ಡಿಸೆಂಬರ್ 10 ಮತ್ತು 11 ರಂದು ದೆಹಲಿ ಕವನ ಉತ್ಸವ

Date: 05-12-2022

Location: ಬೆಂಗಳೂರು


ಭಾರತದ ಅತಿದೊಡ್ಡ ಕಾವ್ಯೋತ್ಸವಗಳಲ್ಲಿ ಒಂದಾಗಿರುವ ದೆಹಲಿ ಕವನ ಉತ್ಸವ (Delhi Poetry Festival)ದ 6ನೇ ಆವೃತ್ತಿಯು ಈ ವರ್ಷ ಡಿಸೆಂಬರ್ 10 ಮತ್ತು 11 ರಂದು ದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ನಡೆಯಲಿದೆ. ಹಿಂದಿ, ಉರ್ದು, ಪಂಜಾಬಿ ಮತ್ತು ಇಂಗ್ಲಿಷ್‌ನಲ್ಲಿ ಕವನಗಳ ಹಬ್ಬವನ್ನು ಆಚರಿಸಲಾಗುತ್ತದೆ. 
 
ದೆಹಲಿ ಕವನ ಉತ್ಸವದ ಬಗ್ಗೆ ಮಾತನಾಡಿರುವ ಕಾವ್ಯೋತ್ಸವದ ನಿರ್ದೇಶಕ ಡಾಲಿ ಸಿಂಗ್ ಮಾತನಾಡಿ, ದೆಹಲಿ ಯಾವಾಗಲೂ ಕವಿಗಳ ಆಟದ ಮೈದಾನವಾಗಿದೆ.ಕಾವ್ಯ ಮತ್ತು ಪಲಾಯನವಾದದಲ್ಲಿ ಪಾಲ್ಗೊಳ್ಳುವುದು ಮಾನವ ಅಭ್ಯಾಸ .ಅದು ನಮ್ಮ ಆಲೋಚನೆಗಳಲ್ಲಿ ಸ್ಥಾನ ಪಡೆಯುತ್ತದೆ. ಕಾವ್ಯ ನಮ್ಮನ್ನು ತಲ್ಲೀನವಾಗಿಸುತ್ತದೆ. ಕಾವ್ಯಕ್ಕೆ ವ್ಯಕ್ತಿಯ ಬದುಕಿನಲ್ಲಿ ಹೊಸ ಕಿಚ್ಚನ್ನು ಹಚ್ಚುವ ಶಕ್ತಿಯಿದೆ. ಅದು ನಮ್ಮನ್ನು ನಾವು ನೋಡುವ ರೀತಿಯನ್ನು ಬದಲಾಯಿಸಬಹುದು. ನಾವು ಜಗತ್ತನ್ನು ನೋಡುವ ವಿಧಾನವನ್ನು ಬದಲಾಯಿಸಬಹುದು ಎಂಬುದಾಗಿ ಹೇಳಿದ್ದಾರೆ. 
 
ದೆಹಲಿ ಕವನ ಉತ್ಸವದ ಹುಟ್ಟು: 2013 ರಲ್ಲಿ ಪ್ರಾರಂಭವಾದ ದೆಹಲಿ ಕವನ ಉತ್ಸವವು ನಗರೀಕರಣದ ಭರಾಟೆಯಲ್ಲಿ ಮರೆಯಾಗುತ್ತಿರುವ ಕಾವ್ಯದ ಕಲೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ. ಕವಿಗಳ ಕಾರ್ನರ್ ಗುಂಪಿನಿಂದ ಹುಟ್ಟು ಪಡೆದುಕೊಂಡ ದೆಹಲಿ ಕವನ ಉತ್ಸವವು, ಕಾವ್ಯವನ್ನು ಉತ್ತೇಜಿಸುವ ಮತ್ತು ಸಂಭ್ರಮಿಸುವ ಉದ್ದೇದೊಂದಿಗೆ ಬಹುಭಾಷಾ ಕಾರ್ಯಕ್ರಮವಾಗಿ ರೂಪುಗೊಂಡಿದೆ. 
 
ಉದಯೋನ್ಮುಖ ಮತ್ತು ಪ್ರಸಿದ್ಧ ಕವಿಗಳು ಮತ್ತು ವಿದೇಶೀ ಕವಿಗಳು 3-ದಿನಗಳ ಸುದೀರ್ಘ ಕವನಗಳ ಹಬ್ಬವನ್ನು ಆಚರಿಸಲು, ಚರ್ಚೆಗಳು ಮತ್ತು ವಾಚನಗೋಷ್ಠಿಯಲ್ಲಿ ಭಾಗವಹಿಸಲು ಜೊತೆಗೆ ಸೇರುತ್ತಾರೆ. ಒಟ್ಟಿನಲ್ಲಿ ದೇಶದ ರಾಜಧಾನಿಯಲ್ಲಿ ಕವನ ಹಬ್ಬದ ಕಳೆಕಟ್ಟಿದ್ದು, ಹೊಸ ಹೊಸ ಪ್ರಯೋಗಗಳಿಗೂ ನಾಂದಿ ಹಾಡುತ್ತಿದೆ.

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...