ಗುವಾಹತಿ ಸಾಹಿತ್ಯ ಮೇಳದಲ್ಲಿ  ಲಾರಿ ಚಾಲಕನ ಆತ್ಮಕಥನ, ದಾಖಲೆ ಮಾರಾಟ 

Date: 20-01-2021

Location: ಬೆಂಗಳೂರು


ಲಾರಿ ಚಾಲಕರೊಬ್ಬರು ತಮ್ಮ ವೃತ್ತಿ ಜೀವನದಲ್ಲಿಯ ಕೆಲ ಕುತೂಹಲಕಾರಿ ಪ್ರಸಂಗಗಳ ಕುರಿತು ಬರೆದ ಆತ್ಮಕಥನ ಮಾದರಿಯ ಕೃತಿಯು ಇತ್ತೀಚೆಗೆ ಗುವಾಹತಿಯಲ್ಲಿ ಜರುಗಿದ 33ನೇ ಗುವಾಹತಿ ಸಾಹಿತ್ಯ ಮೇಳದಲ್ಲಿ ಸುಮಾರು 1500ಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿ, ಭಾರತೀಯ ಪುಸ್ತಕ ಲೋಕದ ಗಮನ ಸೆಳೆದಿದೆ.

'Life of a Driver - Cabinor Ipare', ಕೃತಿಯು ಆಸ್ಸಾಂ ಭಾಷೆಯಲ್ಲಿ ಬರೆದಿದ್ದು, ಮೇಳದಲ್ಲಿದ್ದ ಸುಮಾರು 200ಕ್ಕೂ ಅಧಿಕ ಪುಸ್ತಕಗಳ ಪೈಕಿ ಆಸ್ಸಾಂ ಮೂಲದ ‘ರೂಪಮ್ ದತ್ತ’ ಅವರ 488 ಪುಟದ ಈ ಕೃತಿಯು ಅತಿ ಹೆಚ್ಚು ಮಾರಾಟದ ದಾಖಲೆ ನಿರ್ಮಿಸಿದೆ.

ಕಳೆದ 15 ವರ್ಷದಿಂದ ಲಾರಿ ಚಾಲಕರಾಗಿದ್ದ ರೂಪಮ್ ದತ್ತ, ಆಸ್ಸಾಂ ಸೇರಿದಂತೆ ಇತರೆ ರಾಜ್ಯಗಳಲ್ಲೂ ಲಾರಿ ಚಾಲನೆ ಮಾಡಿದ್ದು, ಆಗ ಪ್ರಯಾಣಿಕರೊಂದಿಗೆ ನಡೆಸಿದ ಸಂವಾದಗಳು, ಅನುಭವಗಳು ಇಲ್ಲಿಯ ವಿಷಯ ವಸ್ತುಗಳಾಗಿವೆ.

2019ರಲ್ಲಿ, ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ತಮ್ಮ ಅನುಭವಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಓದುಗರಿಂದ ಬಂದ ಪ್ರೋತ್ಸಾಹದ ಮಾತುಗಳಿಂದ ಪ್ರೇರಿತರಾದ ಅವರು ಕೃತಿ ರಚನೆಯತ್ತ ಗಮನ ಹರಿಸಿದ್ದರ ಫಲವೇ ಈ ಕೃತಿ ಎನ್ನುತ್ತಾರೆ ರೂಪಮ್ ದತ್ತ.

‘ಲಾರಿ ಚಾಲಕರೆಂದರೆ ಬಹುತೇಕರು ಮೂಗು ಮುರಿಯುತ್ತಾರೆ. ಆದರೆ, ಅದು ತುಂಬಾ ಜವಾಬ್ದಾರಿಯುತ ವೃತ್ತಿ. ಅಷ್ಟೇ ಅಪಾಯಕಾರಿ ಎಂದು ಪ್ರತಿಕ್ರಿಯಿಸಿರುವ ಅವರು, ಗುವಾಹತಿಯ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ. ನಂತರ ಅವರು ಆಸ್ಸಾಂನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಉನ್ನತ ಅಭ್ಯಾಸಕ್ಕೆ ಹಣದ ಕೊರತೆ ಇದ್ದರಿಂದ ಅಲೆಕಾಲಿಕ ವೃತ್ತಿಗಳನ್ನು ಕೈಗೊಂಡು, ಅಂತಿಮವಾಗಿ ಲಾರಿ ಚಾಲಕರಾಗಿ ಬದುಕು ನಿರ್ವಹಿಸಿದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...