ಜಿ. ಬಿ. ಹೊಂಬಳ ಅಮೃತ ಮಹೋತ್ಸವ

Date: 10-11-2019

Location: ನಾಡೋಜ ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ


“ಜಿ. ಬಿ. ಹೊಂಬಳ - 75”, ನಿವೃತ್ತ ಜಿಲ್ಲಾ ಗ್ರಂಥಾಲಯಾಧಿಕಾರಿ ಅವರ “ಅಮೃತ ಮಹೋತ್ಸವ”ವಿದ್ದು, ಗಣೇಶ ನಾಡೋರ ಅವರ ಮಕ್ಕಳ ಕಾದಂಬರಿ 'ಪುಟ್ಟ ಯಜಮಾನ' ಕೃತಿಗೆ ’ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ’ 10-11-2019, ರವಿವಾರ, ಬೆಳಗ್ಗೆ 10:30 ಕ್ಕೆ ನಾಡೋಜ ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡದಲ್ಲಿ ನಡೆಯಲಿದೆ.

ಶ್ರೀ ಗುರುಸಿದ್ದಯ್ಯ ಬಸಯ್ಯ ಹೊಂಬಳ ಅವರು 1945 ನವಂಬರ 10 ರಂದು ಹುಬ್ಬಳ್ಳಿ ತಾಲೂಕು ಅಂಗಳ ಹಳ್ಳಿಯಲ್ಲಿ ಜನಿಸಿದರು. ಅವರು ಜಿಲ್ಲಾ ಗ್ರಂಥಾಲಯಾಧಿಕಾರಿಯಾಗಿ 25 ವರ್ಷಗಳ ಸಾರ್ಥಕ ಸೇವೆಸಲ್ಲಿಸಿ, ಒಬ್ಬ ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದವರು. ಇವರು 2008ರಲ್ಲಿ ಕರ್ನಾಟಕ ಸರಕಾರದ 'ಗ್ರಂಥಾಲಯ ಜೀವಮಾನ ಪ್ರಶಸ್ತಿ'ಗೆ ಭಾಜನರಾದವರು. ಆಗಸ್ಟ್ 12 ರಂದು ಗ್ರಂಥಪಾಲಕರ ದಿನಾಚರಣೆ. 2010ರಿಂದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅದೇ ದಿನ ಲಿಂಗೈಕ್ಯರಾದ ತಾಯಿ ಪಾರ್ವತಮ್ಮ ಅವರ ಹೆಸರಿನಲ್ಲಿ ದತ್ತಿ ಇರಿಸಿ ನಿರಂತರ ಕಾರ್ಯಕ್ರಮ ನಡೆಸುತ್ತಿರುವರು. ನವಂಬರ್ 10 ಹೊಂಬಳ ಅವರ ಹುಟ್ಟಿದ ದಿನವನ್ನು ಮಕ್ಕಳ ಪ್ರೀತಿಯಲ್ಲಿ ಆಚರಿಸಿಕೊಳ್ಳುತ್ತಿರುವರು, ಆ ದಿನ ಮಕ್ಕಳ ಸಾಹಿತ್ಯದ ಒಂದು ಕೃತಿ ಬಿಡುಗಡೆ, ಕೃತಿಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಿರುವುದು ಅವರ ವ್ಯಕ್ತಿತ್ವದ ವಿಶೇಷ ಪ್ರತಿಷ್ಠಿತ ಸಂಘ ಸಂಸ್ಥೆಗಳ ಆಜೀವ ಸದಸ್ಯತ್ವ, ಸಾಹಿತ್ಯಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡವರು.

ಶ್ರೀ ಜಿ.ಬಿ. ಹೊಂಬಳ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಯಲ್ಲಾಪುರದ ಶ್ರೀ ಗಣೇಶ ನಾಡೋರ ಸುಮಾರು ಮೂವತ್ತು ವರ್ಷಗಳಿಂದ ನಿರಂತರವಾಗಿ ಮಕ್ಕಳಿಗಾಗಿ ಪ್ರೀತಿಯಿಂದ ಬರೆಯುತ್ತಿರುವ ಕ್ರೀಯಾಶೀಲ ಲೇಖಕರು. “ನೆಗೆತ', 'ಕರಿಮುಖಿ', 'ಪೂರ್ವಿ', 'ಸಾಯಿಲಕ್ಷ್ಮಿ ಮನೆಗೆ ಸಾಂತಕ್ಲಾಸ್ ಬಂದ' ಮುಂತಾಗಿ ಇಲ್ಲಿಯವರೆಗೆ 18 ಕೃತಿಗಳನ್ನು ಪ್ರಕಟಿಸಿದ್ದಾರೆ. ದಟ್ಟವಾದ ಸಮಕಾಲೀನ ಪ್ರಜ್ಞೆ ಮಕ್ಕಳಿಗಾಗಿ ಗಂಭೀರ ಓದಿನ ಕೃತಿಗಳು ಇವರ ಗಮನಾರ್ಹ ವಿಶೇಷಗಳು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ಕನ್ನಡಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಬಿ. ಎಂ. ಶ್ರೀ ಪ್ರತಿಷ್ಠಾನ ಪ್ರಶಸ್ತಿ ಮುಂತಾಗಿ ಹಲವಾರು ಗೌರವಗಳು ಅವರಿಗೆ ಬಂದಿವೆ. ಸದ್ಯ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಗ್ಯ್ರಾಂಟಿಯಾಗಿ ಯಲ್ಲಾಪುರ ತಾಲೂಕಿನ ಆನಗೋಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ’ಹಕ್ಕಿಗಳು ಹಾರುತಿದೆ ನೋಡಿದಿರಾ?!' ಪ್ರಾಜೆಕ್ಟ್ ನಡೆಸುತ್ತಿದ್ದಾರೆ.

 

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...