ಕೊರೊನಾ ಕಾಲದಲ್ಲಿ ’ಸಾಹಿತ್ಯ ಅಲ್ಲಿ-ಇಲ್ಲಿ’


ಕನ್ನಡೇತರ ಭಾರತೀಯ ಭಾಷೆಗಳಲ್ಲಿ ಹಾಗೂ ಜಗತ್ತಿನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಸಾಹಿತ್ಯ- ಪುಸ್ತಕ ಸಂಬಂಧಿಸಿದ ಮಾಹಿತಿ-ವಿವರಗಳನ್ನು ’ಸಾಹಿತ್ಯ: ಅಲ್ಲಿ- ಇಲ್ಲಿ’ ಅಂಕಣದಲ್ಲಿ ಹಂಚಿಕೊಳ್ಳಲಾಗುತ್ತದೆ. ಪ್ರತಿ ಮಂಗಳವಾರ ಈ ಬರೆಹವು ಬುಕ್‌ ಬ್ರಹ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ಈ ವಾರದ ಹುಡುಕಾಟ ಮತ್ತು ಬರೆಹ ಹಿರಿಯ ಪತ್ರಕರ್ತ ವೆಂಕಟೇಶ್ ಮಾನು ಅವರದ್ದಾಗಿದೆ.

 

ಕೊರಾನಾ ಸನ್ನಿವೇಶ ಸೃಷ್ಟಿಸಿದ ಆತಂಕದ ನಡುವೆಯೇ ಲೇಖಕರು-ಕವಿಗಳು ವಿವಿಧ ಪ್ರಕಾರದ ಸಾಹಿತ್ಯ ರಚನೆಯಲ್ಲಿ ಸಕ್ರಿಯವಾಗಿದ್ದಾರೆ. ಔಷಧಿ ಅಂಗಡಿಗಳ ಹಾಗೆ ಕೇರಳದಲ್ಲಿ ಪುಸ್ತಕ ಅಂಗಡಿಗಳಿಗೂ ವಿಶೇಷ ವಿನಾಯಿತಿ ನೀಡುವಂತೆ ನಾಗರಿಕರ ಆಗ್ರಹ ವ್ಯಕ್ತ ಪಡಿಸಿದ ಘಟನೆಯೂ ವರದಿಯಾಗಿದೆ.

ಲೀವಿಂಗ್‌ ಸ್ಟೋರೀಸ್‌ ಬರೆದ ಶೋಭಾ ಡೆ 

ಖ್ಯಾತ ಲೇಖಕಿ, ಅಂಕಣಗಾರ್ತಿ  ಶೋಭಾ ಡೆ ಅವರು ಕಳೆದ ವಾರ ‘ಲೀವಿಂಗ್ ಅಂಡ್ ಅದರ್ ಸ್ಟೋರಿಸ್’ ಶೀರ್ಷಿಕೆಯ ಕಥಾ ಸಂಕಲನ (ಇ-ಪುಸ್ತಕ) ಹೊರ ತಂದಿದ್ದಾರೆ. ಕೊರೊನಾ ಸೃಷ್ಟಿಸಿದ ಸನ್ನಿವೇಶಕ್ಕಿಂತ ಬಂಡವಾಳಿಗರ ಹೃದಯಗಳು ಅಮಾನವೀಯವಾಗಿ ರೋಗಗ್ರಸ್ತವಾಗಿವೆ ಎನ್ನುವುದು ಇಲ್ಲಿಯ ಎಲ್ಲ 10 ಕತೆಗಳ ಹಂದರ. ಮುಂಬೈ ನಗರದ ಕಾರ್ಮಿಕರ ದಾರುಣ ಬದುಕು, ಅವರಿಗೆತಮ್ಮ ಊರುಗಳಿಗೆ ಹೋಗಲೂ ಅವಕಾಶವಿಲ್ಲ ಎಂಬ ಸಂಕಟ ಒಂದೆಡೆಯಾದರೆ ಕೂಲಿಯನ್ನೂ ನೀಡದ ಕ್ರೌರ್ಯ ಮತ್ತೊಂದೆಡೆ. ಸಾಲ ತೀರಿಸಿಯೇ ತೆರಳಬೇಕು ಎಂಬ ತಾಕೀತು  ಹಾಗೂ ಹಿಡಿದ ಕೆಲಸ ಅರ್ಧಕ್ಕೆ ನಿಲ್ಲಿಸಿ ಹೋಗಲು ಬಿಡೆವು ಎಂಬ ಒತ್ತಡ ಹೀಗೆ ಹಲವು  ಅಂಶಗಳನ್ನು ಈ ಸಂಕಲನ ಒಳಗೊಂಡಿದೆ.
 

* * * * * * * * * * * * * 

ಪುಸ್ತಕದಂಗಡಿ ತೆರದಿರಲಿ- ಕೇರಳ ಜನರ ಆಗ್ರಹ

ಲಾಕ್‌ಡೌನ್‌ ಮುಗಿದಿದೆಯೇ ಎಂಬ ಪ್ರಶ್ನೆಗೆ ’ಇಲ್ಲ’ ಎಂಬ ಉತ್ತರ ಹೇಳುವುದು ಸುಲಭವಲ್ಲ. ಲಾಕ್‌ಡೌನ್‌ನ ಘೋಷಿತ- ಅಘೋಷಿತ ಸಂಗತಿಗಳೇನೇ ಇರಲಿ. ಕೇರಳದಿಂದ ಪುಸ್ತಕಗಳು ಹಾಗೂ ಪುಸ್ತಕದಂಗಡಿಗಳಿಗೆ ಸಂಬಂಧಿಸಿದ ಆಶಾದಾಯಕ ಸುದ್ದಿಯೊಂದಿದೆ.

ಲಾಕ್‌ಡೌನ್‌ ಇರುವಾಗ ಪುಸ್ತಕದ ಅಂಗಡಿ ತೆರೆಯಲು ಜನ ’ಒತ್ತಡ’ ಹಾಕಿದರೆ ಹಾಗೂ ಹಾಗೂ ಅಲ್ಲಿ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ. ಕೊರೊನಾ ಹಿನ್ನೆಲೆ ಲಾಕ್ ಡೌನ್ ಆಘಾತದಿಂದ ಮಾನಸಿಕ ನೆಮ್ಮದಿ ಕಾಯ್ದುಕೊಳ್ಳಲು ಪುಸ್ತಕಗಳ ಓದು ಸಹಾಯಕ. ಅದಕ್ಕಾಗಿ ತುರ್ತು ಸೇವೆಗಳಡಿ ಪುಸ್ತಕಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು ಎಂಬುದು ಕೇರಳದ ನಾಗರಿಕರ ಆಗ್ರಹಿಸಿದರು.

ನಾಗರಿಕರ ಈ ಆಗ್ರಹಕ್ಕೆ ಅಲ್ಲಿಯ ಸರ್ಕಾರ ಪ್ರತಿಕ್ರಿಯಿಸಿ ತುರ್ತು ಸೇವೆಗಳ ಅಡಿಯಲ್ಲಿ ಪುಸ್ತಕದ ಅಂಗಡಿಗಳನ್ನೂ ಸೇರಿಸುವಂತೆ ಕೋರಿ ಮನವಿ ಸಲ್ಲಿಸಿತು. ಲಾಕ್ ಡೌನ್ ಅವಧಿಯಲ್ಲಿ ಔಷಧಿ ಅಂಗಡಿಗಳಿಗೆ ಇರುವ ವಿಶೇಷ ವಿನಾಯತಿ ಪುಸ್ತಕದ ಅಂಗಡಿಗಳಿಗೂ ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿ ಮನವಿ ಮಾಡಿದೆ.

ಕೇಂದ್ರ ಸರ್ಕಾರ ಈ ಆಗ್ರಹ ಒಪ್ಪಿಲ್ಲ. ಆದರೆ, ವಾರಕ್ಕೆ ಕನಿಷ್ಠ ಎರಡು ದಿನವಾದರೂ ಪುಸ್ತಕದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಕು. ಪುಸ್ತಕಗಳ ಓದಿನಿಂದ ಮನಸ್ಸಿನ ನೆಮ್ಮದಿ ಹೆಚ್ಚುತ್ತದೆ. ಪುಸ್ತಕದ ಓದು ಸಂಕಟದ ಗಳಿಗೆಯಲ್ಲಿ ನೆರವಿಗೆ ಬರುತ್ತದೆ. ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅಗತ್ಯ  ಎಂಬ ನಾಗರಿಕರ ಬಯಕೆಯನ್ನು ಕೇರಳ ಸರ್ಕಾರ ಸಮರ್ಥಿಸಿಕೊಂಡಿದೆ. 
 

* * * * * * * * * * * * * 

ಪುಸ್ತಕ ಖರೀಧಿಗೆ ಧಾವಂತ

ಲಾಕ್ ಡೌನ್ ಘೋಷಿಸಿದ ನಂತರ ಕೇರಳ ಚಲನಚಿತ್ರ ನಟ ಟೊವಿನೋ ಥಾಮಸ್ ಹಾಗೂ ಮಂಜು ವಾರಿಯರ್ ಸೇರಿದಂತೆ ಹಲವರು ಪುಸ್ತಕಗಳ ಅಂಗಡಿಗೆ ಧಾವಿಸಿ ಪುಸ್ತಕ ಖರೀದಿಸಿದರು. ಹೆಚ್ಚು ಪ್ರಮಾಣದಲ್ಲಿ ಪುಸ್ತಕಗಳು  ಮಾರಾಟವಾದವು. ನಟ ಥಾಮಸ್, ಸುಮಾರು 10 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಿದರು. 100ಕ್ಕೂ ಅಧಿಕ ಪ್ರಮುಖ ಪ್ರಕಾಶನ ಸಂಸ್ಥೆಗಳಿರುವ ಕೇರಳದಲ್ಲಿ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕಗಳ ಪ್ರಕಟಗೊಳ್ಳುತ್ತಿವೆ. ಭಾರತೀಯ ಯಾವುದೇ ರಾಜ್ಯದಲ್ಲಿ ಇಂತಹ ಬೆಳವಣಿಗೆ ಇಲ್ಲ.

ಕೇರಳದಲ್ಲಿ ಪುಸ್ತಕ ಅಂಗಡಿಗಳನ್ನು ತೆರೆಯಲು ವಿಶೇಷ ಅನುಮತಿ ನೀಡುವಂತೆ ಅಲ್ಲಿಯ ಪುಸ್ತಕ ಅಂಗಡಿ ಮಾಲೀಕರ ಹಾಗೂ ಪ್ರಕಾಶಕರೂ ಆಗ್ರಹಿಸಿದ್ದಾರೆ. ಮುನಸಿಪಲ್ ವ್ಯಾಪ್ತಿಯ ಎಲ್ಲ ಹೋಟೆಲ್, ರೆಸ್ಟೊರೆಂಟ್, ವಾಹನ ದುರಸ್ತಿ ತಾಣಗಳು, ಸಲೂನ್ ಅಂಗಡಿಗಳು ಇತ್ಯಾದಿ ತುರ್ತು ಸೇವೆಯಡಿ ತೆರೆಯಲು ಕೇಂದ್ರ ಸರ್ಕಾರ ಅನುಮತಿಸಿದೆ. ಮಾನಸಿಕ ಆರೋಗ್ಯ ಹೆಚ್ಚಸುವ, ಆತ್ಮಬಲ ತಂದುಕೊಡುವ ಪುಸ್ತಕಗಳಿಗೆ ಈ ವಿಶೇಷ ಅನುಮತಿ ಏಕಿಲ್ಲ ಎಂಬುದು ಕೇರಳ ನಾಗರಿಕರ ಸಾತ್ವಿಕ ಆಕ್ರೋಶ. 

* * * * * * * * * * * * * 
 

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...