‘ಸಿಟಿ ಆಫ್ ಜಾಯ್’ ನ ಲೇಖಕ ಡಾಮಿನಿಕ್‌ ಲ್ಯಾಪಿಯರ್‌ ಇನ್ನಿಲ್ಲ

Date: 05-12-2022

Location: ಬೆಂಗಳೂರು


ಫ್ರೆಂಚ್ ಮೂಲದವರಾದರೂ ಭಾರತದ ಬಗ್ಗೆ ಆಪಾರ ಆಸಕ್ತಿ, ಒಲವು ಹೊಂದಿದ್ದ ಲೇಖಕ ಡೊಮಿನಿಕ್ ಲ್ಯಾಪಿಯರ್ (Dominique Lapierre) ನಿಧನರಾಗಿದ್ದಾರೆ. ೯೧ ವರುಷದ ಡೊಮಿನಿಕ್ ವೃದ್ಧಾಪ್ಯದಿಂದ ನಿಧನರಾಗಿರುವುದಾಗಿ ಪತ್ನಿ ಡೊಮಿನಿಕ್ ಕಾಂಚಾನ್ ಲ್ಯಾಪಿಯರ್ ಫ್ರೆಂಚ್ ಪತ್ರಿಕೆಯೊಂದಕ್ಕೆ ಭಾನುವಾರ ತಿಳಿಸಿದ್ದಾರೆ. 

ಸಿಟಿ ಆಫ್ ಜಾಯ್ ಸುತ್ತ: ಭಾರತದ ಜೀವನ ಶೈಲಿಯ ಬಗ್ಗೆ ಹೆಚ್ಚಿನ ಪ್ರೀತಿ ಬೆಳೆಸಿಕೊಂಡಿದ್ದ ಡಾಮಿನಿಕ್‌ ಲ್ಯಾಪಿಯರ್‌ 1985ರಲ್ಲಿ 'ಸಿಟಿ ಆಫ್ ಜಾಯ್' ಎಂಬ ಕೃತಿಯನ್ನು ಪ್ರಕಟಿಸಿದ್ದರು. ಈ ಕೃತಿಯಲ್ಲಿ ಕಲ್ಕತ್ತಾದ ಕೊಳಗೇರಿ ಕುರಿತಾದ ಮಾಹಿತಿಯಿದ್ದು, ಅಲ್ಲಿನ ರಿಕ್ಷಾ ಗಾಡಿ ತಳ್ಳುವವನ ಕಷ್ಟಗಳ ಬಗೆಗೂ ಚಿತ್ರಿತವಾಗಿದೆ. 75 ಲಕ್ಷಕ್ಕೂ ಹೆಚ್ಚು ಪ್ರತಿಗಳು ಬಿಕರಿಯಾದವು ಅನ್ನೋದೇ ಇವರ ಜನಪ್ರಿಯತೆಗೆ ಹಿಡಿದ ಕನ್ನಡಿ.

ಕೃತಿಯನ್ನು ಆಧರಿಸಿದ ಚಲನಚಿತ್ರವೂ 1992 ರಲ್ಲಿ ಬಿಡುಗಡೆಯಾಗಿದ್ದು, ಚಿತ್ರವನ್ನು ರೋಲ್ಯಾಂಡ್ ಜೋಫ್ ನಿರ್ದೇಶಿಸಿದ್ದು, ಪ್ಯಾಟ್ರಿಕ್ ಸ್ವೇಜ್ ನಟಿಸಿದ್ದಾರೆ. 

ಅವರ ಅತ್ಯಂತ ಜನಪ್ರಿಯ ಕೃತಿ 'ಈಸ್ ಪ್ಯಾರಿಸ್ ಬರ್ನಿಂಗ್?' 1965 ರಲ್ಲಿ ಪ್ರಕಟವಾಗಿತ್ತು. ಇದರ ಜೊತೆಗೆ "ಫೈವ್ ಪಾಸ್ಟ್ ಮಿಡ್ ನೈಟ್ ಇನ್ ಭೋಪಾಲ್" ನ ಸಹ-ಲೇಖಕರಾಗಿದ್ದರು. 1960ರಲ್ಲಿ ಬೋಪಾಲ್‌ ಮಧ್ಯಪ್ರದೇಶದ ರಾಜಧಾನಿಯಾಯಿತು. ಕೃತಿ ಶುರುವಾಗುವುದು ಈ ಕಾಲದ ಘಟನಾವಳಿಗಳಿಂದ. ಕೊನೆಯಾಗುವುದು - ಜಗತ್ತಿನಲ್ಲೇ ಹಿಂದೆಂದೂ ನಡೆಯದಂಥಾ ಅನಿಲ ದುರಂತ ಸಂಭವಿಸಿದ ದಿನದ ನಡುರಾತ್ರಿಯ ಕರಾಳ ನೆನಪುಗಳೊಂದಿಗೆ.

ಆದಾಯದ ಒಂದಂಶ ರೋಗಿಗಳ ಚಿಕಿತ್ಸೆಗೆ: ಡಾಮಿನಿಕ್‌ ಲ್ಯಾಪಿಯರ್‌ ರವರು  
ತಮ್ಮ ಆದಾಯದ ಒಂದು ಅಂಶವನ್ನು ಕ್ಷಯರೋಗ ಮತ್ತು ಕುಷ್ಠರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಕೊಡುಗೆ ನೀಡಿದವರು. 

2008 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಡಾಮಿನಿಕ್‌ ಲ್ಯಾಪಿಯರ್‌ ಅವರಿಗೆ ನೀಡಿ ಗೌರವಿಸಲಾಯಿತು. ಇದು ಅವರಿಗೆ ಭಾರತದೊಂದಿಗಿರುವ ನಂಟನ್ನು, ಅವರ ಬರವಣಿಗೆಗೆ ಭಾರತದೊಂದಿಗಿರುವ ಬೆಸುಗೆಯನ್ನು ಪ್ರತಿಬಿಂಬಿಸುತ್ತದೆ.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...