತ ಕೃತಿಗಳು.

2021 ರಂದು ನವೆಂಬರ್‌ 6 ರಂದು ಕೆ.ವಿ.ತಿರುಮಲೇಶ್‌ ಅವರ ಹೈದರಾಬಾದ್‌ನ ಅವರ ನಿವಾಸದಲ್ಲಿ ಛಾಯಾಗ್ರಾಹಕ ಮಂಜುನಾಥ್‌ ಕಲ್ಲೇದೆವರ ಕ್ಲಿಕ್ಕಿಸಿದ ಚಿತ್ರಗಳು. ಕೆ.ವಿ.ತಿರುಮಲೇಶ್ ಅವರು ಮಕ್ಕಳ ಕವನಗಳ ಸಣ್ಣ ತುಣುಕುಗಳು...

ಬೆಣ್ಣೆ ಜಾರಿ ದೋಸೆಗೆ ಬಿದ್ದರು
ದೋಸೆ ಜಾರಿ ಬೆಣ್ಣೆಗೆ ಬಿದ್ದರು
ಎರಡೂ ಒಂದೇ ಎನ್ನುತ್ತಾನೆ ಪುಟ್ಟ
ತಿನ್ನದೆ ಬಿಟ್ಟವ ಕೆಟ್ಟ!‌

 

 

 


ಗರಮಾ ಗರಮ್ ಊತಪ್ಪ
ನಮ್ಮೀ ಪ್ರಾಋಥನೆ ಕೇಳಪ್ಪ
ಈರುಳ್ಳಿ ತಿಂದು ಊತಪ್ಪ
ಹಾಕಿಸಿಕೊಂಡು ಹಸುವಿನ್‌ ತುಪ್ಪ
ತಟ್ಟೆಗೆ ಬಂದು ಬೀಳಪ್ಪ!

 

 

 

 

 

 

 

 

 

 

 

 


ಈ ಫೋಟೋ ಪರ್ಪಂಚ
ಎಲ್ಲಾ ಉಲ್ಟಾಪುಲ್ಟಾ
ಜಗವೇ ನಾಟಕರಂಗ
ಪಾತ್ರ ಹಂಚಿದ್ದು ಯಾರೋ
ಯಾರ್ಯಾರ ಪಾತ್ರವ ಯಾರ್ಯಾರಿಗಿತ್ತೋ

ಹೊರಟುಹೋದವರು ಯಾರೋ

 

 

 

 

 

 

 

 

 

 

 

 

 



MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...