ಫೆ.19 ರಿಂದ ಜೈಪುರ ಸಾಹಿತ್ಯ ಸಮ್ಮೇಳನ ಆರಂಭ

Date: 20-01-2021

Location: ಬೆಂಗಳೂರು


ಬಹು ನಿರೀಕ್ಷಿತ ಹಾಗೂ ವಿಶ್ವ ಖ್ಯಾತಿಯ ಜೈಪುರ ಸಾಹಿತ್ಯ ಸಮ್ಮೇಳನವು 2021 ರ ಫೆಬ್ರವರಿಯಲ್ಲಿ ಜರುಗಲಿದೆ. ಆದರೆ, ವಿಶೇಷವೆಂದರೆ, ಈ ಸಮ್ಮೇಳನವು ಆನ್ ಲೈನ್ ನಲ್ಲಿ ಜರುಗುತ್ತಿದ್ದು, ಕೊರೊನಾ ಸನ್ನಿವೇಶದ ಮಧ್ಯೆಯೂ ಈ ಸಮ್ಮೇಳನದ ಸುಗಮ ಪ್ರಸಾರಕ್ಕಾಗಿ ಸಾಧ್ಯವಿದ್ದ ಎಲ್ಲ ಸೌಲಭ್ಯವನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

2021ರ ಫೆಬ್ರವರಿ 19 ರಿಂದ 21 ಹಾಗೂ ಫೆ.26 ರಿಂದ ಫೆ. 28 ರವರೆಗೆ ಹೀಗೆ ಎರಡು ನಿಗದಿತ ಅವಧಿಯಲ್ಲಿ ಸಮ್ಮೇಳನ ಆಯೋಜಿಸಿದ್ದು, ಮೊದಲ ಪಟ್ಟಿಯಲ್ಲಿ ರಾಮಚಂದ್ರ ಗುಹಾ, ಶಶಿ ತರೂರು ಸೇರಿದಂತೆ ಸುಮಾರು 100 ರಷ್ಟು ಕಲಾವಿದರು, ಚಿಂತಕರು, ಬರಹಗಾರರು ಪಾಲ್ಗೊಳ್ಳಲಿದ್ದಾರೆ. 

ಸಮ್ಮೇಳನದಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆ, ರಾಜಕೀಯ ಹಾಗೂ ಇತಿಹಾಸ, ಪರಿಸರ ಹಾಗೂ ಹವಾಮಾನ ಬದಲಾವಣೆ, ಮನೋ ಆರೋಗ್ಯ, ಆರ್ಥಿಕತೆ ಹಾಗೂ ವ್ಯವಹಾರ, ಅನುವಾದ, ಕಾವ್ಯ ಮತ್ತು ಸಂಗೀತ, ಆಹಾರ ಹಾಗೂ ಸಾಹಿತ್ಯ, ಭೂ-ರಾಜಕೀಯ, ವಿಜ್ಞಾನ ಹಾಗೂ ಔಷಧಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ, ನೀರು ಹಾಗೂ ಸ್ಥಿರತೆ, ಪ್ರವಾಸ, ಸಿನಿಮಾ ಇತರೆ ವಿಷಯಗಳು ಚರ್ಚಿತವಾಗಲಿವೆ. 

ಪ್ರತಿ ಬಾರಿ ಜನವರಿಯಲ್ಲಿ ಜರುಗುತ್ತಿದ್ದ ‘ಜೈಪುರ ಸಾಹಿತ್ಯ ಸಮ್ಮೇಳನ’ ವು ಕೊರೊನಾ ಸನ್ನಿವೇಶದಿಂದಾಗಿ  ಫೆಬ್ರವರಿಯಲ್ಲಿ ನಡೆಯುತ್ತಿದೆ. ಕೊರೊನಾ ಕರಾಳ ಸನ್ನಿವೇಶದ ಪ್ರಭಾವದಿಂದ ಭಾರತ ಹಾಗೂ ವಿಶ್ವದ ಬೇರೆ ಬೇರೆ ಕಡೆಯ ವಿನೂತನ ವಸ್ತು ವೈವಿಧ್ಯತೆಯ ಸಾಹಿತ್ಯ ನಿರ್ಮಾಣವಾಗಿದ್ದು, ಆ ಕುರಿತು ನಡೆಯುವ ಚರ್ಚೆಯು ಸಮ್ಮೇಳನಕ್ಕೆ ಹೊಸ ಹುರುಪು ತರಲಿದೆ ಎಂದು ಆಶಿಸಲಾಗಿದೆ.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...