ಹೇಗೆ ಮನುಷ್ಯನಾಗಬೇಕು ಎನ್ನುವುದನ್ನು ತಿಳಿಸುವ ಕೃತಿ ʻಹೆಮ್ಮಂಡಹಳ್ಳಿಯಿಂದ; ಬಸವರಾಜ ಕಲ್ಗುಡಿʼ

Date: 03-08-2025

Location: ಬೆಂಗಳೂರು


ಬೆಂಗಳೂರು: ತೊಳಸಿ ಪ್ರಕಾಶನದ ವತಿಯಿಂದ ಹೆಮ್ಮಂಡಹಳ್ಳಿ ಜಿ ಮುನಿಸ್ವಾಮಿ ಅವರ "ಹೆಮ್ಮಂಡಹಳ್ಳಿಯಿಂದ" (ಆತ್ಮಕಥನ) ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ಬಸವನಗುಡಿಯ ನ್ಯಾಷನಲ್‌ ಕಾಲೇಜಿನ ಎಚ್‌.ಎನ್.‌ ಮಲ್ಟಿ ಮೀಡಿಯಾ ಸಭಾಂಗಣದಲ್ಲಿ 2025 ಆ. 03 ಭಾನುವಾರದಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತ್ಯ ವಿಮರ್ಶಕ ಮತ್ತು ಚಿಂತಕ ಡಾ. ಬಸವರಾಜ ಕಲ್ಗುಡಿ ಅವರು, "ಮೇಲ್ವರ್ಗ ಹಾಗೂ ಕೆಳವರ್ಗಗಳ ಸಂಘರ್ಷದಲ್ಲಿ ವ್ಯಕ್ತಿಗಳು ಹೇಗೆ ಮನುಷ್ಯರಾಗಬೇಕು ಎನ್ನುವುದನ್ನು ದಲಿತ ಕಥನಗಳು ನಮ್ಮ ಮುಂದಿಡುತ್ತವೆ. ಅದಕ್ಕೆ ಒಂದು ಉತ್ತಮವಾದ ಮಾದರಿ ಕೃತಿ ʻಹೆಮ್ಮಂಡಹಳ್ಳಿಯಿಂದʼ. ಇಲ್ಲಿನ ಪ್ರತಿಯೊಂದು ಪುಟದ ಬರವಣಿಗೆಗಳು ಕತೆಗಳಾಗಿ, ಭಾಷೆಯ ಜೀವಂತಿಕೆಯ ಸಾಕ್ಷಿಯಾಗಿ ನಮ್ಮ ಮುಂದೆ ನಿಲ್ಲುತ್ತವೆ," ಎಂದರು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕವಿ ಮತ್ತು ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು, "ಲೇಖಕನು ಮೊದಲ ಕೆಲವು ಪುಟಗಳಲ್ಲಿ ತನ್ನ ಬಾಲ್ಯದ ಜೀವನ, ನೋವು-ನಲಿವು, ಹಸಿವು, ಬಡತನ, ಅಸ್ಪ್ರಶ್ಯತೆಯಿಂದ ಅನುಭವಿಸಿದ ಕೆಲವು ವಿಚಾರಗಳನ್ನು ಮನಸ್ಸಿಗೆ ತಟ್ಟುವಾಗೆ ಕಟ್ಟಿದ್ದಾರೆ. ಮೇಲ್ವರ್ಗದ ಜನರು ಎಷ್ಟರಮಟ್ಟಿಗೆ ದಲಿತರ ಜೀವನವನ್ನು ಹಿಂಡಿ ಹಿಪ್ಪೆಕಾಯಿ ಮಾಡಿದ್ದಾರೆ ಎನ್ನುವುದನ್ನು ನಾವು ಇವರ ಆತ್ಮಕತೆಯ ಮೂಲಕ ತಿಳಿದುಕೊಳ್ಳಬಹುದು. ಇನ್ನು ಪ್ರಸಕ್ತ ದಿನಗಳಲ್ಲಿ ನಡೆಯುವ ಬೆಳವಣಿಗೆಗೆಳನ್ನು ನೋಡುವಾಗ ಅಸ್ಪ್ರಶ್ಯತೆ ಅನ್ನುವುದು ಎಷ್ಟರ ಮಟ್ಟಿಗೆ ನಮ್ಮ ಸಮಾಜಕ್ಕೆ ಪರಿಣಾಮ ಬೀರುತ್ತದೆ ಅನ್ನುವುದನ್ನು ಕಾಣಬಹುದು," ಎಂದು ಹೇಳಿದರು.

ಕೃತಿ ಕುರಿತು ಲೇಖಕ ಹಾಗೂ ಚಿಂತಕ ಶ್ರೀ ಚ.ಹ ರಘುನಾಥ ಮಾತನಾಡಿ, "ಅಸ್ಪ್ರಶ್ಯತೆ ಹೆಚ್ಚಾಗಿ ಇದ್ದಂತಹ ಕಾಲಘಟ್ಟದಲ್ಲೇ ಎಲ್ಲವನ್ನೂ ಮೀರಿ ಶಿಕ್ಷಣಕ್ಕಾಗಿ ಮಾಡಿದ ಹೋರಾಟ, ಶಿಕ್ಷಣವನ್ನ ಪಡೆಯುತ್ತೇನೆ ಎನ್ನುವಂತಹ ಹೆಮ್ಮಂಡಳಿಯವರಿಗಿದ್ದಂತಹ ಓದಿನ ಹಸಿವನ್ನು ಕೃತಿಯಲ್ಲಿ ಕಾಣಬಹುದು. ಪ್ರಸಕ್ತ ದಿನಗಳಲ್ಲಿ ಅಂತಹ ಕಾಲಘಟ್ಟನೆಗಳ ಜೀವನವನ್ನ ಖಂಡಿತವಾಗಿಯೂ ಊಹಿಸಲು ಸಾಧ್ಯವಿಲ್ಲ. ಇಂದಿನ ತಲೆಮಾರಿನ ಮಕ್ಕಳು ಇಂತಹ ಹಸಿವನ್ನು ಅನುಭವಿಸಿಲ್ಲ. ಅಂತಹ ನೋವಿನ ಜೀವನವನ್ನು ತಿಳಿಯಲು ಜಿ ಮುನಿಸ್ವಾಮಿ ಅವರ "ಹೆಮ್ಮಂಡಹಳ್ಳಿಯಿಂದ" ಕೃತಿಯು ಬಹು ಮುಖ್ಯವಾಗಿದೆ," ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಿಮರ್ಶಕ ಎಚ್.ದಂಡಪ್ಪ ಹಾಗೂ ಲೇಖಕ ಹೆಮ್ಮಂಡಹಳ್ಳಿ ಜಿ ಮುನಿಸ್ವಾಮಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬುಕ್‌ ಬ್ರಹ್ಮ ಯುಟ್ಯೂಬ್‌ ಚಾನೆಲ್‌ ಮೂಲಕ ವೀಕ್ಷಿಸಲು ಈ ಲಿಂಕ್‌ ಅನ್ನು ಬಳಸಿ

MORE NEWS

`Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ; ಉಲ್ಲಾಸ್‌ ಕಾರಂತ್

07-12-2025 ಬೆಂಗಳೂರು

ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...