ಕಂಫರ್ಟ್ ಝೋನ್ ನನಗಿಷ್ಟವಿಲ್ಲ : ಅತುಲ್ ದೋಡಿಯಾ

Date: 11-01-2022

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಮುಂಬಯಿ ಮೂಲದ ಇನ್ಸ್ಟಾಲೇಷನ್ಸ್, ಸ್ಕಲ್ಪ್ಚರ್ಸ್, ಪೇಂಟಿಂಗ್ ಹಾಗೂ ಸ್ಕಲ್ಪ್ಚರ್ಸ್ ಕಲಾವಿದ ಅತುಲ್ ದೋಡಿಯಾ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಅತುಲ್ ದೋಡಿಯಾ (Atul Dodia)
ಜನನ: 20-01-1959
ಶಿಕ್ಷಣ: ಜೆ.ಜೆ. ಸ್ಕೂಲ್ ಆಫ್ ಆರ್ಟ್, ಮುಂಬಯಿ
ವಾಸ: ಮುಂಬಯಿ
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಪೇಂಟಿಂಗ್, ಇನ್ಸ್ಟಾಲೇಷನ್ಸ್, ಸ್ಕಲ್ಪ್ಚರ್ಸ್

ಅತುಲ್ ದೋಡಿಯಾ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಅತುಲ್ ದೋಡಿಯಾ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ನಾನೊಬ್ಬ ಮಾತಾಡಬಯಸುವ ಕಲಾವಿದ. (ನನ್ನ ಕಲಾಕೃತಿಗಳಲ್ಲಿ) ಯಾವಾಗಲೂ ಒಂದು ನರೇಟಿವ್ ಇರುತ್ತದೆ. ಹಾಗಾಗಿ ನಾನೊಬ್ಬ ಫಿಗರೇಟಿವ್ ಕಲಾವಿದ. ನಾನು ಅಲ್ಲಿಂದ ಫಿಗರೇಶನ್ ಕೈಬಿಟ್ಟರೆ ಬೇರೇನು ಉಳಿಯುತ್ತದೆ? ಬರೇ ನರೇಟಿವ್ ಉಳಿದುಕೊಂಡರೆ ಅದು ಹೇಗಿರಬಹುದು? ಈ ಪ್ರಶ್ನೆಗಳಿಗೆ ನಾನು ಉತ್ತರದ ಹುಡುಕಾಟದಲ್ಲಿದ್ದೇನೆ. ಎನ್ನುತ್ತಾರೆ ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಸಮಕಾಲೀನ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿತರಾಗುವ ಅತುಲ್ ದೋಡಿಯಾ.

ಫಿಗರೇಟಿವ್ ಪೇಂಟರ್ ಆಗಿ ನನ್ನ ವಾಸ್ತವಗಳು ಸ್ವಲ್ಪ ಭಿನ್ನವಾಗಿರುತ್ತವೆ. ನಾನು ಬದುಕುತ್ತಿರುವುದು ಮುಂಬಯಿಯ ಘಾಟ್‌ಕೋಪರ್‌ನಲ್ಲಿ, ನನ್ನ ಚಿತ್ರಗಳು ಸಹಜವಾಗಿಯೇ ಇಲ್ಲಿನ ಬಡತನ, ವಾಸ್ತವದ ಚಿಂತನೆಗಳನ್ನು ಬಿಂಬಿಸುತ್ತವೆ, ಆದರೆ ಅಲ್ಲಿ ನಾನು ರಾಜಕೀಯ ಹೇಳಿಕೆಗಳನ್ನು ಕೊಡುವುದಿಲ್ಲ ಎನ್ನುವ ಅತುಲ್ ಭಾರತೀಯ ಮಧ್ಯಮವರ್ಗದ ಹೈಪರ್ ರಿಯಲಿಸ್ಟಿಕ್ ಚಿತ್ರಣಗಳಿಗಾಗಿ ಪ್ರಸಿದ್ಧರು.

ಮುಂಬಯಿಯಲ್ಲಿ ಮೇಲು ಮಧ್ಯಮ ವರ್ಗದ ಗುತ್ತಿಗೆದಾರರ ಕುಟುಂಬದಿಂದ ಬಂದ ಅತುಲ್, ಆರಂಭದಲ್ಲಿ ಆರ್ಕಿಟೆಕ್ಟ್ ಆಗಬಯಸಿದ್ದರು. ಗಣಿತ ಕೈಕೊಟ್ಟ ಕಾರಣಕ್ಕೆ ಜೆ.ಜೆ. ಸ್ಕೂಲ್ ಆಫ್ ಆರ್ಟ್ ಸೇರಿಕೊಂಡವರು. ಕಲೆ ತನ್ನ ಆಸಕ್ತಿಯ ಸಂಗತಿಯಾಗಿತ್ತು, ಆ ಕಾರಣಕ್ಕೆ ತನ್ನ ತಂದೆ ತನಗೆ ಮುಂಬಯಿಯಲ್ಲಿ ಕಲಾಪ್ರದರ್ಶನಗಳಿಗೆ ಹೋಗಲು ಲೋಕಲ್ ರೈಲುಗಳಲ್ಲಿ ಫರ್ಸ್ಟ್ ಕ್ಲಾಸ್ ಪಾಸ್ ತೆಗೆದುಕೊಟ್ಟಿದ್ದರು ಎಂದು ನೆನಪಿಸಿಕೊಳ್ಳುವ ಅತುಲ್, ಮೂಲತಃ ಗುಜರಾತಿನ ಕಾಥಿಯಾವಾಡಿ ಕುಟುಂಬದಿಂದ ಬಂದವರು. ಜೆಜೆ ಕಾಲೇಜಿನ ಪದವಿಯ ಬಳಿಕ ಅಲ್ಲೇ ಕಲಾಶಿಕ್ಷಕರಾಗಿ ಸೇರಿಕೊಂಡ ಅತುಲ್, ಅಲ್ಲಿ ಪರಿಚಿತರಾದ ತನ್ನ ವಿದ್ಯಾರ್ಥಿನಿ ಅಂಜು ದೋಡಿಯಾ (ಅಂಜು ಅವರು ಕೂಡ ಭಾರತದ ಪ್ರಮುಖ ಸಮಕಾಲೀನ ಕಲಾವಿದೆಯರಲ್ಲಿ ಒಬ್ಬರು) ಅವರನ್ನು ಮದುವೆ ಆಗುತ್ತಾರೆ.

1999ರಲ್ಲಿ ಮಹಾತ್ಮಾ ಗಾಂಧಿ ಅವರ ಕುರಿತ ಸರಣಿ ಚಿತ್ರಗಳ ಮೂಲಕ ಬೆಳಕಿಗೆ ಬಂದ ಅತುಲ್, ಅಲ್ಲಿಂದೀಚೆಗೆ ಹಲವು ಮಜಲುಗಳಲ್ಲಿ ಬೆಳೆದಿದ್ದಾರೆ. ಆರಂಭದಲ್ಲಿ ಆಯಿಲ್ ಪೇಂಟಿಂಗ್‌ಗಳನ್ನು ಮಾಡುತ್ತಿದ್ದ ಅವರು ಅಲ್ಲಿಂದ ಲ್ಯಾಮಿನೇಟ್‌ಗಳ ಮೇಲೆ, ರಸ್ತೆ ಬದಿಯ ಶಟರ್‌ಗಳ ಮೇಲೆ ಕೂಡ ಕಲಾಕೃತಿಗಳನ್ನು ರಚಿಸಿದ್ದಾರೆ, ಅಲ್ಲಿಂದೀಚೆಗೆ ದೊಡ್ಡ ಗಾತ್ರದ ವಾಟರ್ ಕಲರ್ ಕಲಾಕೃತಿಗಳನ್ನೂ ರಚಿಸಿದ್ದಾರೆ. ಕ್ಯಾಬಿನೆಟ್‌ಗಳಲ್ಲಿ ಇನ್ಸ್ಟಾಲೇಷನ್‌ಗಳು, ಅಕ್ಷರಗಳನ್ನು ಬಳಸಿಕೊಂಡ ಕಲಾಕೃತಿಗಳನ್ನೂ ರಚಿಸಿದ್ದಾರೆ. ಒಂದು ನಿರ್ದಿಷ್ಠ ಶೈಲಿಯನ್ನು ಬಳಸಿ ಮುಂದುವರಿಯುವುದು ತನಗೆ ಇಷ್ತವಿಲ್ಲ ಎಂದು ಸ್ಪಶ್ಟವಾಗಿ ಹೇಳುವ ಅತುಲ್ “There are ample moments when one could be satisfied and keep churning out the same kind of stuff. You can get recognition by the accepted style. But as soon as I feel comfortable with something, I get very uncomfortable," ಎನ್ನುತ್ತಾರೆ (ದಿ ಮಿಂಟ್ ಪತ್ರಿಕೆಯ ಸಂದರ್ಶನದಲ್ಲಿ ಅವಂತಿಕಾ ಭುಯಾನ್ ಅವರಿಗೆ ಹೇಳಿದ್ದು. ದಿನಾಂಕ11 ಫೆಬ್ರವರಿ 2017).

ಮದುವೆಯಾದ ಬಳಿಕ 1992ರಲ್ಲಿ ಫ್ರಾನ್ಸ್‌ಗೆ ತೆರಳಿದ್ದ ಅತುಲ್ ಮತ್ತು ಅಂಜು ದಂಪತಿ, ಅಲ್ಲಿ ವಿದ್ಯಾರ್ಥಿವೇತನದ ಅಡಿಯಲ್ಲಿ ಇಕೊಲ್ ಡೆ ಬುಸಾರ್ಟ್ (École des Beaux-Arts )ನಲ್ಲಿ ಕಲಾ ಕೋರ್ಸ್ ಮುಗಿಸಿದರು. ಈ ಅವಧಿಯಲ್ಲಿ, ಯುರೋಪಿನ ಪ್ರಮುಖ ಕಲಾ ಮ್ಯೂಸಿಯಂಗಳಲ್ಲಿ ಪಿಕಾಸೊ, ಮೊದಿಗ್ಲಿಯಾನಿ, ರೆಂಬ್ರಾಂಟ್ ಅವರಂತಹ ಮಹಾನ್ ಕಲಾವಿದರ ಕಲಾಕೃತಿಗಳನ್ನು ಮೂಲದಲ್ಲೇ ಕಂಡದ್ದು, ಅವರಿಗೆ ಅವರ ಪ್ರಾಕ್ಟೀಸಿನಲ್ಲಿರುವ ಮಿತಿಗಳನ್ನು ತೆರೆದು ತೋರಿಸಿತು, ಈ ತೆರವು ಅವರ ಕಲಾಬದುಕಿನಲ್ಲಿ ಮಹತ್ವದ ತಿರುವು ನೀಡಿತು ಎಂದವರು ಹೇಳಿಕೊಂಡಿದ್ದಾರೆ.

ಮುಂಬಯಿಯ ಬದುಕಿನ ವೈವಿದ್ಯತೆಯ ಜೊತೆಗೆ ಆರ್ಥಿಕ ಅಸಮತೋಲನ ಹಾಗೂ ಜಾಗತೀಕರನ ಹುಟ್ಟಿಸಿದ ಪರಿವರ್ತನೆಯ ಚೈತನ್ಯಗಳು ತನಗೆ ಪ್ರೇರಣಾದಾಯಕವಾಗಿದ್ದವು ಎಂದು ಹೇಳುವ ಅತುಲ್ ಬಾಲ್ಯದಲ್ಲಿ 10ವರ್ಷ ಪ್ರಾಯದವರಿದ್ದಾಗ ಅವರ ಕಣ್ಣಿಗೆ ಗಾಯ ಮಾಡಿಕೊಂಡಿದ್ದರು. ಇದು ವೈಯಕ್ತಿಕವಾಗಿ ಅವರಿಗೆ ಮುಂದಿನ 25 ವರ್ಷಗಳ ಕಾಲ ಮಗ್ಗುಲು ಮುಳ್ಳಾಗಿಯೇ ಕಾಡಿತು. ಅವರ ಕಣ್ಣುಗಳು ಶಾಶ್ವತವಾಗಿ ಕಾಣಿಸದಿರುವ ಅಪಾಯ ಇತ್ತು. ಒಬ್ಬ ಕಲಾವಿದನಿಗೆ ಇದಕ್ಕಿಂತ ದೊಡ್ಡ ಆತಂಕ ಬೇರೇನು ಬೇಕು? ಆದರೆ ಅದೃಷ್ಟವಶಾತ್ ಈ ಸಮಸ್ಯೆ ಸುದೀರ್ಘಕಾಲದ ಬಳಿಕ ಶಸ್ತ್ರಕ್ರಿಯೆಯಲ್ಲಿ ಸರಿಯಾಯಿತು. ಹಾಗಾಗಿ ಅವರು ಬದುಕಿನ ದೊಡ್ಡ ಅವಧಿಯಲ್ಲಿ ಕಂಡ ಈ ಅಂಚಿನ ಬದುಕು, ಅವರ ಕಲಾಕೃತಿಗಳಲ್ಲೂ ಪರಿಣಾಮಕಾರಿಯಾಗಿ ಬಿಂಬಿತವಾಗುತ್ತದೆ. 1993ರ ಮುಂಬಯಿ ಗಲಭೆ, 2002ರ ಗೋಧ್ರಾ ಘಟನೆಗಳು ಅತುಲ್ ಅವರ ಮೇಲೆ ಗಾಢವಾದ ಪರಿಣಾಮ ಬೀರಿವೆ.

90ರ ದಶಕದ ಬಳಿಕ ಅಸ್ಸೆಂಬ್ಲೇಜ್-ಇನ್ಸ್ಟಾಲೇಷನ್ ಶಿಲ್ಪಗಳನ್ನು ರಚಿಸಲಾರಂಭಿಸಿದ ಅತುಲ್, ಆಧುನಿಕ ಬದುಕಿಗೆ ಪ್ರತಿಕ್ರಿಯಿಸುವ ಜೊತೆಗೇ ಹಳೆಯ ಕ್ಲಾಸಿಕಲ್ ಕಲಾಕೃತಿಗಳನ್ನು ಹೊಸಭಾಷೆಯಲ್ಲಿ ಮರುಪರಿಶೀಲಿಸುವ ಕಲಾಕೃತಿಗಳ ಸರಣಿಯನ್ನೂ ರಚಿಸಿದರು. ವರ್ಷಕ್ಕೆ ಆರರಿಂದ ಎಂಟು ಕಲಾಕೃತಿಗಳನ್ನು ಮಾತ್ರ ರಚಿಸುವ ಅತುಲ್, ಎರಡು ವರ್ಷಗಳಿಗೊಮ್ಮೆ ಅವನ್ನು ಪ್ರದರ್ಶಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ತನ್ನ ಕಲಾಕೃತಿ ರಚಿಸುವ ಪ್ರಕ್ರಿಯೆಯನ್ನು ಅವರು ವಿವರಿಸುವುದು ಹೀಗೆ “I experience the pain and suffering when doing a painting and feel drained after finishing it. An image remains in my mind for about three years before I put it down. It undergoes several modifications.” (ಎನ್‌ಗ್ರೇವ್ ಮ್ಯಾಗಜೀನಿನ ಅವಿನಾಶ್ ಸುಬ್ರಹ್ಮಣ್ಯಂ ಅವರಿಗೆ ನೀಡಿದ ಸಂದರ್ಶನದಲ್ಲಿ ಜನವರಿ 19,2017)

ಅತುಲ್ ದೋಡಿಯಾ ಅವರ ಜೊತೆ ನ್ಯೂಸ್ ಎಕ್ ಮಾತುಕತೆ :

ಅತುಲ್ ದೋಡಿಯಾ ಅವರ ಜೊತೆ ವಂದನಾ ಶುಕ್ಲಾ ಅವರು ನಡೆಸಿದ ಸಂದರ್ಶನ:

ಅತುಲ್ ದೋಡಿಯಾ ತನ್ನ ಆರ್ಟ್ ಪ್ರಾಕ್ಟೀಸ್ ಬಗ್ಗೆ ಮಾತನಾಡುತ್ತಿರುವುದು:

ಚಿತ್ರ ಶೀರ್ಷಿಕೆಗಳು:
ಅತುಲ್ ದೋಡಿಯಾ ಅವರ Bako Exists, Imagine (2011)

ಅತುಲ್ ದೋಡಿಯಾ ಅವರ Earth (1992)

ಅತುಲ್ ದೋಡಿಯಾ ಅವರ Fisher woman

ಅತುಲ್ ದೋಡಿಯಾ ಅವರ Gandhi - Shutter Art

ಅತುಲ್ ದೋಡಿಯಾ ಅವರ Meditation with open eyes (2011)

ಅತುಲ್ ದೋಡಿಯಾ ಅವರ Portrait of Niko Pirosmani (1862-1918) (2005)

ಅತುಲ್ ದೋಡಿಯಾ ಅವರ Shri Khakhar prasanna (2005)

ಅತುಲ್ ದೋಡಿಯಾ ಅವರ Stigmata (2000)

ಅತುಲ್ ದೋಡಿಯಾ ಅವರ The journey (1998)

ಅತುಲ್ ದೋಡಿಯಾ ಅವರ Twins 1

ಅತುಲ್ ದೋಡಿಯಾ ಅವರ Woman from Kabul, (2001)

ಈ ಅಂಕಣದ ಹಿಂದಿನ ಬರೆಹಗಳು:
ಕಲೆ ಎಂಬುದು ಭಾವನೆಗಳು ಮತ್ತು ಐಡಿಯಾಗಳ ಅಭಿವ್ಯಕ್ತಿ: ಸುಬೋಧ್ ಗುಪ್ತಾ
ಭಾರತದಲ್ಲಿ ವೀಡಿಯೊ ಆರ್ಟ್‌ಗೆ ಹಾದಿ ತೆರೆದ ನಳಿನಿ ಮಲಾನಿ
ಮಹಾನಗರಕ್ಕೊಂದು ದೃಶ್ಯಭಾಷೆ ಕಟ್ಟಿಕೊಟ್ಟ ಜಿತೀಶ್ ಕಲ್ಲಟ್
ಸಾಂಸ್ಕೃತಿಕ ವೈರುಧ್ಯದ ಪದರುಗಳ ಅಭಿವ್ಯಕ್ತಿ: ಶೀಲಾಗೌಡ
ಅಕ್ಷರಗಳನ್ನು ಅಮೂರ್ತಗೊಳಿಸುವ ಗ್ಲೆನ್ ಲೈಗನ್
ಕಲೆಯ ಪ್ರಜಾತಾಂತ್ರೀಕರಣ – ಡೊನಾಲ್ಡ್ ಜಡ್
ಕಲೆಯ ಅತಿರೇಕದ ಮಿತಿಗಳನ್ನು ವಿಸ್ತರಿಸಿದ ಕ್ರಿಸ್ ಬರ್ಡನ್:
"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್
ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಚರಿತ್ರೆ ಅಂದು-ಇಂದು...

18-01-2022 ಬೆಂಗಳೂರು

ಹಿರಿಯ ಲೇಖಕಿ ಡಾ.ವಿಜಯಶ್ರೀ ಸಬರದ ಅವರ ಮಹತ್ವದ ಕೃತಿ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’. ಮೂವತ್ತೊಂಬತ್ತು ...

ಒಬ್ಬರಲ್ಲ ಮೂವರು : ರಾಕ್ಸ್ ಮೀಡಿಯಾ...

17-01-2022 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...

ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ...

16-01-2022 ಬೆಂಗಳೂರು

‘ಬೇರೆ ಬೇರೆ ಧರ್ಮಗಳಿಗೆ ಅವುಗಳಿಗೆ ಸಂಬಂಧಿಸಿದ ಧರ್ಮಗ್ರಂಥಗಳಿವೆ. ಲಿಂಗಾಯತ ಧರ್ಮಕ್ಕೆ ಯಾವುದೇ ಒಂದು ನಿರ್ದಿಷ್ಟ...