ಸಿನಿಮೀಯ ಶೈಲಿಯ ಕಾದಂಬರಿ "ಕಥೆಗೆ ಸಾವಿಲ್ಲ" : ಪ್ರಸಾದ


ನವೊತ್ತರ ಸಾಹಿತ್ಯ ಶೈಲಿಯ ಸಿನೆಮಾದಲ್ಲಿ ಒಂದಾದ ನಂತರೊಂದು ದೃಶ್ಯ ಬರುವ ಬರವಣಿಗೆಯ ತೀವ್ರತೆ, ಸರಳತೆ, ಹಾಸ್ಯ, ರಹಸ್ಯ, ಬೈಗುಳ, ಟ್ವಿಸ್ಟ್ , ಕನೆಕ್ಷನ್, ಗೊಂದಲ, ಜಟಿಲ ಸಂಬಂಧ, ತವಕ, ಮಲೆನಾಡು, ರಾಜಕೀಯ, ನಕ್ಸಲೈಟ್, ಬಾಂಬು, ಎನ್ಕೌಂಟರ್, ಆಯ್ಯಯೋ ಫುಲ್ ಪ್ಯಾಕಾಗಿ ಬಹಳ ಆಸಕ್ತಿ ಹುಟ್ಟಿಸಿ ಮೊದಲ ಪುಟದಿಂದಲೆ ಕೃತಿಯೊಳಗೆ ಸೆಳೆದುಕೊಂಡು, ಕೊನೆಯವರೆಗೂ ಕುತೂಹಲ ಕೆರಳಿಸಿಕೊಂಡು ಓದಿಸಿಕೊಂಡಿತು ಎನ್ನುತ್ತಾರೆ ವಿಮರ್ಶಕ ಪ್ರಸಾದ. ಅವರು ಲೇಖಕ ಬಿ.ಎಂ ಗಿರಿರಾಜು ಅವರ ಕಥೆಗೆ ಸಾವಿಲ್ಲ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಕೃತಿಯ ಆರಂಭ 1947 ರ ಆಗಸ್ಟ್ 15ರ ರಾತ್ರಿಯಿಂದಾಗೋದು. ಇತ್ತ 2007 ರಲ್ಲಿ ಕೆನಡಾದಲ್ಲಿ ಮಗ ಮಾಡಿಕೊಂಡ ಅಧಿಕ ಪ್ರಸಂಗದ ಕಿತಾಪತಿಯನ್ನು ತಲೆಗೆ ಹಚ್ಚಿಕೊಂಡು ಅಪ್ಪ ಹೃದಯದ ಸಂಬಂಧಿ ಆಸ್ಪತ್ರೆಗೆ ಸೇರಿ, ಅಪ್ಪನ ಹತ್ತಿರ ಕ್ಷಮೆಯಾಚನೆಗೆಂದು ಮಗ ಅಪ್ಪ-ಅಮ್ಮನ ವಿದೇಶಕ್ಕೆ ಕರೆತರಲು ಅಪ್ಪನ ಊರಿಗೆ ಬಂದರೆ ಅಜ್ಜಿ ಸೊಂಟ ಮುರಿದುಕೊಂಡು ತಿಂಗಳ ರೆಸ್ಟ್ ಅಲ್ಲಿ ಮಲಗಿದ್ದಾರೆ.

ಸಿನಿಮೀಯ ಅನಿಸುತ್ತೆ ಅಲ್ವ? ನನಗೂ ಸಹ ಇದನ್ನ ಓದೋವಾಗ ಅದೇ ಅನಿಸಿದ್ದು. ಮುಂದೆ ಮುಂದೆ ಹೋಗ್ತಾ ನಾನಂದುಕೊಂಡತಾಗದೆ ಸರ್ಪ್ರೈಸ್ ಮಾಡ್ತಾ ಹೋಯ್ತು. ತುಂಬಾ ವಿಶೇಷವಾದ, ಇಂದಿನ ಕಾಲಕ್ಕಂತು ಹಬ್ಬದೂಟ ಮಾಡುವ ಕಥಾ ವಸ್ತು. ಸಾವಿರ ವರ್ಷಗಳ ಹಿಂದೆ ಹೋಗಿ ಧರ್ಮದ ಮೂಲಭೂತ ನೆಲೆ ನಂಬಿಕೆಗಳನ್ನ ಅಲ್ಲಾಡಿಸಿ, " ಏನೋ ಕಾರಣವಿರಬೇಕು ತಾನೆ ನಿನ್ನ ಜೊತೆ ನಡೆದಿದ್ದು, ನಿನ್ನ ಜೊತೆಯೇ ಆಗಲಿಕ್ಕೆಯೆಂದು ( ಕಾದಂಬರಿಯ ಒನ್ ಲೈನರ್ ನಂತೆ ) " ಪ್ರಶ್ನೆಗಳನ್ನು ಎಬ್ಬಿಸಿ ತಲೆ ಕೆಡಿಸುತ್ತೆ.

ಎಲ್ಲೂ ಇದು ಲೇಖಕರ ಮೊದಲ ಕಾದಂಬರಿ ಅನಿಸಲಿಲ್ಲ. ನವೊತ್ತರ ಸಾಹಿತ್ಯ ಶೈಲಿಯ ಸಿನೆಮಾದಲ್ಲಿ ಒಂದಾದನಂತರೊಂದು ದೃಶ್ಯ ಬರುವ ಬರವಣಿಗೆಯ ತೀವ್ರತೆ, ಸರಳತೆ, ಹಾಸ್ಯ, ರಹಸ್ಯ, ಬೈಗುಳ, ಟ್ವಿಸ್ಟ್ , ಕನೆಕ್ಷನ್, ಗೊಂದಲ, ಜಟಿಲ ಸಂಬಂಧ, ತವಕ, ಮಲೆನಾಡು, ರಾಜಕೀಯ, ನಕ್ಸಲೈಟ್, ಬಾಂಬು, ಎನ್ಕೌಂಟರ್, ಆಯ್ಯಯೋ ಫುಲ್ ಪ್ಯಾಕಾಗಿ ಬಹಳ ಆಸಕ್ತಿ ಹುಟ್ಟಿಸಿ ಮೊದಲ ಪುಟದಿಂದಲೆ ಕೃತಿಯೊಳ ಸೆಳೆದುಕೊಂಡು, ಕೊನೆಯವರೆಗೂ ಕುತೂಹಲ ಕೆರಳಿಸಿಕೊಂಡು ಓದಿಸಿಕೊಂಡಿತು. ಒಂದು ಘಟನೆಯ ನಂತರ ಮುಂದೇನಾಗುತ್ತದೆ ಅಂತ ಗೆಸ್ ಮಾಡಿಕೊಂಡರೂ ಅಂದುಕೊಂಡಿದ್ದಗಿಂತಲೂ ಅಧ್ಬುತವಾಗಿ ಮಾಯಾಲೋಕದಲ್ಲಿ ಕಥೆ ವಿಹರಿಸುತ್ತೆ. ಒಂದು ಲೆಕ್ಕದಲ್ಲಿ ಸಿನೆಮಾದ್ದೇ ಅನುಭವ ಅನ್ನಬಹುದು. ಪೂರ್ತಿ ತಿರುಳನ್ನು ಹೇಳೋಕೂ ಆಗಲ್ಲ ಓದಿಯೇ ಅನುಭವಿಬೇಕು.

ಹಿಡ್ಕೊಂಡ ಕಾದಂಬರಿಯನ್ನ ಕೆಳಗಿಡೋಕೆ ಮನಸ್ಸಾಗದೆ ಊಟ- ತಿಂಡಿ ಬಿಟ್ಟು ಓದಿದ್ದು. ಇಲ್ಲಿ ಸಮ್ ಸುಮ್ನೆ ಕಥೆ ನಡೆಯೋದಿಲ್ಲ. ಒಳ್ಳೆ ಕಿಕ್ ಕೊಡೋಕೆ ಏನೆಲ್ಲಾ ಬೇಕೋ ಅದನ್ನೆಲ್ಲ ಮಿಕ್ಸಿಗೆ ಹಾಕಿ ರುಬ್ಬಿ ಬರೆದಿದ್ದಾರೆ ಲೇಖಕರು. ಇಂತಹ ಕೃತಿಗಳು ಅದರಲ್ಲೂ ನಮ್ಮ ಕನ್ನಡದಲ್ಲಿ ಬಹಳವೆಂದರೆ ಬಹಳ ಕಮ್ಮಿ. ಇತ್ತೀಚಿನ ದಿನಗಳಲ್ಲಿ ನಾನು ಓದಿದ ಒಂದು ಅಮೋಘ ಅದ್ಭುತ ಕಾದಂಬರಿಯೆಂದರೆ ಒಂದು ಚೂರೂ ತಪ್ಪಾಗಲ್ಲ. ಕಾದಂಬರಿಯ ಮೇಲೂ, ಕತೆಯ ಕೊನೆಯ ಮೇಲೂ ಲವ್ ಆಗೋಯ್ತು.

- ಪ್ರಸಾದ

 

MORE FEATURES

'ಅವಳ ಹೆಜ್ಜೆ ಗುರುತು' ನನ್ನ ಪ್ರಾಮಾಣಿಕ ಪ್ರಯತ್ನವಷ್ಟೇ : ಸೌಮ್ಯ ಕಾಶಿ

19-04-2024 ಬೆಂಗಳೂರು

‘ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆ...

ನಿತ್ಯ ಜೀವನದ‌ ಮಾರ್ಗದರ್ಶನಕ್ಕಾಗಿ ಓದಬೇಕಾದ ಕೃತಿ ‘ಇರುವುದೆಲ್ಲವ ಬಿಟ್ಟು’

19-04-2024 ಬೆಂಗಳೂರು

'ಗೆಲುವಿಗಿಂತ ಸೋಲನ್ನೆ ಹೆಚ್ಚು ಪ್ರೀತಿಸುವ ರೈಗಳು ಸೋಲು ನಮ್ಮನ್ನು ನಮ್ರರನ್ನಾಗಿ ಮಾಡಿದರೆ ಗೆಲುವು ನಮ್ಮನ್ನು ಅಹಂ...

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...