ಚಳವಳಿಗಳು ಕಾಲಘಟಕ್ಕೆ ಸೀಮಿತವಾಗಬಾರದು: ಸಿದ್ದೇಶ್ ಸಿ.

Date: 19-01-2020

Location: ಬೆಂಗಳೂರು


ಬೆಂಗಳೂrರು ವಿಶ್ವ ವಿದ್ಯಾಲಯದ ಕುಲಪತಿಗಳ ಮನೆ ಬಳಿಯ ಸಾಹಿತ್ಯವನದಲ್ಲಿ ಬಾಪು ಗಾಂಧೀ ಹಾಗೂ ಅವರ ಚಳವಳಿ ಕುರಿತ ಸಂವಾದ ಕಾರ್ಯಕ್ರಮ ಜರುಗಿತು.

‘ಅಸಹಕಾರ ಚಳವಳಿ ಶತಮಾನದ ನೋಟ’ ಕುರಿತ ವಿಷಯ ಮಂಡನೆ ಮಾಡಿದ ಇತಿಹಾಸ ಉಪನ್ಯಾಸಕ ಸಿದ್ದೇಶ್ ಸಿ. ಅವರು "ಆಡಳಿತ ರೂಢ ಸರ್ಕಾರದ ವಿರುದ್ಧ ಜನತೆ ತನ್ನ ಅಸಮ್ಮತಿ , ವಿರೋಧ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸುವ ವಿಧಾನವೇ ಅಸಹಕಾರ ಚಳವಳಿ. ಈ ರೀತಿಯ ಚಳವಳಿ ಆಗಾಗ ನಡೆಯುತ್ತಿರಬೇಕು ಒಂದು ಕಾಲಘಟಕ್ಕೆ ಸೀಮಿತವಾಗಬಾರದು. ಜಗತ್ತಿನ ಬಂಡವಾಳಶಾಹಿ ರಾಷ್ಟ್ರಗಳಿಂದ ವಸಾಹತು ಶಾಹಿ ಶೋಷಣೆಗೆ ಒಳಗಾಗಿ ಅದರಿಂದ ಮುಕ್ತಿ ಪಡೆದು ಸ್ವಾತಂತ್ರ್ಯ ಪಡೆದ ರಾಷ್ಟ್ರಗಳಲ್ಲಿ ಭಾರತದ ಹೋರಾಟದ ವಿಧಾನ ವಿಭಿನ್ನ ವಾದುದು. ಏಕೆಂದರೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ವ್ಯಕ್ತಿ ಕೇಂದ್ರಿತವಲ್ಲ ಇಲ್ಲಿ ಸಂವಿಧಾನ ಬದ್ದ ಮಂದಗಾಮಿಗಳು ಹಿಂಸೆಯ ಬಲಪ್ರಯೋಗದ ತೀವ್ರಗಾಮಿಗಳು ತ್ವರಿತ ಬದಲಾವಣೆಯ ಕ್ರಾಂತಿಕಾರಿಗಳ ಜೊತೆ ರೈತ ಕಾರ್ಮಿಕರೆಂಬ ಜನಸಾಮಾನ್ಯರೊಂದಿಗೆ ಸತ್ಯ,ಶಾಂತಿ ಅಹಿಂಸೆ, ಅಸ್ತ್ರ ಹಿಡಿದ ಗಾಂಧೀಜಿಯ ಹೋರಾಟವು ಮಹತ್ತರವಾದುದು" ಎಂದರು.

ಭಾರತದ ರಾಷ್ಟ್ರೀಯ ಚಳವಳಿಯ ಒಂದು ಪ್ರಮುಖ ಘಟ್ಟವಾಗಿ ವಿಶ್ವದ ದೊಡ್ಡ ಸಾಮೂಹಿಕ ಚಳವಳಿಯಾಗಿ ಕಂಡುಬಂದ ಅಸಹಕಾರ ಚಳವಳಿಗೆ ನೂರು ವರುಷಗಳು ತುಂಬುತ್ತಿವೆ‌. ವರ್ತಮಾನದ ಅವ್ಯವಸ್ಥೆಯ ಅರಾಜಕತೆಯ ಭ್ರಷ್ಟತೆಯಲ್ಲಿ ಆಡಳಿತ ನಡೆಸುವ ರಾಜಕೀಯ ಪಕ್ಷಗಳ ವಿರುದ್ಧ ನಾವು ಹೋರಾಡಲು ಅಸಹಕಾರ ಚಳವಳಿ ನಮಗೆ ಸ್ಪೂರ್ತಿಯಾಗಬೇಕು. ಒಂದನೇ ಮಹಾಯುದ್ಧ ಹಾಗೂ ರಷ್ಯಾ ಕ್ರಾಂತಿಯು ಭಾರತದಲ್ಲಿ ರಾಷ್ಟ್ರೀಯ ಚಳವಳಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತಾ ಸಾಗಿದಂತೆ  ಬ್ರಿಟಿಷರು ಹೋರಾಟವನ್ನು ಹಿಂಸಾತ್ಮಕ ಮಾರ್ಗದಲ್ಲಿ ಹತ್ತಿಕ್ಕಲು ಮುಂದಾದರು ಆ ಸಂದರ್ಭದಲ್ಲಿ ಭಾರತಕ್ಕೆ ಒಂದು ವಿಭಿನ್ನವಾದ ಹೋರಾಟದ ಅವಶ್ಯಕತೆ ಇತ್ತು ಆಗ ಜನಸಾಮಾನ್ಯರ ಬದುಕಿನೊಂದಿಗೆ ತನ್ನು ಬದುಕನ್ನು ಗುರುತಿಸಿಕೊಂಡು ಸಾಮಾನ್ಯರ ನಡುವೆ ಬದುಕುತ್ತಾ, ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ, ಸತ್ಯ ಅಹಿಂಸೆ ಹರತಾಳ ಮೂಲಕ ಹೋರಾಟ ಮಾಡಲು ಭಾರತಕ್ಕೆ ವಿಶ್ವದ ವಿನೂತನ ನಾಯಕನ ಆಗಮನವಾಯಿತು ಅವರೆ, 1919 ರ ನಂತರದ ಭಾರತದ ರಾಷ್ಟ್ರೀಯ ಚಳವಳಿಯ ಮುಂದಾಳತ್ವ ವಹಿಸಿಕೊಂಡ ಮಹಾತ್ಮಗಾಂಧಿ. ಮಹಾತ್ಮಗಾಂಧಿ ಮುಂದಾಳತ್ವದ ಅಸಹಾಕರ ಚಳವಳಿ ಹಿಂದೂ ಮುಸ್ಲಿಂ ಐಕ್ಯತೆಯ ಕೇಂದ್ರ ಬಿಂದುವಾಗಿ ದೇಶದ ಮೂಲೆ ಮೂಲೆಯಲ್ಲೂ ರಾಷ್ಟ್ರೀಯತೆಯ ಕಿಚ್ಚನ್ನು ಹಬ್ಬಿಸಿದರು. ವಿದೇಶಿ ವಸ್ತುಗಳನ್ನು ಸುಡುತ್ತಾ, ಹರತಾಳ- ಕರನಿರಾಕರಣೆಯೊಂದಿಗೆ ಆಂಗ್ಲ ಶಿಕ್ಷಣ ಬಹಿಷ್ಕಾರಿಸುತ್ತಾ, ಸರ್ಕಾರಿ ಕೆಲಸಗಳಿಗೆ ರಾಜೀನಾಮೆ ಕೊಡುವುದರೊಂದಿಗೆ ಆರಂಭವಾದ ಅಸಹಕಾರ ಚಳವಳಿ, ಮುಂದಿನ ರಾಷ್ಟ್ರೀಯ ಹೋರಾಟಕ್ಕೆ ಸ್ಪೂರ್ತಿಯಾಯಿತು. ಒಟ್ಟಾರೆ, ಅಸಹಕಾರ ಚಳವಳಿ 1920 ರ ಕಾಲಘಟ್ಟದ ಹೋರಾಟಕ್ಕೆ ಮಾತ್ರ ಸೀಮಿತವಲ್ಲ  ಪ್ರಜೆಗಳ ವಿರುದ್ಧವಾಗಿ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಫ್ಯಾಸಿಸಂ ಸಿದ್ದಾಂತವನ್ನು ಧರ್ಮದ ಅಮಲಿನಲ್ಲಿ ಒತ್ತಾಯ ಮಾಡುವ ಸರ್ಕಾರಗಳಿಗೆ ಅಹಿಂಸಾತ್ಮಕತೆಯ ಅಸಹಕಾರ ಹೋರಾಟ ಅನಿವಾರ್ಯವೆನಿಸುತ್ತದೆ" ಎಂದು ವಿಷಯ ಪ್ರಸ್ತಾಪಿಸಿದರು. 

ಸಂವಾದದಲ್ಲಿ ವೆಂಕಟೇಶ್, ಮಿಲನ್‌, ಮೋಹನ್‌, ಪಾರ್ವತಿ, ಅಶ್ವಿನಿ, ಯಶಸ್ವಿನಿ, ಆನಂದ್‌, ಚೆಲುವರಾಜು ಮುಂತಾದವರು ಭಾಗಿಯಾಗಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...