ಚನ್ನಪ್ಪ ಎರೇಸೀಮೆ ಅವರ ಬಗ್ಗೆ ಮಾಹಿತಿ ಕಳುಹಿಸಿ

Date: 12-10-2019

Location: ಬೆಂಗಳೂರು


ಹಳಗನ್ನಡ ಸಾಹಿತ್ಯ, ಶರಣ ಸಾಹಿತ್ಯದಲ್ಲಿ ಛಾಪು ಮೂಡಿಸಿರುವ ಚನ್ನಪ್ಪ ಎರೆಸೀಮೆಯವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಗುತ್ತಿದ್ದು ಅವರ ಸಾಹಿತ್ಯ, ಬದುಕು, ಬರಹ ಎಲ್ಲವನ್ನು ಡಿಜಿಟಲೀಕರಣ ಮಾಡುವ ನಿಟ್ಟಿನಲ್ಲಿ ಚನ್ನಪ್ಪ ಎರೇಸೀಮೆ ಸಂಚಯ ಕಾರ್ಯ ನಿರತವಾಗಿದೆ.

ಇದೇ ನಿಟ್ಟಿನಲ್ಲಿ ಎರೇಸೀಮೆಯವರ ಕುರಿತಾದ ತಮ್ಮಲ್ಲಿರಬಹುದಾದ ಯಾವುದೇ ರೀತಿಯ ಸಂಪನ್ಮೂಲವನ್ನು (ಲೇಖನಗಳು/ಫೋಟೋ/ ನಿಮ್ಮ ಅನಿಸಿಕೆ /ಇತ್ಯಾದಿ ) ತಾವು ನಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾದಲ್ಲಿ ಅವರ ಸಾಹಿತ್ಯದ ಜೊತೆಗೆ ನೆನಪುಗಳನ್ನೂ ಸಂರಕ್ಷಿಸಲು ಸಾಧ್ಯವಾಗುವುದು ಎಂದು ಎರೇಸೀಮೆ ಕುಟುಂಬಸ್ಥರು ಪ್ರಕಟಣೆ ಹೊರಡಿಸಿದ್ದಾರೆ.

ಅಕ್ಟೋಬರ್ 12 ರಂದು ಚನ್ನಪ್ಪ ಎರೇಸೀಮೆಯವರ ಜನ್ಮಶತಮಾನೋತ್ಸವವನ್ನು ಆಯೋಜಿಸಲಾಗಿದ್ದು, ಅಂದುಎರೇಸ್ವಾಮಿಯವರು ಸಾಹಿತ್ಯ, ಶಿಕ್ಷಣ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಯನ್ನು ಚರ್ಚಿಸಲಾಗುವುದು. ಸಂಗೀತ ಕಟ್ಟಿ ಯವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮವೂ ಇರುತ್ತದೆ.

ಪಂಡಿತ ಚನ್ನಪ್ಪ ಎರೇಸೀಮೆಯವರ ಸಾಹಿತ್ಯ ಸಂಚಯದ ಬಗ್ಗೆ ಮಾಹಿತಿಗೆ, ನಿಮ್ಮಲ್ಲಿರುವ ಮಾಹಿತಿಯನ್ನು ನಮ್ಮೊಡನೆ ಹಂಚಿಕೊಳ್ಳಲು yckamala @ gmail.com ಮೇಲ್‌ ಮಾಡಿ

MORE NEWS

ಮಕ್ಕಳ ಕತೆಗಳ ಅನನ್ಯ ಪ್ರೀತಿ ರಾಮೇಂದ್ರ ಕುಮಾರ ಕುರಿತು ವಿಚಾರಣ ಸಂಕಿರಣ 

15-04-2024 ಬೆಂಗಳೂರು

ಬೆಂಗಳೂರು: ಜೀವನಾನುಭವವನ್ನು ವಿಸ್ತರಿಸುವ, ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವ ಕೆಲಸವನ್ನು ಹಿಂದೆ‌ ಅಜ್ಜಿ...

ಏಪ್ರಿಲ್ 18ರಂದು ‘ಡಾ.ರಾಜಕುಮಾರ್ ಸಿರಿಗನ್ನಡ ಪ್ರಶಸ್ತಿ’ ಪ್ರದಾನ ಸಮಾರಂಭ

15-04-2024 ಬೆಂಗಳೂರು

ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ, ಧೀರ...

‘ಪುಸ್ತಕದ ಆವಿಷ್ಕಾರ ಮನುಷ್ಯ ಕಂಡುಹಿಡಿದ ದೊಡ್ಡ ಸಂಶೋಧನೆ’: ಬಿ.ಎ. ಕೆಂಚರೆಡ್ಡಿ

15-04-2024 ಬೆಂಗಳೂರು

ಗದಗ: ‘ಪುಸ್ತಕದ ಆವಿಷ್ಕಾರ’ವೆಂಬುದು ಮನುಷ್ಯ ಕಂಡುಹಿಡಿದ ಅತ್ಯಂತ ಮೌಲಿಕವಾದ ಮತ್ತು ದೊಡ್ಡ ಸಂಶೋಧನೆ ಎಂದು...