ಏಳು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಚಲನಚಿತ್ರ ನಿರ್ದೇಶಕಿ, ರಂಗಕರ್ಮಿ ಸುಮಿತ್ರಾ ಭಾವೆ ಇನ್ನಿಲ್ಲ

Date: 19-04-2021

Location: ಬೆಂಗಳೂರು


ಮರಾಠಿ ಚಲನಚಿತ್ರೋದ್ಯಮ ಮಾತ್ರವಲ್ಲ ಅಂತಾರಾಷ್ಟ್ರೀಯ ಚಲನಚಿತ್ರ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಿರ್ದೇಶಕಿ ಸುಮಿತ್ರಾ ಭಾವೆ ಅವರು ಸೋಮವಾರ ಬೆಳಗ್ಗೆ ತಮ್ಮ ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಸತತ ಏಳು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಮೂಲತಃ ಪುಣೆಯವರು. 1985ರಲ್ಲಿ ‘ಬಾಯಿ’ ಕಿರುಚಿತ್ರದ ಮೂಲಕ ಚಲನಚಿತ್ರೋದ್ಯಮದಲ್ಲಿ ತಮ್ಮ ಪಯಣ ಆರಂಭಿಸಿದ ಸುಮಿತ್ರಾ ಭಾವೆ, ಮರುವರ್ಷವೇ (1986) ಆ ಚಲನಚಿತ್ರವು ರಾಷ್ಟ್ರಪ್ರಶಸ್ತಿ ಪಡೆದು ಗಮನ ಸೆಳೆಯಿತು. ನಂತರ, 1988ರಲ್ಲಿ ‘ಪಾಣಿ’ ಕಿರುಚಿತ್ರವೂ ರಾಷ್ಟ್ರಪ್ರಶಸ್ತಿಗೆ ಪಾತ್ರವಾಯಿತು. ನಿರ್ದೇಶಕ ಸುನೀಲ್ ಸುಕ್ತಾಂಕರ ಅವರೊಂದಿಗೆ ನಿರ್ದೇಶಿಸಿದ ‘ದೋಘಿ’ ಮರಾಠಿ ಚಲನಚಿತ್ರವು ಮಹಾರಾಷ್ಟ್ರ ಸರ್ಕಾರದಿಂದ ಸಿನಿಮಾ (1995) ಪ್ರಶಸ್ತಿ ಹಾಗೂ 1996ರಲ್ಲಿ ಮತ್ತೊಂದು ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಇದೇ ಜೋಡಿಯು 2002ರಲ್ಲಿ ನಿರ್ದೇಶಿಸಿದ್ದ ‘ವಾಸ್ತುಪುರುಷ್’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿತು. ‘ದಾಹವಿ ಫಾ’ ಎಂಬ ಕಿರುಚಿತ್ರಕ್ಕೆ ಮಹಾರಾಷ್ಟ್ರ ಸರ್ಕಾರ (2003) ‘ಉತ್ತಮ ನಿರ್ದೇಶನದ ಪ್ರಶಸ್ತಿ ಮತ್ತು ‘ದೇವರಾಯಿ ಚಲನಚಿತ್ರಕ್ಕೂ (2004ರಲ್ಲಿ) ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಇವರ ನಿರ್ದೇಶನದ ‘ಕಾಸವ್’ ಚಲನಚಿತ್ರಕ್ಕೆ 2017ರಲ್ಲಿ ರಾಷ್ಟ್ರಪ್ರಶಸ್ತಿ ಹಾಗೂ ‘ಅಸ್ತು’ ಚಲನಚಿತ್ರಕ್ಕೆ (2013) ರಾಷ್ಟ್ರಪ್ರಶಸ್ತಿ ಬಂದಿತ್ತು.

ಸುಮಿತ್ರಾ ಭಾವೆ ಅವರು ಸ್ನಾತಕೋತ್ತರ (ರಾಜ್ಯಶಾಸ್ತ್ರ) ಪದವೀಧರೆ. ಮುಂಬೈ ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆಯಿಂದ ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರದಲ್ಲಿ ಮತ್ತೊಂದು ಪದವಿ ಪಡೆದಿದ್ದರು. ಪುಣೆಯ ಕರ್ವೆ ಸಮಾಜ ವಿಜ್ಞಾನಗಳ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದರು. ಕೆಲ ಕಾಲ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದರು. ಆಕಾಶವಾಣಿಯಲ್ಲಿ ಸುದ್ದಿವಾಚಕಿಯಾಗಿ ಕೆಲಸ ನಿರ್ವಹಿಸಿದ್ದರು.

MORE NEWS

ಕವಿಗಳು, ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ; ಎಂ. ಬಸವಣ್ಣ

25-04-2024 ಬೆಂಗಳೂರು

ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...