"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್

Date: 09-11-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಚೀನಾ ಮೂಲದ ಕಂಟೆಂಪೊರರಿ ಆರ್ಟ್ ಕಲಾವಿದ ಝಾಂಗ್ ಹುವಾನ್  ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಝಾಂಗ್ ಹುವಾನ್  (Zhang Huan)
ಜನನ: 1965 
ಶಿಕ್ಷಣ: ಹೆನಾನ್ ವಿವಿ, ಚೀನಾ ಸೆಂಟ್ರಲ್ ಅಕಾಡೆಮಿ ಆಫ್ ಫೈನ್ ಆರ್ಟ್, ಬೀಜಿಂಗ್ 
ವಾಸ: ಷಾಂಘಾಯ್, ಚೀನಾ
ಕವಲು: ಕಂಟೆಂಪೊರರಿ ಆರ್ಟ್ 
ವ್ಯವಸಾಯ: ಪರ್ಫಾರ್ಮೆನ್ಸ್ ಆರ್ಟ್, ಪೇಂಟಿಂಗ್, ಸ್ಕಲ್ಪ್ಚರ್ 

ಝಾಂಗ್ ಹುವಾನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಝಾಂಗ್ ಹುವಾನ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಚೀನಾದ ಕಲಾ ವಿಮರ್ಶಕ ಗಾವೊ ಮಿಂಗ್ಲೂ ಅವರು ತಮ್ಮ ಒಂದು ಲೇಖನದಲ್ಲಿ ಚೀನಾದ ಸಮಕಾಲೀನ ಕಲಾ ಜಗತ್ತಿನ ಬಗ್ಗೆ ವಿವರಿಸುವಾಗ, ಅಲ್ಲಿನ ಪರ್ಫಾರ್ಮೆನ್ಸ್ ಆರ್ಟಿನ ಬಗ್ಗೆ ಹೀಗೆ ಹೇಳುತ್ತಾರೆ. “ಚೀನಾದ ಕನ್ಫ್ಯೂಷಿಯನ್ ಸಿದ್ಧಾಂತದ ಪ್ರಕಾರ “ವರ್ತನೆ” ಎಂಬುದು ಒಬ್ಬ ವ್ಯಕ್ತಿಯ ವ್ಯಕ್ತಿಗತ ವರ್ತನೆ ಮಾತ್ರವಲ್ಲ, ಅದು ಆ ವ್ಯಕ್ತಿ ತಾನು ಇರುವ ಸಮಾಜದ ಭಾಗವಾಗಿ ಹೊರಹೊಮ್ಮಿಸುವ ನೈತಿಕ ಪ್ರಜ್ಞೆಯೂ ಆಗಿರುತ್ತದೆ. ಹಾಗಾಗಿಯೇ ಚೀನೀ ಭಾಷೆಯಲ್ಲಿ ಪರ್ಫಾರ್ಮೆನ್ಸ್ ಆರ್ಟ್‌ಅನ್ನು ’ಕ್ಸಿಂಗ್‌ವೇಯಿ ಈಷು’ (ವರ್ತನಾ ಕಲೆ ಬಿಹೇವಿಯರಲ್ ಆರ್ಟ್) ಎಂದು ಕರೆಯುತ್ತಾರೆ.” 90ರ ದಶಕದ ಆದಿ ಭಾಗದಲ್ಲಿ, ತಿಯಾನ್ ಅನ್ ಮನ್ ಚೌಕದ ಘಟನೆಯ ಬಳಿಕದ ಚೀನಾದೊಳಗಿನ ಪ್ರತಿರೋಧದ ಭಾಗವಾಗಿ ಹೊರಹೊಮ್ಮಿದ ಝಾಂಗ್ ಹುವಾನ್ ಅವರ “ಪರ್ಫಾರ್ಮೆನ್ಸ್ ಆರ್ಟ್” ಎಷ್ಟು ಪ್ರಭಾವೀ ಪ್ರತಿರೋಧವಾಗಿ ದಾಖಲಾಯಿತೆಂದರೆ, ಇಂದು ಚೀನಾದ ಕಂಟೆಂಪೊರರಿ ಕಲಾವಿದರನ್ನು ಅಂತಾರಾಷ್ಟ್ರೀಯವಾಗಿ ಗುರುತಿಸುವಾಗ ದೊಡ್ಡ ಎರಡು ಮೂರು ಹೆಸರುಗಳಲ್ಲಿ ಝಾಂಗ್ ಹುವಾನ್ ಅವರ ಹೆಸರೂ ಒಂದು. ಪ್ರತಿರೋಧ, ವ್ಯಗ್ರತೆಗಳ ಮೂಲಕವೇ ಹಲವು ಬಾರಿ ಅಪಾಯಕಾರಿ ಅನ್ನಿಸುವ ಮಟ್ಟದಲ್ಲಿ ತನ್ನ ಪರ್ಫಾರ್ಮೆನ್ಸ್‌ಗಳನ್ನು ಪ್ರದರ್ಶಿಸುವ ಝಾಂಗ್ ಹುವಾನ್ ಪಾಶ್ಚಾತ್ಯ ತಂತ್ರಗಳು ಮತ್ತು ಚೀನಾದ ಸಾಂಸ್ಕೃತಿಕ ಹಿನ್ನೆಲೆಗಳನ್ನು ಹದವಾಗಿ ಮಿಶ್ರಣಗೊಳಿಸಿ ಯಶಸ್ವಿಯಾದರು. 

ಸಮಕಾಲೀನ ಚೀನಾದ ಸಾಂಸ್ಕೃತಿಕ ಸನ್ನಿವೇಶವನ್ನು ಅಲ್ಲಿನ ಕ್ಯಾಪಿಟಲಿಸ್ಟ್ ಆಕಾಂಕ್ಷೆಗಳು ಮತ್ತು ಕಮ್ಯೂನಿಸ್ಟ್ ಆದರ್ಶಗಳ ನಡುವಿನ ದ್ವಂದ್ವಗಳಲ್ಲೇ ಸೆರೆಹಿಡಿಯುವ ಝಾಂಗ್ ಹುವಾನ್ ತಾನು ದೀರ್ಘಕಾಲ ಇದ್ದ ಅಮೆರಿಕದ ಬಹುಸಂಸ್ಕೃತಿ ತೀರಾ ಮೇಲ್ಪದರದ್ದಾಗಿರುವುದನ್ನೂ ಕೂಡ ಪೌರಾತ್ಯ ಕಣ್ಣುಗಳಿಂದ ಗ್ರಹಿಸುತ್ತಾರೆ. 

ದಕ್ಷಿಣ-ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಕೃಷಿ ಕುಟುಂಬದಲ್ಲಿ, ಚೀನಾ ಸಾಂಸ್ಕೃತಿಕ ಕ್ರಾಂತಿಗೆ ಒಂದು ವರ್ಷ ಮೊದಲು ಹುಟ್ಟಿದ ಝಾಂಗ್ ಹುವಾನ್ ಬಾಲ್ಯದ ಹುಟ್ಟು ಹೆಸರು ಝಾಂಗ್ ಡಾಂಗ್‌ಮಿಂಗ್. ಆದರೆ, ಸಾಂಸ್ಕೃತಿಕ ಕ್ರಾಂತಿಯ ಚಹರೆ ಹೊಂದಿದ್ದ ಈ ಹೆಸರಿನ ಬಗ್ಗೆ ಅವರಿಗೆ ಮುಜುಗರ ಇತ್ತು. ಮುಂದೆ ಬೀಜಿಂಗ್‌ನಲ್ಲಿ ಉನ್ನತ ಶಿಕ್ಷಣಕ್ಕೆಂದು ಹೋದಾಗ ಅವರು ತಮ್ಮ ಹೆಸರನ್ನು ಝಾಂಗ್ ಹುವಾನ್ ಎಂದು ಬದಲಿಸಿಕೊಳ್ಳುತ್ತಾರೆ. 

ಶಿಕ್ಷಣದ ಬಳಿಕ, ಪೇಂಟಿಂಗ್ ಕಂಪನಿಯೊಂದರಲ್ಲಿ ಪ್ರಸಿದ್ಧರ ಚಿತ್ರಗಳನ್ನು ನಕಲು ಮಾಡುವ ಕೆಲಸ ಮಾಡುತ್ತಿದ ಝಾಂಗ್ ಹುವಾನ್, ತನ್ನ ಕೌಶಲದಿಂದಾಗಿ ಮಾಲಕರಿಗೆ ಒಳ್ಳೆಯ ಆದಾಯ ತಂದುಕೊಡುತ್ತಿದ್ದರೂ ಪಡೆಯುತ್ತಿದ್ದ ಸಂಬಳ ಅರೆಕಾಸು. ಸಂಬಳ ಹೆಚ್ಚು ಮಾಡಲು ಕೇಳಿದಾಗ ಮಾಲಕರು ನಿರಾಕರಿಸುತ್ತಾರೆ. ಆ ಸಿಟ್ಟಿಗೆ ಕೆಲಸ ತ್ಯಜಿಸಿದ ಝಾಂಗ್ ಹುವಾನ್ ರಸ್ತೆಯಲ್ಲಿ ಬಸ್ಸೊಂದಕ್ಕೆ ಮುಷ್ಠಿಯಿಂದ ಗುದ್ದಿ, ಕೈಗೆ ಜಖಂ ಮಾಡಿಕೊಳ್ಳುತ್ತಾರೆ. ಈ ಘಟನೆ, ಅವರ ಮುಂದಿನ ಸ್ವಯಂ ಜಖ್ ಮಾಡಿಕೊಳ್ಳಬಲ್ಲ ಪರ್ಫಾರ್ಮೆನ್ಸ್ ಕಲೆಗಳಿಗೆ ಟ್ರಿಗರ್ ಆಯಿತೆಂದು ಹೇಳಲಾಗುತ್ತದೆ. 

ಕೆಲಸ ಕಳೆದುಕೊಂಡು ದಾ ಷಾನ್ ಝಿ ಎಂಬ ನಗರದ ಹೊರವಲಯದ ಬಡ ಕಲಾವಿದರ ಕೇರಿಯಲ್ಲಿ ಉಳಿದುಕೊಂಡ ಝಾಂಗ್ ಹುವಾನ್, ಬಡತನದ ಕಾರಣಕ್ಕಾಗಿ ಅಲ್ಲಿನ ಗೆಳೆಯರೊಂದಿಗೆ ದೇಹವನ್ನೆ ಕಲೆಯಾಗಿ ಪರಿವರ್ತಿಸಿಕೊಂಡು ಬದುಕತೊಡಗುತ್ತಾರೆ. ನ್ಯೂಯಾರ್ಕ್ ಮಾದರಿಯ “ಈಸ್ಟ್ ವಿಲೇಜ್” ಎಂದೇ ಹೆಸರಾದ ಇಲ್ಲಿನ ಕಲಾವಿದರು ಚೀನಾ ಸರ್ಕಾರಕ್ಕೆ ಅತಿರೇಕ ಅನ್ನಿಸತೊಡಗಿದ್ದರು.  ಮಾ ಲಿಯುಮಿಂಗ್ ಎಂಬ ಒಬ್ಬ ಕಲಾವಿದ ಬೆತ್ತಲಾಗಿ ಅಡುಗೆ ಮಾಡುವ ಪರ್ಫಾರ್ಮೆನ್ಸ್ ಮಾಡಿದರು ಎಂಬ ಕಾರಣಕ್ಕಾಗಿ ಚೀನೀ ಪೊಲೀಸರು ಆ ಕೇರಿಯನ್ನೇ ಮುಚ್ಚುಗಡೆ ಮಾಡುತ್ತಾರೆ. 

ಬೆತ್ತಲೆ ದೇಹವನ್ನೇ ಕಲಾಕೃತಿ ಮಾಡಿಕೊಂಡ ಝಾಂಗ್ ಹುವಾನ್ ಅವರ ಆರಂಭಿಕ ಕಲಾಕೃತಿಗಳು ಯಾವ ಪರಿ ಅಪಾಯಕಾರಿ ಆಗಿದ್ದವೆಂದರೆ, ಅವರು ತನ್ನ ಬೆತ್ತಲೆ ದೇಹವನ್ನೇ ಬೋರ್ಡೊಂದಕ್ಕೆ ಸ್ಟ್ರಾಪ್ ಮೂಲಕ ಬಿಗಿಸಿಕೊಂಡು ಸೀಲಿಂಗಿನಲ್ಲಿ ನೇತಾಡುತ್ತಾ, ತನ್ನ ದೇಹದ ರಕ್ತವನ್ನು ಇಲೆಕ್ಟ್ರಿಕ್ ಹೀಟರ್‌ಮೇಲೆ ಹನಿಯ ಬಿಟ್ಟರು, ಸಣ್ಣ ಡಬ್ಬಿಯೊಳಗೆ ಬಂಧಿಯಾದರು. 

1998ರಲ್ಲಿ ನ್ಯೂಯಾರ್ಕಿಗೆ ತೆರಳಿ, ಅಲ್ಲಿ ಐಸ್ ಗಡ್ಡೆಯ ಹಾಸಿಗೆಯ ಮೇಲೆ ನಾಯಿಗಳ ನಡುವೆ ಹಲವು ಹೊತ್ತು ಕವುಚಿ ಮಲಗಿದ ಪರ್ಫಾರ್ಮೆನ್ಸ್( Pilgrimage: Wind and Water in New York ) ಬಳಿಕ ಅದೇ ವರ್ಷ ಅವರು ನ್ಯೂಯಾರ್ಕಿಗೆ ವಾಸ ಬದಲಿಸಿಕೊಂಡರು. ಎಂಟು ವರ್ಷಗಳ ಅಲ್ಲಿನ ವಾಸದ ಬಳಿಕ ನ್ಯೂಯಾರ್ಕ್ ಕೂಡ ಹಿತವೆನ್ನಿಸದಿದ್ದಾಗ ಮರಳಿ ಚೀನಾಕ್ಕೆ ಬಂದು, ಷಾಂಘಾಯ್‌ನಲ್ಲಿ ದೊಡ್ಡ ಸ್ಟುಡಿಯೊ ತೆರೆದರು ಮತ್ತು ನೂರಾರು ಮಂದಿ ಸಿಬ್ಬಂದಿಗಳನ್ನು ನೇಮಿಸಿಕೊಂಡು, ದೊಡ್ಡ ಪ್ರಮಾಣದಲ್ಲಿ ಶಿಲ್ಪಗಳನ್ನು, ಪೇಂಟಿಂಗ್‌ಗಳನ್ನು ರಚಿಸಲಾರಂಭಿಸಿದರು. 

ಪರ್ಫಾರ್ಮೆನ್ಸ್ ಕಲಾವಿದರಾಗಿ, ಬೆಟ್ಟದ ಮೇಲೆ ಬೆತ್ತಲು ಮಲಗಿದ, ಮೈ ತುಂಬ ಹಸಿ ಮಾಂಸವನ್ನು ಹೊದ್ದುಕೊಂಡು ನ್ಯೂಯಾರ್ಕಿನ ಬೀದಿಗಳಲ್ಲಿ ಸುತ್ತಾಡಿದ, ಮೈಗೆ ಮೀನೆಣ್ಣೆ-ಜೇನು ಮೆತ್ತಿಕೊಂಡ ಬೆತ್ತಲೆ ದೇಹದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ನೊಣಗಳ ನಡುವೆ ಕುಳಿತ ಅವರ ಪರ್ಫಾರ್ಮೆನ್ಸ್‌ಗಳು ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಿವೆ. ಮುಂದೆ ಪರ್ಫಾರ್ಮೆನ್ಸ್ ಆರ್ಟ್‌ನಿಂದ ದೂರ ಸರಿದ ಬಳಿಕ ಶಿಲ್ಪಗಳನ್ನು ರಚಿಸತೊಡಗಿದ ಅವರು, ಬುದ್ಧನ ಮೂರ್ತಿಯ ಭಾಗಗಳನ್ನು ಊದುಬತ್ತಿಯ ಸುಟ್ಟ ಬೂದಿಯಲ್ಲಿ ರಚಿಸಿದ  ಕಲಾಕೃತಿಗಳನ್ನು ಅವಿರುವ ಸ್ಥಳದಿಂದ ತೆಗೆಯಲಾಗುವುದಿಲ್ಲ ಎಂಬುದು ವಿಶಿಷ್ಠ. ಅವರು ತಮ್ಮ ಪರ್ಫಾರ್ಮೆನ್ಸ್ ಕಲಾಕೃತಿಗಳ ವಸ್ತು ಮತ್ತು ಸಂದರ್ಭವನ್ನು ತಮ್ಮ ವೆಬ್‌ಸೈಟಿನಲ್ಲಿ ಹೀಗೆ ವಿವರಿಸಿಕೊಂಡಿದ್ದಾರೆ: "The power of unified action to challenge oppressive political regimes; the status and plight of the expatriate in the new global culture; the persistence of structures of faith in communities undermined by violent conflict; and the place of censorship in contemporary democracy."  

ಝಾಂಗ್ ಹುವಾನ್ ಅವರ ಪರಿಚಯ ಚಿತ್ರ:
 

ಝಾಂಗ್ ಹುವಾನ್ ಅವರ ಜೊತೆ ಮಾತುಕತೆ: 

ಚಿತ್ರ ಶೀರ್ಷಿಕೆಗಳು: 
ಝಾಂಗ್ ಹುವಾನ್ ಅವರ  12M2, 1994, documentation of a 40-minute performance. In the height of midsummer heat, the artist covered himself in honey and fish oil and sat unmoving in a public latrine in Beijing’s East Village. 

ಝಾಂಗ್ ಹುವಾನ್ ಅವರ Ash Head No.1 (2007)  

ಝಾಂಗ್ ಹುವಾನ್ ಅವರ Donkey (2005)  

ಝಾಂಗ್ ಹುವಾನ್ ಅವರ Family Tree, (2000)  

ಝಾಂಗ್ ಹುವಾನ್ ಅವರ Family Tree, 2001  

ಝಾಂಗ್ ಹುವಾನ್ ಅವರ love-no-2 (2020)  

ಝಾಂಗ್ ಹುವಾನ್ ಅವರ MY NEW YORK, 2002, documentation of a performance, in which the artist wore a suit of raw meat and walked the streets of New York, handing white doves to onlookers  

ಝಾಂಗ್ ಹುವಾನ್ ಅವರ MY ROME (KISS), 2005  

ಝಾಂಗ್ ಹುವಾನ್ ಅವರ poppy-field-no-23 (2013) 

ಝಾಂಗ್ ಹುವಾನ್ ಅವರ TO ADD ONE METER TO AN ANONYMOUS MOUNTAIN, 1995, documentation of a performance in which Zhang and others lay in a pile on Miaofeng Mountain, near Beijing.

ಝಾಂಗ್ ಹುವಾನ್ ಅವರ TO RAISE THE WATER LEVEL IN A FISH POND, 1997, documentation of a performance, in which the artist and 40 participants stood in a pond to raise the water level by a meter.  

ಝಾಂಗ್ ಹುವಾನ್ ಅವರ Young Mother, Incense ash on linen (2007)  

ಝಾಂಗ್ ಹುವಾನ್ ಅವರ ZHANG HUAN performing Pilgrimage - Wind and Water for Inside Out- New Chinese Art, at P.S.1 Contemporary Art Center, New York, 1998. 

ಈ ಅಂಕಣದ ಹಿಂದಿನ ಬರೆಹಗಳು:
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್

ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...