Date: 17-03-2023
Location: ಬೆಂಗಳೂರು
ಸಾಹಿತ್ಯದ ರಚನೆಗೆ ಅತ್ಯುತ್ತಮ ವೇದಿಕೆಯಾಗಿರುವ ನಾಟಕ ಕ್ಷೇತ್ರ ವಿಶ್ವವಿದ್ಯಾನಿಲಯವಿದ್ದಂತೆ ಎಂಬುದು ರಂಗ ನಿರ್ದೇಶಕ ಬಿ.ವಿ.ರಾಜಾರಾಂ ಅಭಿಪ್ರಾಯ.
ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನ ವತಿಯಿಂದ ಶುಕ್ರವಾರ ‘ಬೊಂಬೆಹಬ್ಬ- ಬೊಂಬೆಯ ಭಾವಾಭಿವ್ಯಕ್ತಿಯಲ್ಲಿ ನವರಸಗಳು’ ಆರನೇ ದಿನದ ಕಾರ್ಯಕ್ರಮವು ನಡೆಯಿತು. ರಂಗ ನಿರ್ದೇಶಕ ಬಿ.ವಿ. ರಾಜಾರಾಂ ಅವರು ‘ರಂಗಪ್ರಯೋಗಗಳಲ್ಲಿ ನವರಸಗಳ ಅಭಿವ್ಯಕ್ತಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮನುಷ್ಯನ ಅಭಿವ್ಯಕ್ತಿಯ ಪ್ರತೀಕ ನಾಟಕ : ‘ಮನುಷ್ಯ ಅಭಿವ್ಯಕ್ತಿ ಹಾಗೂ ಅಭಿನಯದೊಂದಿಗೆ ಬೆರೆತಿದ್ದಾನೆ. ಈಗಿನ ಸಂದರ್ಭದಲ್ಲಿ `University of unletter’ ಎಂದು ನಾಟಕ ಕ್ಷೇತ್ರವನ್ನು ಕರೆಯಲಾಗುತ್ತದೆ. ಅದು, ಅನಕ್ಷರಸ್ಥರ ವಿಶ್ವವಿದ್ಯಾಲಯ ಎಂದರ್ಥ. ಅಕ್ಷರಸ್ಥರಿಗೆ ಓದುವ ಮುಖೇನ ಅರ್ಥವಾಗುವ ಭಾಷೆ, ಅನಕ್ಷರಸ್ಥರಿಗೆ ನಾಟಕದ ಮೂಲಕ ಅರ್ಥವಾಗಲಿದೆ. ಹೀಗಾಗಿ, ನಾಟಕರಂಗ ಒಂದು ವಿಶ್ವವಿದ್ಯಾಲಯ. ನಾಟಕ ಕ್ಷೇತ್ರ ಮಾನವ ಹಾಗೂ ಆತನ ಶಕ್ತಿಯ ಹಿಡಿತ. ಹಿರಿಯ ವಿದ್ವಾಂಸರು ಉಳಿಸಿಕೊಟ್ಟಿರುವ ಅನೇಕ ಸಾಹಿತ್ಯಾತ್ಮಕ ರಚನೆಗಳು ನಮಗೆ ಉತ್ತಮ ನಿದರ್ಶನ. ಇಂತಹ ಕಲೆಯಲ್ಲಿ ನಾಟಕ ಶಾಸ್ತ್ರವೂ ಒಂದು ಎಂದು ಬಿ.ವಿ.ರಾಜಾರಾಂ ಹೇಳಿದರು.
ಭರತನಾಟ್ಯ ಶಾಸ್ತ್ರ ಭಾರತೀಯ ಸಂಸ್ಕೃತಿಯಲ್ಲಿ ಮಹತ್ತರ ಸ್ಥಾನ ಪಡೆಯುವ ಮೂಲಕ ದಶರೂಪಕವಾಗಿ ಮೈದೆಳೆದಿದೆ. ನವರಸಗಳನ್ನು ಒಂಭತ್ತು ರೀತಿಯಾದ ಅಭಿವ್ಯಕ್ತಿಯಲ್ಲಿ ಸರಿದೂಗಿಸಬಹುದು. ಖುಷಿ, ಸಂತೋಷ, ರೌದ್ರತೆ, ದುಃಖ ಇವೆಲ್ಲವನ್ನೂ ದಿನನಿತ್ಯದ ಬದುಕಿನಲ್ಲಿ ಕಾಣುತ್ತೇವೆ. ಆದರೆ, ಅವೆಲ್ಲವೂ ನಮ್ಮ ಜೀವನದ ದಿನನಿತ್ಯದ ಪ್ರಕ್ರಿಯೆಗಳಾಗಿವೆ. ಆ ಕ್ರಿಯೆಗಳನ್ನು ನಾವು ರಸ ಎಂದು ಪರಿಗಣಿಸುವುದಿಲ್ಲ. ಆ ಕ್ರಿಯೆಯನ್ನು ರಂಗದ ಮೇಲೆ ಪ್ರಯೋಗ ಮಾಡುವಾಗ ‘ಕಲಾತ್ಮಕ’ ರೂಪ ಪಡೆದುಕೊಳ್ಳುತ್ತದೆ ಎನ್ನುತ್ತಾರೆ ಬಿ.ವಿ.ರಾಜಾರಾಂ.
ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್.ಎನ್. ಸುರೇಶ್ ಉಪಸ್ಥಿತರಿದ್ದರು.
‘ಬೊಂಬೆ ವಿಭಾವʼ ಬೊಂಬೆ ರಂಗಪ್ರಸ್ತುತಿ ಬೆಂಗಳೂರಿನ ನಾಟ್ಯೇಶ್ವರ ನೃತ್ಯ ಶಾಲೆಯ ಕಲಾಯೋಗಿ ಕೆ.ಪಿ. ಸತೀಶ್ ಬಾಬು ಅವರ ನಿರ್ದೇಶನದಲ್ಲಿ ಮೂಡಿಬಂದಿತು.
ಕಾರ್ಯಕ್ರಮವನ್ನು ಫೇಸ್ ಬುಕ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...
ಕಾರ್ಯಕ್ರಮವನ್ನು ಯುಟ್ಯೂಬ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...
ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2021ನೇ ಸಾಲಿನ "ಮಕ್ಕಳ ಚಂದಿರ" ಕಾದಂಬರಿ ಪುರಸ್ಕಾರಕ್ಕೆ "ಮಕ್ಕಳು ಓದಿ...
ಮಂಡ್ಯದ ಜಿಲ್ಲಾ ಯುವ ಬರಹಗಾರರ ಬಳಗ, ಪರಿಚಯ ಪ್ರಕಾಶನ ಹಾಗೂ ಭೂಮಿಬೆಳಗು ಸಾಂಸ್ಕೃತಿಕ ಸಂಘದಿಂದ ನಡೆದ 'ಮಹಿಳಾ ಕವಿಗೋ...
ಕಮಲಾ ಹಂಪನಾ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಜೈನ ಅಸೋಸಿಯೇಷನ್ ಬೆಂಗಳೂರು ಅವರ ಆಶ್ರಯದಲ್ಲಿ ʻಅಕ್ಕರಗೊಟ್ಟಿಯ ಅ...
©2023 Book Brahma Private Limited.