ಈ ಹೊತ್ತಿಗೆ ‘ನವರಾತ್ರಿ ಕಾವ್ಯೋತ್ಸವ’

Date: 16-10-2020

Location: ಈ ಹೊತ್ತಿಗೆ ಫೇಸ್‌ಬುಕ್‌ ಪೇಜ್‌


ಕತೆ, ಕೃತಿಗಳ ಓದು, ಚರ್ಚೆ, ಸಂವಾದ.... ಹೀಗೆ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ‘ಈ ಹೊತ್ತಿಗೆ’ ಬಳಗವೂ ಈ ಬಾರಿ ಆನ್‌ಲೈನ್‌ನಲ್ಲಿ ನವರಾತ್ರಿ ಕಾವ್ಯೋತ್ಸವವನ್ನು ಆಯೋಜಿಸಿದೆ. ಕರ್ನಾಟಕದ ಒಂಬತ್ತು ಜಿಲ್ಲೆಗಳು, ಮೂರು ಹೊರರಾಜ್ಯಗಳು ಹಾಗೂ ನಾಲ್ಕು ದೇಶಗಳ ಅನಿವಾಸಿ ಕನ್ನಡಿಗರು ಹಾಗೂ ಸುಮಾರು 110ಕ್ಕೂ ಹೆಚ್ಚು ಕವಿಗಳು, 36ಕ್ಕೂ ಹೆಚ್ಚು ಹಾಡುಗಾರರು ಈ ಕಾವ್ಯಗೋಷ್ಠಿಯಲ್ಲಿ ಕವಿತೆ ವಾಚನ ಮಾಡಲಿದ್ದಾರೆ.

ಅಕ್ಟೋಬರ್‌ 17 ರಿಂದ 25 ರವರೆಗೆ ಮಧ್ಯಾಹ್ನ ಹಾಗೂ ಸಂಜೆ ಕವಿಗೋಷ್ಠಿಗಳು ನಡೆಯಲಿದ್ದು, ಅಕ್ಟೋಬರ್‌ 17ರಂದು ಕಲಬುರ್ಗಿ ಜಿಲ್ಲೆ, ಅ.‌ 18ರಂದು ವಿಜಯಪುರ ಜಿಲ್ಲೆ, ಅ.‌ 19ರಂದು ಮೈಸೂರು ಜಿಲ್ಲೆ, ಅ.‌ 20ರಂದು ಹಾವೇರಿ ಜಿಲ್ಲೆ, ಅ.‌ 21ರಂದು ದಕ್ಷಿಣ ಕನ್ನಡ ಜಿಲ್ಲೆ, ಅ.‌ 22ರಂದು ಚಿತ್ರದುರ್ಗ ಜಿಲ್ಲೆ, ಅ.‌ 23ರಂದು ಬೆಳಗಾವಿ ಜಿಲ್ಲೆ, ಅ.‌ 24 ರಂದು ಬಳ್ಳಾರಿ ಜಿಲ್ಲೆ ಹಾಗೂ ಅ.‌ 25 ರಂದು ಮಂಡ್ಯ ಜಿಲ್ಲೆಯ ತಂಡ ಮಧ್ಯಾಹ್ನ 11 ರಿಂದ 12ರವರೆಗೆ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಅ.‌ 17ರಂದು ಅಮೇರಿಕ ಹಾಗೂ ಅ.‌ 18ರಂದು ಯೂರೋಪ್‌ ತಂಡದ ಕವಿಗೋಷ್ಠಿಗಳು ರಾತ್ರಿ 9ಗಂಟೆಗೆ ಹಾಗೂ ಅ/‌ 19 ರಂದು ದೆಹಲಿ, ಅ.‌ 20 ರಂದು ಮಹಾರಾಷ್ಟ್ರ, ಅ.‌ 21 ರಂದು ತೆಲಂಗಾಣ-ಆಂಧ್ರಪ್ರದೇಶ ಮತ್ತು ಅ.‌ 22 ರಂದು ಯುವಕವಿ ತಂಡ ಸಂಜೆ 6 ಗಂಟೆಗೆ ಕವಿತಾ ವಾಚನ, ಅ. 23 ರಂದು ಕುವೈತ್‌ ತಂಡ ಸಂಜೆ 7 ಗಂಟೆಗೆ ಮತ್ತು ಅ.‌ 24 ರಂದು ಆಸ್ಟ್ರೇಲಿಯಾ ತಂಡ ಸಂಜೆ 5 ಗಂಟೆಗೆ ಕವಿತೆ ವಾಚನ ಮಾಡಲಿದೆ.

ಹತ್ತು ದಿನಗಳ ಕಾಲ ನಡೆಯಲಿರುವ ಈ ಕವಿಗೋಷ್ಠಿಯನ್ನುನೀವು ಆನ್‌ಲೈನ್‌ ಮೂಲಕ ವೀಕ್ಷಿಸಬಹುದು. ಫೇಸ್‌ಬುಕ್‌ನಲ್ಲಿ ಲೈವ್‌ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಈ ಹೊತ್ತಿಗೆ ಯೂಟ್ಯೂಬ್‌ನಲ್ಲಿ ಲೈವ್‌ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: ಈ ಹೊತ್ತಿಗೆ

MORE NEWS

'ವ್ಯವಸ್ಥೆಯೊಳಗಿನ ಭ್ರಷ್ಟಾಚಾರ ಹೊರ...

31-10-2020 ಕುಂದಾಪುರ

ಜನರ ಕೈಗೆ ಅಧಿಕಾರ ಕೊಡಬೇಕು ಎನ್ನುವ ನಿಲುವು ಇದ್ದರೂ ಕೂಡಾ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗದೇ ಇರುವುದನ್ನು ಕಾಣುತ್...

ಕಲಾವಿದರ ಸಾಮಾಜಿಕ ಹೊಣೆಗಾರಿಕೆಯ ಪ್...

31-10-2020 ಬೆಂಗಳೂರು

"ಬೀದಿ ನಾಟಕಕಾರ ಸಫ್ಧರ್ ಹಾಶ್ಮಿಯ ಹತ್ಯೆ ನಡೆಯಿತು. ಆದರೆ, ಕರಾಳ ವ್ಯವಸ್ಥೆಯ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದ...

ಕರ್ನಾಟಕ ರಾಜ್ಯೋತ್ಸವ: ರಿಯಾಯಿತಿ ದ...

31-10-2020 ಬೆಂಗಳೂರು

ಕರ್ನಾಟಕ ರಾಜ್ಯೋತ್ಸವದ ಪ್ರಯಕ್ತ ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಯ ಕನ್ನಡ ವಿವಿ ಪ್ರಸಾರಂಗ, ನವಕರ್ನಾಟಕ ಪ್ರಕಾಶನ, ಛ...

Comments