ಹಿರಿಯ ಕವಿ ದೇಶಪಾಂಡೆ ಸುಬ್ಬರಾಯರು ಇನ್ನಿಲ್ಲ

Date: 03-05-2021

Location: ಬೆಂಗಳೂರು


ಹಿರಿಯ ಕವಿ, ಲೇಖಕ ದೇಶಪಾಂಡೆ ಸುಬ್ಬರಾಯರು ಸೋಮವಾರ (02 ಮೇ) ಧಾರವಾಡದಲ್ಲಿ ನಿಧನರಾದರು.

ಬೇಂದ್ರೆಯವರ ಕಾವ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ದೇಶಪಾಂಡೆ, ಮೂಲತಃ ಮಹಾರಾಷ್ಟ್ರದ ಪುಣೆ ಸಮೀಪದ 'ವಠಾರ' ಗ್ರಾಮದವರು. ರೈಲ್ವೆ ಇಲಾಖೆಯಲ್ಲಿ ನಾಲ್ಕು ದಶಕಗಳ ಕಾಲ ಕಾರ್ಯನಿರ್ವಹಿಸಿ ಉನ್ನತ ಅಧಿಕಾರಿಯಾಗಿ ನಿವೃತ್ತರಾಗಿದ್ದರು.

‘ನಾಲ್ಕು ಹಿಡಿ ಬೆಂಕಿ’, ‘ಬೊಗಸೆ ತುಂಬದ ಬದುಕು’, ‘ಕಣ್ಣೀರು ಕಳಕೊಂಡವನು’, ‘ಜಫರನೆ ಇಲ್ಲ ದೆಹಲಿಯಲ್ಲಿ’, ‘ಮೋರೆಯಾಚೆಯ ಮುಖ’, ‘ಫೀನಿಕ್ಸ್ ಹಾರಿದ ಹಾದಿ’ ಸೇರಿದಂತೆ ಹಲವು ಕವನ ಸಂಕಲನಗಳನ್ನು ಹಾಗೂ ‘ಕನ್ನಡ ಸಾಹಿತ್ಯದಲ್ಲಿ ನವ್ಯ ಪ್ರಜ್ಞೆ’, ‘ಸಂತೆಯಲ್ಲೊಂದು ಮನೆ’, ‘ಮಾಸದ ವ್ಯಾಸಂಗ’ ಎಂಬ ಗದ್ಯ ಕೃತಿಗಳನ್ನು ರಚಿಸಿದ್ದರು. ಇವರ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಮುದ್ದಣ ಕಾವ್ಯ ಪ್ರಶಸ್ತಿ ಲಭಿಸಿತ್ತು.

MORE NEWS

ಸಾಮಾಜಿಕ ಕಳಕಳಿಯ ಲೇಖಕ ವಿಠ್ಠಲ ಭಂಡ...

08-05-2021 ಬೆಂಗಳೂರು

ದೇಶದ ಪ್ರಜಾಪ್ರಭುತ್ವ ಮೌಲ್ಚಗಳನ್ನು ಪ್ರತಿಪಾದಿಸುವ ‘ಸಂವಿಧಾನದ ಓದು’ ಚಳವಳಿಯ ಮೂಲಕ ರಾಜ್ಯದಾದ್ಯಂತ ಚಿರಪ...

ಪ್ರಗತಿಪರ ಸಾಹಿತಿ ಡಾ. ಜಿ. ಭಾಸ್ಕರ...

06-05-2021 ‌ಉಡುಪಿ

ವೈಚಾರಿಕ ಹಾಗೂ ಪ್ರಗತಿಪರ ಸಾಹಿತಿ ಎಂದೇ ಗುರುತಿಸಿಕೊಂಡಿದ್ದ ಡಾ. ಜಿ. ಭಾಸ್ಕರ ಮಯ್ಯ ಅವರು ಗುರುವಾರ ಬೆಳಗ್ಗೆ ನಿಧನರಾಗಿ...

ಜನಪದರ ನಂಬಿಕೆಗಳು ಪ್ರಾಕೃತಿಕ  ಪರಿ...

05-05-2021 ಜೂಮ್ ಆಪ್

ಜನಪದರ ನಂಬಿಕೆಗಳು ಮೌಢ್ಯವಲ್ಲ. ಅವು ಪ್ರಕೃತಿ ಪ್ರೇಮದ ಆರೋಗ್ಯಕರ ಬೇರುಗಳು ಎಂದು ಜಾನಪದ ತಜ್ಞೆ ಡಾ. ಎ.ಎನ್. ಸಿದ್ಧೇಶ್ವ...