Date: 22-06-2022
Location: ಬೆಂಗಳೂರು
ರಾಜ್ಯಮಟ್ಟದಲ್ಲಿ ಪ್ರತಿ ವರ್ಷ ಕೊಡುವ ‘ಗವಿಸಿದ್ದ ಎನ್. ಬಳ್ಳಾರಿ’ ಕಾವ್ಯಪ್ರಶಸ್ತಿಯು ಪ್ರಸ್ತುತ ಸಾಲಿನಲ್ಲಿ ದಾವಣಗೆರೆಯ ಡಾ. ಮಹಾಂತೇಶ ಪಾಟೀಲ್ ಅವರ ‘ಚಲಿಸುವ ಮೋಡಗಳು’ ಹಾಗೂ ಮಮತಾ ಅರಸೀಕೆರೆಯವರ ‘ನೀರ ಮೇಲಿನ ಮುಳ್ಳು’ ಹಸ್ತಪ್ರತಿಗೆ ಲಭಿಸಿದೆ.
ಸ್ಪರ್ಧೆಗೆ ಒಟ್ಟು 61 ಹಸ್ತಪ್ರತಿಗಳು ಬಂದಿದ್ದವು. ಇವುಗಳಲ್ಲಿ 10 ಹಸ್ತ ಪ್ರತಿಗಳು ಸೆಮಿ ಫೈನಲ್ ಸುತ್ತಿಗೆ ಆಯ್ಕೆಯಾಗಿದ್ದವು. ಇವುಗಳಲ್ಲಿ 5 ಹಸ್ತಪ್ರತಿಗಳು ಕೊನೆಯ ಸುತ್ತಿಗೆ ಪ್ರವೇಶಿಸಿದವು. ಹಿರಿಯ ಬಂಡಾಯ ಕವಿ, ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಎಚ್.ಎಸ್ ಪಾಟೀಲರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಪ್ರಶಸ್ತಿಯು ತಲಾ 6,000 ನಗದು ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು 2022 ಅಕ್ಟೋಬರ್ 16ರಂದು ಕೊಪ್ಪಳದಲ್ಲಿ ನಡೆಯುವ ‘ಗವಿಸಿದ್ಧ ಎನ್. ಬಳ್ಳಾರಿ’ ಸಾಹಿತ್ಯೋತ್ಸವದಲ್ಲಿ ವಿತರಿಸಲಾಗುವುದು ಎಂದು ಗವಿಸಿದ್ಧ ಎನ್. ಬಳ್ಳಾರಿ ವೇದಿಕೆಯ ಪರವಾಗಿ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸುವ ಅವಕಾಶವನ್ನು ಕನ್ನಡಿಗರಿಗೆ ಕೊಡುವುದಾಗಿ ನಾಡೋಜ ಡಾ. ಮಹೇಶ ಜೋಶಿ ಅವ...
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2022- 23ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿಗಳನ...
ಕನ್ನಡದ ಹೆಸರಾಂತ ಸಾಹಿತಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 131ನೇ ವರ್ಷದ ಜನ್ಮದಿನದ ಪ್ರಯುಕ್ತ ಡಾ. ಮಾಸ್ತ...
©2022 Book Brahma Private Limited.