ಗಾಯನದ ಮಾಧುರ್ಯದ ಹಿಂದೆ ಜೀವನದ ಅಗ್ನಿಕುಂಡವಿದೆ : ಎಚ್ಚೆಸ್ವಿ

Date: 27-03-2023

Location: ಬೆಂಗಳೂರು


ಸುಗಮ ಸಂಗೀತ ಗಾಯಕಿ ಆರ್.ಲೀಲಾವತಿ 90 ಕಾರ್ಯಕ್ರಮದ ಅಂಗವಾಗಿ 'ಹಾಡಾಗಿ ಹರಿದಾಳೆ' ಆತ್ಮಕಥೆ ಕೃತಿ ಬಿಡುಗಡೆ ಸಮಾರಂಭ ಭಾನುವಾರ ಬೆಂಗಳೂರಿನಲ್ಲಿ ನಡೆಯಿತು.

ಕವಿ ಎಚ್‌.ಎಸ್. ವೆಂಕಟೇಶಮೂರ್ತಿ : 'ಕಲಾವಿದರಿಗೂ ಕಷ್ಟಗಳಿರುತ್ತವೆ. ಅದನ್ನು ಮರೆಯಾಗಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಸಂತಸ ತರುವುದೇ ಕಲಾವಿದನ ದೊಡ್ಡ ಗುಣ. ಗಾಯಕಿ ಎಚ್.ಆರ್. ಲೀಲಾವತಿ ಅವರ "ಮುಳ್ಳು ಬೇಲಿಯಲ್ಲಿ ಅರಳಿದ ಮಲ್ಲಿಗೆಯ ಹೂವು" ಎಂಬ ಮಾತು ಸತ್ಯ. ಅವರು ನಡೆದುಬಂದ ದಾರಿ ಅವಲೋಕಿಸಿದರೆ. ನಿಷ್ಠುರವಾದ ಕೆಂಡದ ಹಾಸಿಗೆ ಎಂಬುದು ಅರಿವಿಗೆ ಬರಲಿದೆ. ಯಾರು ಅವರನ್ನು ಕೈಹಿಡಿದು ನಡೆಸಬೇಕಿತ್ತೋ ಅಂತಹ ಗುರುವೇ ಅವರ ಪಾಲಿಗೆ ಮುಳುವಾಗಿದ್ದರು. ಎಲ್ಲಾ ಹಿಂಸೆ, ಅವಮಾನ ಸಹಿಸಿಕೊಂಡೇ ಲೀಲಾವತಿ ಸಾಧನೆ ಮಾಡಿದವರು. ಗಾಯನದ ಮಾಧುರ್ಯ ಗಮನಿಸಿದರೆ ಅವರ ಬದುಕಿನ ಹಿಂದೆ ಈ ರೀತಿಯ ಅಗ್ನಿಕುಂಡವಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ, ಕಣ್ಣೀರು ಹಾಕದೇ ಸಂಗೀತಲೋಕದಲ್ಲಿ ಸಾಧನೆ ತೋರಿದರು' ಎಂದು ಪ್ರಶಂಸಿದರು.

'ಲೀಲಾವತಿ ಕನ್ನಡ ಅಸ್ಮಿತೆಯರಲ್ಲಿ ಒಬ್ಬರು, ಸುಗಮ ಸಂಗೀತದ ಆರಂಭವು ಟಿ.ಕಾಳಿಂಗರಾಯರು, ಬಾಳಪ್ಪ ಹುಕ್ಕೇರಿ ಅವರಿಂದ ಆಗಿತ್ತು. ಆದರೆ, ತಾತ್ವಿಕ ತಳಹದಿ ಕಲಿಸಿದವರು ಲೀಲಾವತಿ ಎಂದು ಬಣ್ಣಿಸಿದರು. ಲೀಲಾವತಿ ಅವರು ಆಕಾಶವಾಣಿ ಹಾಗೂ ತಮ್ಮ ಸಂಗೀತ ಕಛೇರಿಗಳಲ್ಲಿ ಶಿಸ್ತು ತಂದಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಮ್ಮ ಗಾಯಕರೂ ಸಾಗಿದರು. ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ, ಅಶ್ವತ್ ಮೊದಲಾದವರು ತಮ್ಮ ಕಛೇರಿಗಳಲ್ಲಿ ಭಾವಗೀತೆ ಬಿಟ್ಟು ಬೇರೆ ಹಾಡಲಿಲ್ಲ. ಈ ಪರಂಪರೆಯ ಆದಿಬಿಂದು ಲೀಲಾವತಿ, ಸುಗಮ ಸಂಗೀತ ಕ್ಷೇತ್ರವನ್ನೂ ಮೇಲ್ಮಟ್ಟಕ್ಕೆ ಏರಿಸಿದ್ದಾರೆʼ ಎಂದು ಹೇಳಿದರು.

ನಿರ್ದೇಶಕ ಟಿ.ಎನ್.ಸೀತಾರಾಂ, 'ಲೀಲಾವತಿ ಅವರ ಗಾಯನಕ್ಕೆ ಕುವೆಂಪು ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲೀಲಾವತಿ ಅವರ ಹಾಡುಗಳು ಬಾಳಿನ ಪುಟಗಳಿಗೆ ನೇರವಾಗಿ ನಮ್ಮನ್ನು ಕರೆದೊಯ್ಯುತ್ತವೆ' ಎಂದು ತಿಳಿಸಿದರು.

ವಿಕಾಸ ಪ್ರಕಾಶನದ ಪೂರ್ಣಿಮಾ, 'ಲೀಲಾವತಿ ಧೈರ್ಯ ದಿಂದ ತಮ್ಮ ಜೀವನದಲ್ಲಿ ಆದ ಬದುಕಿನ ಕಥನ ಹೇಳಿಕೊಂಡಿದ್ದಾರೆ. ಅವರದ್ದು ಮಾದರಿ ವ್ಯಕ್ತಿತ್ವ” ಎಂದು ಹೇಳಿದರು.

'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ವಚನಸಿರಿ ಕೃತಿ ಹಾಗೂ ಶ್ರೀರಾಘವೇಂದ್ರ ಲೀಲೆ ಭಾವಗೀತೆಗಳ ಸಿ.ಡೀ ಬಿಡುಗಡೆ ಮಾಡಿದರು.

MORE NEWS

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...

ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ - ಬಿ. ಪುರಂದರ ಭಟ್

16-04-2024 ಬೆಂಗಳೂರು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಅಂಬ...

'ಮಕ್ಕಳ ಕತೆಗಳ ಅನನ್ಯ ಪ್ರೀತಿ ರಾಮೇಂದ್ರ ಕುಮಾರ' ಕುರಿತು ವಿಚಾರಣ ಸಂಕಿರಣ 

15-04-2024 ಬೆಂಗಳೂರು

ಬೆಂಗಳೂರು: ಜೀವನಾನುಭವವನ್ನು ವಿಸ್ತರಿಸುವ, ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವ ಕೆಲಸವನ್ನು ಹಿಂದೆ‌ ಅಜ್ಜಿ...