ಶಶಿ ತರೀಕೆರೆಗೆ ಛಂದ ಪುಸ್ತಕ ಬಹುಮಾನ

Date: 10-09-2019

Location: ಬೆಂಗಳೂರು


2019 ನೇ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರ ಶಶಿ ತರೀಕೆರೆ ಅವರು ಆಯ್ಕೆಯಾಗಿದ್ದಾರೆ. ಶಶಿ ಅವರ ಕಥೆಗಳ ಪುಸ್ತಕವನ್ನು ‘ಛಂದ ಪುಸ್ತಕ’ವು ಪ್ರಕಟಿಸಿ, ಕತೆಗಾರರಿಗೆ 30,000 ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಅಕ್ಟೋಬರ್ 20, 2019 ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಪುಸ್ತಕ ಬಹುಮಾನಕ್ಕೆ ಕತೆ ಆಯ್ಕೆ ಮಾಡಿರುವ ಲಲಿತಾ ಸಿದ್ಧಬಸವಯ್ಯ ಅವರು ’ಶಶಿ ತಮ್ಮ ಕತೆಗಳ ಮೂಲಕ ತೆರೆದಿಟ್ಟಿರುವ ಪ್ರಪಂಚ ಕನ್ನಡದ ಸಣ್ಣಕತೆಗಳ ಓದುಗರಿಗೆ ಹೆಚ್ಚು ಬಳಕೆಯಿಲ್ಲದ್ದು. ಕಾಮ ಕ್ರೋಧ ಲೋಭೇತ್ಯಾದಿಗಳನ್ನು ಅರಿಷಡ್ವರ್ಗ ಎನ್ನುತ್ತೇವೆ. ವಾಸ್ತವವಾಗಿ ಇವು ಅರಿಗಳಲ್ಲ. ಮಿತ್ರಷಡ್ವರ್ಗಗಳೆಂದು ನಾನು ಭಾವಿಸುವೆ. ಆಸೆ, ನಿರಾಸೆ, ಕೋಪ, ದುಗುಡ, ಸಡಗರಗಳಿಲ್ಲದ ಬದುಕನ್ನು ಯಾಕಾದರು ಬದುಕಬೇಕು? ಆಗ ನಾವೆಲ್ಲರೂ ಜಗದ್ಗುರುಗಳೇ ಆಗಿಬಿಡುತ್ತಿದ್ದೆವು. ಜಗತ್ತು ತಾನೇ ಎಷ್ಟು ಜಗದ್ಗುರುಗಳನ್ನು ಧರಿಸಬಲ್ಲುದು. ಈ ಮಿತ್ರ ಷಡ್ವರ್ಗಗಳ ಪರಿಣಾಮವನ್ನು ಕುರಿತೇ ಜಗತ್ತಿನ ಮೇಲಿರುವ ನಾವಷ್ಟೂ ಬರಹಗಾರರು ಬರೆಯುತ್ತಿರುವುದು . ಆದರೆ ನಾವು ಬಹುತೇಕರು ಹೀಗೆ ಬರೆಯುವಾಗ ಮಧ್ಯಮವರ್ಗದ ಮನೆ ಮನಗಳೊಳಗೇ ಸುತ್ತು ಹೊಡೆಯುತ್ತೇವೆ. ಶಶಿ ಈ ಸುತ್ತಿನಿಂದ ಆಚೆ ಬಂದಿದ್ದಾರೆ. ಅವರ ಕತೆಗಳು ಈ ಬಹುಮಾನಕ್ಕೆ ಅರ್ಹವಾಗಿವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರಾದ ಶಶಿ, ಪ್ರಸ್ತುತ ಬೆಂಗಳೂರಿನ ಇಸ್ರೋದಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವಿತೆ, ಕಿರುಚಿತ್ರ ನಿರ್ಮಾಣ ಇವರ ಹವ್ಯಾಸಗಳಾಗಿವೆ.

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...