Date: 01-10-2024
Location: ಬೆಂಗಳೂರು
ಬೆಂಗಳೂರು: ಕನ್ನಡದ ಅಪರೂಪದ ವಿದ್ವಾಂಸ, ಹಿರಿಯ ಇತಿಹಾಸಕಾರ, ಶಾಸನ ತಜ್ಞ, ಸಂಗೀತ ಸಾಹಿತ್ಯ ಸಂಸ್ಕೃತಿಗಳ ಮೇರು ಡಾ ಎಚ್.ಎಸ್. ಗೋಪಾಲರಾವ್ ಅವರು ಇಂದು(ಅ. 01) ನಿಧನರಾಗಿದ್ದಾರೆ.
ಎಚ್.ಎಸ್. ಗೋಪಾಲರಾವ್ ಅವರ ಪರಿಚಯ: 1946ರ ನವೆಂಬರ್ 18ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದ, ಎಚ್.ಎಸ್. ಗೋಪಾಲರಾವ್ ಅವರು ಎಲೆಕ್ಟ್ರಿಕಲ್ ಇಂಜನಿಯರಿಂಗ್ ಡಿಪ್ಲೊಮ ಮುಗಿಸಿ, ಮೈಸೂರು ವಿವಿ ಕನ್ನಡ ಎಂ.ಎ. (1984- ಎರಡು ಚಿನ್ನದ ಪದಕ) ಪದವಿ ಪಡೆದದಿದ್ದರು. ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು ಒಂದು ಸಾಂಸ್ಕೃತಿಕ ಅಧ್ಯಯನ ಕುರಿತು ಪಿಎಚ್. ಡಿ. ಪದವಿಯನ್ನು ಪಡೆದಿದ್ದರು. (ಮೈಸೂರು ವಿ ವಿ 1991). ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್, ಕೆಪಿಟಿಸಿಎಲ್ ನಿಯಮಿತ, (ಕನ್ನಡ ಸಮನ್ವಯಾಧಿಕಾರಿಯಾಗಿ) ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ಶಾಸ್ತ್ರ ಬೋಧಕರಾಗಿ ಕೆಲಸ ನಿರ್ವಹಿಸಿದ್ದರು.
ಜೇನು ನಂಜು, ಗತಿ, ಬಿನ್ನ (ಕಾದಂಬರಿಗಳು), ಗುಲುಟ್ಟಿ ಮಾನ್ನುಟ್ಟಿ (ಮಕ್ಕಳ ನಾಟಕ), ನಮ್ಮ ನಾಡು ಕರ್ನಾಟಕ, ಬಾದಾಮಿ ಐಹೊಳೆ ಪಟ್ಟದ ಕಲ್ಲು, ಉಡುಪಿ, ಕರ್ನಾಟಕ ಏಕೀಕರಣ ಇತಿಹಾಸ, ಇತಿಹಾಸದ ಅಧ್ಯಯನ ಅಂದು ಇಂದು, ಗೋದಾವರಿಯ ಆಸುಪಾಸಿನಲ್ಲಿ (ಮಹಾರಾಷ್ಟ್ರದ ಪ್ರವಾಸ 1999), ಚಂಗಾಳ್ವರು, ರಾಶಿ, ಶಾಸನ ಸಂಕಲನ, ಭಾರತೀಯ ಬಹುಮುಖಿ ಸಂಸ್ಕೃತಿ (ಅನುವಾದ) ಇದು ನಮ್ಮ ಕರ್ನಾಟಕ, ಒಂದುಗೂಡಿದ ಕರ್ನಾಟಕ, ಇತಿಹಾಸದ ಇಣುಕುನೋಟ, ರಾಷ್ಟ್ರಕೂಟ ಶಿಲ್ಪಕಲೆ ಪ್ರಕಟಿತ ಕೃತಿಗಳು.
ವಕೀಲ ರಾಮಪ್ಪನ ಕೈಫಿಯತ್ತು, ಇತಿಹಾಸದ ಪರಾಮರ್ಶೆ, ಸುವರ್ಣ ಕರ್ನಾಟಕ ಶಿಲ್ಫಕಲೆ ಮಾಲೆಯಲ್ಲಿ 14 ಪುಸ್ತಕಗಳ ಸಂಪಾದನೆ. ತಮಿಳು ನಾಡಿನ ಶಾಸನಗಳು, ಹಲವು ಸಾಕ್ಷ ಚಿತ್ರಗಳಿಗೆ ವಿಶೇಷ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದರು. ಇವರ 150ಕ್ಕೂ ಹೆಚ್ಚು ಲೇಖನಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿತ್ತು. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಬಾ, ರಾ. ಗೋಪಾಲ್ ದತಿ ನಿಧಿ ಪ್ರಶಸ್ತಿ (2007), ಎರಡನೆಯ ನೆಲಮಂಗಲ ತಾಲ್ಲೂಕು ಸಮ್ಮೇಳನದ ಅಧ್ಯಕ್ಷತೆ (2007), ಶಂಬಾ ಜೋಶಿ ಸಂಶೋಧನಾ ಪ್ರಶಸ್ತಿ (2007), ಕರ್ನಾಟಕ ಏಕೀಕರಣ ಇತಿಹಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಗಳು ಸಂದಿವೆ.
ಎಚ್.ಎಸ್. ಗೋಪಾಲರಾವ್ ಅವರ ಕೃತಿಗಳ ಕುರಿತ ಮಾಹಿತಿಯನ್ನು ತಿಳಿಯಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ‘ಯುವ ಪುರಸ್ಕಾರ’ ಮತ್ತು ‘ಬಾಲಸಾಹಿತ್ಯ ಪು...
ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ನೀಡುವ ದ್ವಿತೀಯ ವರ್ಷದ ಹ.ಕ.ರಾಜೇಗೌಡ ಪ್ರಶಸ್ತಿಗೆ ಮೈಸೂರಿನ ವಿದ್ವಾಂಸ ಡಾ.ಟಿ.ವಿ. ವೆ...
ಉಡುಪಿ : 'ಬೇರೆ ಬೇರೆ ಭಾಷೆಗಳಲ್ಲಿರುವ ಸಾಹಿತ್ಯಗಳ ನಡುವೆ ವಿನಿಮಯಗಳು ನಡೆಯುವ ಮೂಲಕವಷ್ಟೇ ಯಾವುದೇ&nbs...
©2025 Book Brahma Private Limited.