ಈ ಹೊತ್ತಿಗೆಯಲ್ಲಿ ಎಲ್. ಸಿ ಸುಮಿತ್ರಾ, ಅನುಸೂಯಾದೇವಿ ಅವರ ಕತಾ ಚರ್ಚೆ

Date: 27-09-2020

Location: ಈ ಹೊತ್ತಿಗೆ ಫೇಸ್‌ಬುಕ್‌ ಲೈವ್


ಈ ಹೊತ್ತಿಗೆ ಆಯೋಜಿಸಿದ್ದ ‘ಕತೆಗಳ ಚರ್ಚಾ ಸರಣಿ’ಯಲ್ಲಿ ಕತೆಗಾರ್ತಿ ಡಾ. ಎಲ್.ಸಿ. ಸುಮಿತ್ರಾ ಅವರ `ಕಣಿವೆನಮನೆ.ಕಾಮ್’, ಅನುಸೂಯಾದೇವಿ ಅವರ `ದೇವರು ಮತ್ತು ದೆವ್ವ’ ಕತೆಗಳನ್ನು ಈ ಹೊತ್ತಿಗೆ ಫೇಸ್‌ಬುಕ್‌ ಲೈವ್‌ನಲ್ಲಿ ಜರುಗಿತು. ಡಾ. ಎಲ್. ಸಿ ಸುಮಿತ್ರಾ ಅವರ `ಕಣಿವೆನಮನೆ.ಕಾಮ್’ ಕತೆಯಲ್ಲಿ ಖಾಸಗಿ ಸಂಸ್ಥೆಗಳು ಮಧ್ಯಮ ವರ್ಗದವರನ್ನು ದುಡಿಸಿಕೊಳ್ಳುವ, ಎರಡು ತಲೆಮಾರುಗಳ ಆಂತರಿಕ ಸಮಸ್ಯೆಗಳ ಕುರಿತು ಹಾಗೂ ಅನುಸೂಯಾದೇವಿ ಅವರ `ದೇವರು ಮತ್ತು ದೆವ್ವ’ ಕತೆಯಲ್ಲಿ ಕುಟುಂಬ ವ್ಯವಸ್ಥೆಯೊಳಗಿರುವ ಮನಸ್ಸಿನ ತಣ್ಣನೆಯ ಕ್ರೌರ್ಯವನ್ನು ಎಳೆ ಎಳೆಯಾಗಿ ಸಾಹಿತ್ಯಾಸಕ್ತರು ಚರ್ಚಿಸಿದರು.

ಚರ್ಚೆಯಲ್ಲಿ ಬರಹಗಾರರಾದ ನಂದಿನಿ, ಇಂದಿರಾ ಶರಣ್, ಶ್ರೀವಲ್ಲಿ ಶೇಷಾದ್ರಿ, ವಿಭಾ ಪುರೋಹಿತ್ ಹಾಗೂ ಸಂಧ್ಯಾ ಮಂಜು ಅವರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದ ಆಯೋಜಕರು ಹಾಗೂ ಈ ಹೊತ್ತಿಗೆ ಸಂಸ್ಥಾಪಕರು ಲೇಖಕಿ, ಕಲಾವಿದೆ ಜಯಲಕ್ಷ್ಮಿ ಪಾಟೀಲ್.

ಕಾರ್ಯಕ್ರಮವನ್ನು ಲೇಖಕಿ ಛಾಯಾ ಭಗವತಿ ಅವರು ಸೊಗಸಾಗಿ ನಿರ್ವಹಿಸಿದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...