ಗಂಗಾವತಿಯಲ್ಲಿ ದೇಶಪ್ರೇಮ ಆಯಾಮಗಳ ಅನಾವರಣ

Date: 18-11-2019

Location: ಗಂಗಾವತಿ


“ಸಮಸ್ತ ಮಾನವ ಜನಾಂಗವನ್ನು ಅಪ್ಪಿಕೊಂಡು ಪ್ರೀತಿಸುವುದು ದೇಶಭಕ್ತಿಯೇ ಹೊರತು ಯುವ ಜನರನ್ನು ಭಾವೋದ್ವೇಗಗೊಳಿಸುವುದು ದೇಶಪ್ರೇಮವಲ್ಲ, ಕಟ್ಟುಕಥೆಗಳಿಂದ ದೇಶಭಕ್ತಿ ನಿರ್ಮಾಣ ಸಾಧ್ಯವಿಲ್ಲ” ಎಂದರು ಚಿಂತಕ ಜಿ. ರಾಮಕೃಷ್ಣ. 

ಶರಣ ಸಾಹಿತ್ಯ ಪರಿಷತ್‌, ಬಯಲು ಸಾಹಿತ್ಯ ವೇದಿಕೆ, ದಲಿತ ಸಾಹಿತ್ಯ ಪರಿಷತ್, ಶರಣಕಲಾ ಬಳಗ ಮತ್ತಿತರ ವಿಚಾರದ ಸಾಹಿತ್ಯಕ ಸಂಘಟನೆಗಳು ಹಮ್ಮಿಕೊಂಡಿರುವ ದೇಶ ಪ್ರೇಮದ ಆಯಾಮಗಳು ಎಂಬ ಎರಡು ದಿನದ ವಿಚಾರ ಸಂಕಿರಣವು ಶನಿವಾರ ಮತ್ತು ಭಾನುವಾರ ಐಎಂಎ ಭವನದಲ್ಲಿ ನಡೆಯಿತು. “ನೈಜ ಪ್ರಜಾಫ್ರಭುತ್ವ ಮುನ್ನೆಲೆಗೆ ಬರುವ ಅವಶ್ಯವಿದ್ದು ಚುನಾವಣಾ ವ್ಯವಸ್ಥೆ ಸುಧಾರಣೆಗೊಂಡಾಗ ಮಾತ್ರ ದೇಶದವು ಸುಭೀಕ್ಷ” ಎಂದು ಕಾಳಜಿ ವ್ಯಕ್ತಪಡಿಸಿದರು ಸಿದ್ದನಗೌಡ .

“ಯಾವ ದಾರಿಯಲ್ಲಿ ಮುನ್ನೆಡೆಯಬೇಕೆಂಬುದು ವೈಚಾರಿಕ ಚಿಂತನೆಗಳಿಂದ ಸಾಧ್ಯ. ಆಗ ಸಂಘಟನೆಯ ಮೂಲಕ ಸೆಕ್ಯುಲರ್ ಪರಿವಾರ ಕಟ್ಟಿ ದೇಶವನ್ನು ಸುಭದ್ರಗೊಳಿಸಲು ಸಾಧ್ಯ” ಎಂದರು. ’ಗೋ ಬ್ಯಾಕ್ ಟು ವಿಲೇಜ್, ಪೇ ಬ್ಯಾಕ್ ಟು ವಿಲೇಜ್’ ಎಂಬ ಅರ್ಥದ ಹಿನ್ನೆಲೆ ತಿಳಿಸಿ “ಸಾವಕಾಶ ಮಾಡಿಕೊಂಡು ಹುಟ್ಟಿದ ಹಳ್ಳಿಗೆ ಹಿಂತಿರುಗಿ ಜನಪರ ಕೆಲಸ ಮಾಡಿ ಜನರ ಮನಸ್ಸನ್ನು ಒಟ್ಟುಗೂಡಿಸಬೇಕಿದೆ” ಎಂದು ಯುವಜನರನ್ನು ಗುರುತಿಸಿ ಮಾತನಾಡಿದರು. 

“ಬಹುತ್ವ ಭಾರತ ಕಟ್ಟುವುದೇ ದೇಶಪ್ರೇಮ. ನೆಲಮೂಲ ಸಂಸ್ಕೃತಿ ಸಂಯಮದ ಬದುಕಿಗೆ ಪೂರಕವಾಗಿದೆ” ಎಂದು ಚಿಂತಕಿ ಕೆ. ನೀಲಾ ನುಡಿದರು.   

ಮಹಿಳಾಪರ ಚಿಂತಕಿ ನಯನಾ ಮೋಟಮ್ಮ ಮಾತನಾಡಿ “ದೇಶ ರಾಜಕಾರಣದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆಂದು ಅವರ ಒಂದೆರಡು ಸಾಧನೆಯನ್ನು ಬಿಂಬಿಸಿ ಮಾತನಾಡುತ್ತೇವೆ. ಆದರೆ ವಾಸ್ತವದಲ್ಲಿ ಬೆರೆಳೆಕೆಯಷ್ಟು ಮಾತ್ರ” ಎಂದು ಅಂಕಿ ಅಂಶಗಳ ಮೂಲಕ ತೆರೆದಿಟ್ಟರು. 

“ವೈಚಾರಿಕ ಪುಸ್ತಕಗಳು ಜನರಿಗೆ ಮುಟ್ಟಿ ವ್ಯಕ್ತಿಗಿಂತ ವಿಚಾರಗಳು ಮತ್ತು ಮಾಡುವ ಕೆಲಸಗಳು ಮುಖ್ಯವಾಗಬೇಕು. ದೇಶಪ್ರೇಮವೆಂಬುದು ಮನದಲ್ಲಿ ಆರಾಧಿಸುವುದಾಗುತ್ತದೆ, ನಮ್ಮ ಕಾರ್ಯಕ್ಷೇತ್ರಗಳಲ್ಲಿ ಶ್ರದ್ಧೆ, ನಿಷ್ಠೆಯಿಂದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಅದುವೇ ದೇಶಪ್ರೇಮ” ಎಂದು ಕ್ರಿಯಾತ್ಮದ ಬಗ್ಗೆ ಚೆನ್ನಬಸವಣ್ಣ ಮಾತನಾಡಿದರು. 

ರಮೇಶ್ ಗಬ್ಬೂರ್‌ ಅವರು ಅರಿವಿನ ಹಾಡುಗಳನ್ನಾಡಿ ಸಭೀಕರ ಮನ ಗೆದ್ದರು.  ನಾವು ನಮ್ಮಲ್ಲಿ ಮತ್ತು ಅಹರ್ನಿಶಿ ಪ್ರಕಾಶನದ ವಾರ್ಷಿಕ ಸರಣಿಗೆ ಆಯ್ಕೆಯಾದ ನಾಗರಾಜ್ ಕೋರಿ ಅವರ ತನುಬಿಂದಿಗೆ ಕಥಾಸಂಕಲನ ಬಿಡುಗಡೆ ಮಾಡಲಾಯಿತು. ನಾಗರಾಜ್ ಕೋರಿ ಮತ್ತು ಅಮರೇಶ ನುಗಡೋಣಿ ಬಿಡುಗಡೆ ಮಾಡಿದರು. ಕವಿಗೋಷ್ಠಿಯಲ್ಲಿ ಅನಸೂಯ ಕಾಂಬಳೆ ಆಶಯ ಮಾತುಗಳನ್ನಾಡಿದರು. ವೀರಪ್ಪ ತಾಳದವರ, ಸೋಮು ಕುದರಿಹಾಳ, ಕೊಟ್ರೇಶ್ ಕೊಟ್ಟೂರ್, ಪ್ರವೀಣ್, ರೇಣುಕಾ ಚಿತ್ರದುರ್ಗ,  ರೇಣುಕಾ ಹೆಳವರ, ಪಾರ್ವತಿ ಕನಕಗಿರಿ, ಜಗದೇವಿ ಕಲಶೆಟ್ಟಿ, ಮಮ್ತಾಜ್ ಬಿರಾದರ್‌, ಸಂಗಪ್ಪ ತೌಡಿ, ಹರಿನಾಥ ಬಾಬು, ಶರೀಫ್ ಹಸಮಕಲ್, ಅರಣಾ ನರೇಂದ್ರ, ಸಿ.ಬಿ. ಚಿಲ್ಕರಾಗಿ, ಗಿರೀಶ್ ಜಕಾಪುರೆ. ಟಿ.ಎಂ. ಉಷಾರಾಣಿ, ಮಹಾಂತೇಶ್ ಪಾಟೀಲ್, ನಜ್ಮಾ ನಜೀರ್‌, ರಮೇಶ್ ಗುಂಡೂರ್, ರೇಣುಕಾರಾಧ್ಯ ಎಚ್. ಎಸ್‌.  ಸೇರಿ ಇತರರು ಕವನ ವಾಚಿಸಿದರು. ಚಿಂತಕಿ ಶೈಲಜಾ ಹಿರೇಮಠ,  ಶರಣ ಚಿಂತಕ ಸಿ. ಹೆಚ್. ಕೊಟ್ರಪ್ಪ ಹಿರೇಮಾಗಡಿ, ಕೆ.ಭಾರದ್ವಾಜ್, ಸಿ.ಎಚ್. ನಾರಿನಾಳ ಸೇರಿ ಇತರರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...