ಡಾ. ಸಿದ್ದಣ್ಣ ಉತ್ನಾಳ ಪ್ರಶಸ್ತಿಗೆ ಕೃತಿಗಳ ಆಹ್ವಾನ

Date: 15-10-2021

Location: ವಿಜಯಪುರ


ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು, ಸಾಹಿತ್ಯಾಸಕ್ತರನ್ನು ಕ್ರಿಯಾಶೀಲರನ್ನಾಗಿಸುತ್ತಲೇ ಇರುವ ವಿಜಯಪುರದ ಕರ್ನಾಟಕ ಪುಸ್ತಕ ಪರಿಷತ್ತು ಈ ಬಾರಿ ಸಾಹಿತ್ಯಾಸಕ್ತರಿಗಾಗಿ ವಿಭಿನ್ನವಾದ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಸಾಹಿತಿ, ಅನುಪಮ ಪ್ರಕಾಶನದ ಸ್ಥಾಪಕರಾದ ಡಾ. ಸಿದ್ದಣ್ಣ ಉತ್ನಾಳ್ ಹೆಸರಿನಲ್ಲಿ ಪುಸ್ತಕ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿದೆ.

ಸಾಹಿತ್ಯದ ಮೂರು ವಿಭಾಗದಲ್ಲಿ ಪುಸ್ತಕ ಪ್ರಶಸ್ತಿಗೆ ಕರೆ ನೀಡಿದ್ದು, ಪ್ರತಿ ವಿಭಾಗಕ್ಕೆ 10 ಸಾವಿರ ರೂಪಾಯಿ ಬಹುಮಾನವನ್ನೂ ವಿಜಯಪುರದ ಕರ್ನಾಟಕ ಪುಸ್ತಕ ಪರಿಷತ್ತು ನಿಗದಿಪಡಿಸಿದೆ. 2020ರಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರದ ಪುಸ್ತಕವನ್ನಾದರೂ (3 ಪ್ರತಿಗಳು) ಪುಸ್ತಕ ಪ್ರಶಸ್ತಿಗೆ ಕಳುಹಿಸಿಕೊಡಬಹುದು. ಆದರೆ ಕೃತಿಗಳನ್ನು ಕಳುಹಿಸುವ ಮುನ್ನ ಗಮನಿಸಬೇಕಿರುವ ಅಂಶವೆಂದರೆ ಸಂಪಾದಿತ ಕೃತಿ, ಪಿಎಚ್ ಡಿ ಪ್ರಬಂಧ ಇಲ್ಲವೇ ಸ್ಮರಣ ಸಂಚಿಕೆಗಳನ್ನು ಈ ಪ್ರಶಸ್ತಿಗಾಗಿ ಕಳುಹಿಸುವಂತಿಲ್ಲ.

ಕೃತಿಗಳು ತಲುಪಲು ಕೊನೆಯ ದಿನಾಂಕ; ಅಕ್ಟೋಬರ್ 25, 2021

ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ: ಶಂಕರ್ ಬೈಚಬಾಳ, ‘ವಚನ’, ರಾಜಾಜಿನಗರ, ಕೆ ಇ ಬಿ ಹಿಂದುಗಡೆ, ವಿಜಯಪುರ - 586109

ಮೊಬೈಲ್ - 9448751980, 9740560993

MORE NEWS

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...

ಕವಿಗಳು, ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ; ಎಂ. ಬಸವಣ್ಣ

25-04-2024 ಬೆಂಗಳೂರು

ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...