‘ಚೆಲುವ ಚಿಣ್ಣರು ರಾಜ್ಯಮಟ್ಟದ ಮಕ್ಕಳ ಪುಸ್ತಕ ಪ್ರಶಸ್ತಿ’ಗೆ ಕೃತಿ ಆಹ್ವಾನ

Date: 27-09-2020

Location: ಬೆಂಗಳೂರು


ರಾಯಚೂರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನಿಂದ ಚೆಲುವ ಚಿಣ್ಣರು ಮಕ್ಕಳ ತ್ರೈಮಾಸಿಕ ಪತ್ರಿಕೆ ಇವರ ಸಹಯೋಗದಲ್ಲಿ ‘ಚೆಲುವ ಚಿಣ್ಣರು ರಾಜ್ಯಮಟ್ಟದ ಮಕ್ಕಳ ಪುಸ್ತಕ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಲಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ನಾಲ್ಕು (ಕತಾ ಸಂಕಲನ, ಕವನ ಸಂಕಲನ, ನಾಟಕ, ಕಾದಂಬರಿ) ಪ್ರಕಾರದ ಕೃತಿಗಳಿಗೆ ಬಹುಮಾನ ನೀಡಲಾಗುವುದು. ಪ್ರಶಸ್ತಿಯು ಪ್ರತಿ ವಿಭಾಗಕ್ಕೆ 3,000 ರೂ ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಸ್ಪರ್ಧೆಯ ನಿಯಮಗಳು :

  • ಮಕ್ಕಳ ಸಾಹಿತ್ಯ ಕೃತಿಗಳು 2019ರಲ್ಲಿ ಪ್ರಕಟವಾಗಿರಬೇಕು.

  • ಲೇಖಕರ ಸ್ವತಂತ್ರ ಕೃತಿಯಾಗಿರಬೇಕು.

  • ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನೊಂದಣಿ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

  • ಪುಸ್ತಕದ ಮೊದಲ ಪುಟದಲ್ಲಿ ಪ್ರಶಸ್ತಿಗಾಗಿ ಎಂದು ನಮೂದಿಸಬೇಕು.

  • ಲೇಖಕರ ಸ್ವ ವಿವರದವನ್ನು ಕೃತಿಗಳೊಂದಿಗೆ ಲಗತ್ತಿಸುವುದು.

  • ಪ್ರಶಸ್ತಿಗೆ ಮೂರು ಪ್ರತಿಗಳ ಪುಸ್ತಕಗಳನ್ನು ಕಳುಹಿಸಬೇಕು.

  • ಪುಸ್ತಕಗಳನ್ನು ಕಳುಹಿಸಲು ಕೊನೆಯ ದಿನಾಂಕ 15 ಅಕ್ಟೋಬರ್ 2020

  • ಯಾವುದೇ ಕಾರಣಕ್ಕೂ ಪ್ರಶಸ್ತಿಗಾಗಿ ಕಳುಹಿಸಿದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ವಿಳಾಸ : ಶಂಕರದೇವರು ಹಿರೇಮಠ,

ಜಿಲ್ಲಾ ಅಧ್ಯಕ್ಷರು,

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಯಚೂರು

ಶ್ರೀ ಶಿವ ನಿಲಯ, ಕೋಟೆ ನಗರ ಸಭೆ ಹತ್ತಿರ

ಸಿಂಧನೂರು 584128

ರಾಯಚೂರು ಜಿಲ್ಲೆ.

ಸಂಪರ್ಕ ಸಂಖ್ಯೆ: 9888002383

MORE NEWS

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’

29-03-2024 ಬೆಂಗಳೂರು

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ...

ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

29-03-2024 ಬೆಂಗಳೂರು

ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...