ಎಡ ಬಲದಲ್ಲಿ ಪುಸ್ತಕೋದ್ಯಮ ಇಬ್ಭಾಗವಾಗಬಾರದು

Date: 05-02-2020

Location: ಕಲಬುರಗಿ ( ಚೆನ್ನಣ್ಣ ವಾಲೀಕಾರ ವೇದಿಕೆ)


ಪುಸ್ತಕೋದ್ಯಮ ಇಂದು ಡಿಜಲೀಕರಣದತ್ತ ಸಾಗುತ್ತಿದ್ದು ಅದಕ್ಕನುಸಾರವಾಗಿ ಪುಸ್ತಕ ಮುದ್ರಣ ಸಾಗಬೇಕಿದೆ ಮತ್ತು ಪ್ರಕಾಶಕರಿಗೆ ತರಬೇತಿ ನೀಡುವ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು  ಚೆನ್ನಣ್ಣ ವಾಲೀಕಾರ ವೇದಿಕೆಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ‘ಪುಸ್ತಕ ಲೋಕ’ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಒಮ್ಮತವಾಗಿ ಅಭಿಪ್ರಾಯಿಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸತೀಶ್ ಕುಮಾರ್‌ ಹೊಸಮನಿ “ನಗರದ ಆಸ್ಪತ್ರೆಗಳಲ್ಲಿ ಗ್ರಂಥಾಲಯಗಳನ್ನು ತೆರೆದು ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ. ಇ - ಬುಕ್ಸ್‌ಅನ್ನು ಓದನ್ನು ವಿಸ್ತರಿಸುತ್ತಿದ್ದು ನಾವುಗಳು ಖರೀದಿ ಮಾಡಿ ಓದಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಬ್ಯಾಂಕ್ ಠೇವಣಿ ಬದಲು ಒಳ್ಳೆಯ ಪುಸ್ತಕಗಳಿಂದ ತುಂಬಿದ ಮನೆಯನ್ನು ನೀಡಬೇಕು” ಎಂದು ಓದಿನ ಮಹತ್ವವನ್ನು ವಿವರಿಸಿದರು. 

ಇಂದು ವರ್ಷಕ್ಕೆ ಸುಮಾರು ಏಳು ಸಾವಿರದಷ್ಟು ಪುಸ್ತಕಗಳು ಬಿಡುಗಡೆಯಾಗುತ್ತಿದ್ದರು ಪುಸ್ತಕೋದ್ಯಮದಲ್ಲಿ ಆಶಾದಾಯಕ ಬೆಳವಣಿಗೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ ಸಾವಿರಕ್ಕು ಅಧಿಕ ಪ್ರಕಾಶಕರಿದ್ದು ವೃತ್ತಿನಿರತರು ನೂರರ ಗಡಿಯನ್ನು ದಾಟುವುದಿಲ್ಲ. ಇಂತಹ ಪ್ರಕಾಶಕರನ್ನು ವ್ಯವಸ್ಥಿತವಾಗಿ ಒಗ್ಗೂಡಿಸಬೇಕಿದೆ. ವಿಶ್ವದಾದ್ಯಂತ ಕನ್ನಡ ಓದುಗರಿಗೆ ಪುಸ್ತಕಗಳನ್ನು ತಲುಪಿಸುವ ಕೆಲಸವನ್ನು ಅಮೇಜಾನ್, ಗೂಗಲ್, ಫ್ಲಿಪ್‌ ಕಾರ್ಟ್‌ಗಳು ಮಾತುತ್ತಿದ್ದು ಆಶಾದಾಯಕ ಸಂಗತಿ. ಆದರೆ ಇಂಟರ್‌ನೆಟ್‌ ಮತ್ತು ಮೊಬೈಲ್‌ಗಳ ಹಾವಳಿಯಿಂದ ಇಪ್ಪತ್ನಾಲ್ಕು ಗಂಟೆಗಳ ಮನೋರಂಜನೆ ನೀಡುತ್ತಿದ್ದ ಪುಸ್ತಕ ತನ್ನ ಓದುಗರನ್ನು ಕಳೆದುಕೊಂಡಿದೆ. ಕಿಂಡಲ್‌, ಐ ಪ್ಯಾಡ್‌, ಕೇಳು ಓದುಗಳು ಓದಿನ ಸ್ವರೂಪವನ್ನು ಬದಲಿಸಿ ಪ್ರಕಾಶಕರನ್ನು ಆತಂಕಕ್ಕೆ ದೂಡಿದ್ದು ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಪುಸ್ತಕೋದ್ಯಮದ ಬಗ್ಗೆ ಕಳವಳ ವ್ಯಕ್ತಪಡಿಸಿದರು. 

 

“ಕನ್ನಡ ಸಂಸ್ಕೃತಿ ಇಲಾಖೆಯ ಪುಸ್ತಕಗಳು ಆಯಾ ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟದಲ್ಲಿ ದೊರಕುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳು ಸಹ ಜಿಲ್ಲಾ-ತಾಲ್ಲೂಕು ಮಟ್ಟದಲ್ಲಿ ದೊರಕುವಂತಾಗಬೇಕು. ಇದು ಎಲ್ಲಾ ಕನ್ನಡಿಗರ ಪರವಾಗಿ ನನ್ನ ಹಕ್ಕೊತ್ತಾಯ” ಎಂದು ಲೇಖಕಿ ಗಾಯತ್ರಿ ನಾವಡ ಸರ್ಕಾರಕ್ಕೆ ಮನವಿ ಮಾಡಿದರು. 

ಇಂದು “ಪುಸ್ತಕದ ವಿಚಾರ ಬಂದಾಗ ಬೆಲೆ ಕೈಗೆಟುಕುವಂತಿರಬೇಕು. ಓದುಗನು ಸಹ ಕೊಂಡು ಓದಲು ಜಿಪುಣತನ ಸಾಧಿಸಬಾರದು. ಎಡ ಬಲದದಲ್ಲಿ ಪುಸ್ತಕ ಲೋಕ ಇಬ್ಭಾಗತ್ತಿರುವುದು ದುರಂತ” ಎಂದು ಅಭಿಪ್ರಾಯ ಪಟ್ಟರು. 

“ಭಾರತೀಯ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುವ ವಿಚಾರಗಳು, ಅಭಿಪ್ರಾಯಗಳು ಇಂದು ಏಕಮುಖಿಯಾಗಿವೆ. ಇದು ದೇಶ, ಸಮಾಜದ ಮತ್ತು ಸಮುದಾಯಗಳ ವಿಘಟನೆಗೆ ಹೆಚ್ಚು ಒತ್ತಿರುವ ವಿಚಾರಗಳನ್ನು ಹರಡುತ್ತಿರುವುದು ಓದುಗರು, ಯುವಜನರಿಗೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸೋಷಿಯಲ್ ಮೀಡಿಯಾ ಪ್ರಪಂಚದಲ್ಲಿ ಲೇಖಕರ-ಓದುಗರ ಅಪೇಕ್ಷೆ ಇಂದು ಎಡ ಬಲದತ್ತ ಸಾಗಿರುವುದು ಸಾಕಷ್ಟು ಆತಂಕ ಹುಟ್ಟಿಸುತ್ತಿದೆ. ಸಿದ್ಧಾಂತ ಕೇಂದ್ರಿಕ ವ್ಯಕ್ತಿ ಕೇಂದ್ರಿತ ರಾಜಕೀಯ ಕೇಂದ್ರಿತ ವಿಷಯಗಳು ಮುನ್ನೆಲೆಗೆ ಬಂದು ರಾಷ್ಟ್ರೀಯ ವಿಚಾರಗಳನ್ನು ಹಿನ್ನೆಲೆಗೆ ನೂಕಲಾಗಿದೆ” ಎಂದು ಬಸವರಾಜ ಡೋಣೂರ ಓದುಗರ ವಿಚಾರಗಳ ಕುರಿತು ವಿಸ್ತಾರವಾಗಿ ಮಾತನಾಡಿದರು. 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...